ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ (Valmiki Development Corporation) ಕೇವಲ ಮಂತ್ರಿಯಿಂದ ಆಗಿರೋದಲ್ಲ. ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿರುವುದು ಎಂದು ಸಂಸದ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಗಂಭೀರ ಆರೋಪ ಮಾಡಿದರು.
ಸಚಿವ ನಾಗೇಂದ್ರ (Nagendra) ರಾಜೀನಾಮೆ ಕುರಿತು ಮಾತನಾಡಿ, ಈಗಾಗಲೇ ಪ್ರಕರಣದಲ್ಲಿ ಸುಮಾರು 80.85 ಕೋಟಿ ರವಾನೆ ಆಗಿರೋದು ಗೊತ್ತಿದೆ. ಪ್ರಕರಣದಲ್ಲಿ ಸರ್ಕಾರದ ಈ ನಿರ್ಧಾರ ಮೊದಲೇ ಆಗಬೇಕಿತ್ತು. ಇದು ಕೇವಲ ಮಂತ್ರಿಯಿಂದ ಆಗಿರೋದಲ್ಲ. ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿರೋದು. ರಾಜೀನಾಮೆ ಸಂಬಂಧ ಸಚಿವರಿಗೆ ನಾನು ಹೇಳಿಲ್ಲ, ನಾನು ಹೇಳಿಲ್ಲ ಅಂತಾರೆ. ಆದರೆ ಇದು ಡ್ರಾಮಾ. ಮಂತ್ರಿಗೆ ರಾಜೀನಾಮೆ ನೀಡಿ ಅನ್ನೋ ಧೈರ್ಯ ಇವರಿಗಿಲ್ಲ. ಕಾರಣ ಇದರಲ್ಲಿ ದೊಡ್ಡ ಮಟ್ಟದ ಕೈಗಳಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ
ಮಾರ್ಚ್‌ನಲ್ಲಿ ಪ್ರಕರಣ ಆಗಿರೋದನ್ನ ಯಾಕೆ ಮುಚ್ಚಿಟ್ಟಿದ್ದಾರೆ? ಮಾಧ್ಯಮದಲ್ಲಿ ಬರದಿದ್ದರೆ ಮುಚ್ಚಿ ಹಾಕುತ್ತಿದ್ದರು. ಒಳಹೊಕ್ಕು ತನಿಖೆ ಆಗಬೇಕು. ಇವರ ಗಮನಕ್ಕೆ ಬಂದೇ ಅಕ್ರಮ ಆಗಿದೆ. ಹಣ ಒಂದು ಗಂಟೆಯಲ್ಲಿ ಬಿಡುಗಡೆಯಾಗಲು ಸಹಾಯ ಯಾರು ಮಾಡಿದ್ದಾರೆ? ತೆಲಂಗಾಣಕ್ಕೆ ಹೋಗಿರೋ ಹಣ. ಅಲ್ಲಿಗೆ ಹೋಗಿದ್ರೆ ಅದರ ಜವಾಬ್ದಾರಿ ನಿರ್ವಹಿಸಿದವರು ಯಾರು ಎಂದು ಪ್ರಶ್ನಿಸಿದರು.
ಬೆಂಗಳೂರು ಗ್ರಾಮಾಂತರ ಗೆಲುವು ಜನರ ತೀರ್ಮಾನ. ಯಾವ ತಂತ್ರ ಕುತಂತ್ರ ಮುಖಾಂತರ ಚುನಾವಣೆ ನಡೆಸಿಲ್ಲ. ಜನ ಗೆಲ್ಲಿಸಿದ್ದಾರೆ. ವಾಲ್ಮೀಕಿ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ ಎಂದರು.
ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಸಚಿವ ಆಗೋದಕ್ಕಿಂತ ಜನತೆಯ ಸಮಸ್ಯೆಗೆ ಪರಿಹಾರ ನೀಡಬೇಕು. ನೀರಾವರಿ ವಿಷಯದಲ್ಲಿ ಸ್ಥಗಿತ ಆಗಿರೋದಕ್ಕೆ ಪರಿಹಾರ ನೀಡಬೇಕು. ಮಂತ್ರಿಸ್ಥಾನ ಸೆಕೆಂಡರಿ. ಕೆಂದ್ರ ಸರ್ಕಾರಕ್ಕೆ ಈಗಿನ ಪರಿಸ್ಥಿತಿಯಲ್ಲಿ ಮುಜುಗರ ತರಲು ಆಗಲ್ಲ. ಹಾಗಾಗಿ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ನಾಗೇಂದ್ರ
ಚನ್ನಪಟ್ಟಣ ಉಪಚುನಾವಣೆಗೆ ಇನ್ನೂ ಸಮಯಾವಕಾಶವಿದೆ. ಈ ಬಗ್ಗೆ ನಾನು ಸಿ.ಪಿ.ಯೋಗೇಶ್ವರ್ ಕುಳಿತು ಮಾತನಾಡಿ ತೀರ್ಮಾನ ಮಾಡ್ತೀವಿ ಎಂದು ತಿಳಿಸಿದರು. ಅಲ್ಲದೇ, ಇಂಡಿಯಾ ಒಕ್ಕೂಟ ವಿಪಕ್ಷದಲ್ಲಿ ಕೂರಲೇಬೇಕಲ್ಲ. ಜನ ಅವರನ್ನ ವಿಪಕ್ಷದಲ್ಲಿ ಕೂರಿ ಅಂತಾನೇ ಹೇಳಿದ್ದಾರೆ. ಕೂರಲೇ ಬೇಕಲ್ಲ ಎಂದು ಟಾಂಗ್ ಕೊಟ್ಟರು.