ಬೆಂಗಳೂರು: ನಮ್ಮ ನಾಯಕರು ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂದು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagouda Daddal) ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಇಂದು ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಅವರು, ಇದರ ಹಿಂದೆ ದೊಡ್ಡ ಜಾಲವೇ ಇದೆ. ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿದೆ. ಎಸ್‍ಐಟಿ ತನಿಖೆ ನಡೆಯುತ್ತಿದೆ. ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಯಾರೇ ಕರೆದರೂ ಹೋಗುತ್ತೇನೆ ಸಹಕಾರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಇಡೀ ಪ್ರಕರಣದಲ್ಲಿ ನನ್ನದು ಯಾವ ಪಾತ್ರವೂ ಇಲ್ಲ. ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಚುನಾವಣಾ ನೀತಿ ಸಂಹಿತೆ ಬಂತು. ಆದ್ದರಿಂದ ನಾನು ಯಾವುದೇ ಸಭೆ ನಡೆಸಿಲ್ಲ. ನೀತಿ ಸಂಹಿತೆ ಮುಗಿದಿದೆ ಈಗ ಎಲ್ಲಾ ಮಾಹಿತಿ ಪಡೆಯುತ್ತೇನೆ ಎಂದರು.
ನನ್ನ ಯಾವ ಪಾತ್ರವೂ ಇಲ್ಲಾ. ವಾಟ್ಸಪ್ ಚಾಟ್ ಅಥವಾ ಯಾವುದೇ ಸಾಕ್ಷ್ಯ ಇದ್ದರೂ ಎಲ್ಲವೂ ತನಿಖೆಯಲ್ಲಿ ಬಹಿರಂಗ ಆಗಲಿದೆ. ಇಡಿ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ದದ್ದಲ್ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.ಇದನ್ನೂ ಓದಿ: ನಾಗೇಂದ್ರ ಬೆನ್ನಲ್ಲೇ ದದ್ದಲ್, ಬೋಸರಾಜು ರಾಜೀನಾಮೆಗೆ JDS ಒತ್ತಾಯ
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣ ಸಂಬಂಧ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿರುದ್ಧ ಆರೋಪ ಕೇಳಿಬಂದಿತು. ಅಲ್ಲದೇ ದದ್ದಲ್ ಕೂಡ ರಾಜೀನಾಮೆ ನಿಡುವಂತೆ ಜೆಡಿಎಸ್ ಆಗ್ರಹ ಮಾಡಿತ್ತು.