– ಪ್ರಾಥಮಿಕ ತನಿಖೆಯಲ್ಲಿ 87 ಕೋಟಿ ರೂ. ವರ್ಗಾವಣೆ
– ಅಕೌಂಟೆಂಟ್ ಪರುಶುರಾಮ್ ಕಚೇರಿಗೆ ಬೀಗ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸಾಫ್ಟ್‌ವೇರ್ ಕಂಪನಿಯೊಂದರ (Information Technology) ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಹೌದು. 87 ಕೋಟಿ ರೂ.ಗಳನ್ನು ಐಟಿ ಕಂಪನಿಯೊಂದರ 14 ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ (Money Transfer) ಆಗಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹಿಂದೂ ಯುವಕನ ಮೇಲೆ ಹಲ್ಲೆ ಕೇಸ್ – ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ ಅಮಾನತು
ಯೂನಿಯನ್ ಬ್ಯಾಂಕ್‌ನ ಎಂ.ಜಿ. ರಸ್ತೆಯ ಶಾಖೆಯಲ್ಲಿ ನಿಗಮದ ಬ್ಯಾಂಕ್ ಖಾತೆ ಇದೆ. ಆ ಖಾತೆಯಲ್ಲಿ ನಿಗಮವು 187 ಕೋಟಿ ರೂ. ಹಣವನ್ನು ಇರಿಸಿತ್ತು. ಮಾರ್ಚ್ 1 ರಿಂದ ಮಾರ್ಚ್ 31ರ ಅವಧಿಯಲ್ಲಿ 87 ಕೋಟಿ ಮೊತ್ತವನ್ನು ಯೂನಿಯನ್ ಬ್ಯಾಂಕ್‌ನ ಬೇರೆ ಶಾಖೆಗಳ ಕೆಲವು ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಲ್ಲಿಂದ ಐಟಿ ಕಂಪನಿಯೊಂದರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರಿಗೆ ನಿಗಮದ ಅಧಿಕಾರಿಗಳು ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿದೆ ಇದೆ ಎನ್ನಲಾಗುತ್ತಿದೆ.
ನಿಗಮದ ಖಾತೆಯಲ್ಲಿರುವ ಇನ್ನೂ 100 ಕೋಟಿ ರೂ. ವರ್ಗಾಯಿಸುವ ಪ್ರಯತ್ನಗಳೂ ನಡೆದಿದ್ದವು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಮಧ್ಯೆ ಅಸಮಾಧಾನ ಉಂಟಾಗಿತ್ತು.ಇದರಿಂದಾಗಿ 100 ಕೋಟಿ ರೂ. ವರ್ಗಾವಣೆ ಯತ್ನಕ್ಕೆ ಹಿನ್ನಡೆಯಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಹಿಂದೂ ಯುವಕನ ಮೇಲೆ ಹಲ್ಲೆ ಕೇಸ್ – ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ ಅಮಾನತು
ಈ ಪ್ರಕರಣವನ್ನು ಈಗ ಸಿಐಡಿಗೆ ನೀಡಿರುವುದರಿಂದ ತನಿಖೆಯಲ್ಲಿ ಸಂಪೂರ್ಣ ಅಕ್ರಮ ಹಣ ವರ್ಗಾವಣೆಯ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಕಚೇರಿಗೆಬೀಗ:
ಅವ್ಯವಹಾರ ಬೆನ್ನಲ್ಲೇ ನಿಗಮದ ಎಲ್ಲಾ ಕಚೇರಿ ತೆರೆಯಲಾಗಿದ್ದು ಅಕೌಂಟೆಂಟ್ ಪರುಶುರಾಮ್ ಕಚೇರಿ ಬೀಗ ಹಾಕಲಾಗಿದೆ. ಕಳೆದ ಶುಕ್ರವಾರ ಲಾಕ್ ಆಗಿರುವ ಕಚೇರಿ ಇವತ್ತಿನವರೆಗೂ ಓಪನ್ ಆಗಿಲ್ಲ.
ಅಧೀಕ್ಷಕ ಚಂದ್ರಶೇಖರನ್ ಅವರು ತನ್ನ ಡೆತ್‌ನೋಟ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಜೆಜೆ ಮತ್ತು ಅಕೌಂಟೆಂಟ್ ಪರಶುರಾಮ್ ಹೆಸರು ಬರೆದಿದ್ದರು. ಪದ್ಮನಾಭ ಜೆಜೆ ಕಚೇರಿ ಓಪನ್ ಇದ್ದರೂ ಅವರು ಇನ್ನೂ ಕಚೇರಿಗೆ ಬಂದಿಲ್ಲ. ಚಂದ್ರಶೇಖರ್ ಮೃತಪಟ್ಟ ನಂತರ ಪರುಶುರಾಮ್ ಅವರು ಕಚೇರಿಗೆ ಬಂದೇ ಇಲ್ಲ.