ಪ್ರೀತಿ (Love) ಎಂಬುದು ಮಾಯೆ.. ಅದು ಹುಟ್ಟಿದಾಗ ಗಾಳಿಯಲ್ಲಿ ತೇಲಾಡುವ ಅನುಭವ… ಎದೆಯಲ್ಲಿ ಪುಳಕ, ಅಸಹನೀಯ ಭಾರ. ಇದರ ಕೊನೆಯ ಹಂತವೇ ಮದುವೆ. ಆದ್ರೆ ಅದೆಷ್ಟು ಪ್ರೀತಿಗಳು ಮದುವೆಯವರೆಗೆ ತಲುಪುತ್ತವೆ ಹೇಳಿ? ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಹಿರಿಯರ ಅನುಮತಿಯೊಂದಿಗೆ ಆ ಪ್ರೀತಿಯನ್ನು ಮದುವೆಯ ಪೀಠದ ವರೆಗೆ ತೆಗುದುಕೊಂಡು ಹೋಗಬೇಕು. ಇಲ್ಲದಿದ್ದರೆ ನಿಮ್ಮ ಕೇವಲ ಆಕರ್ಷಣೆಯಿಂದ ಹುಟ್ಟಿದ ಭಾವನೆಯಾಗುತ್ತದೆ ಅಷ್ಟೇ.
ಪ್ರೀತಿ ಯಾರಿಗೆ ಯಾವಾಗ ಬೇಕಾದರೂ ಹುಟ್ಟಬಹುದು. ಕೆಲವರಿಗೆ ದೇಹ ಸೌಂದರ್ಯ (Beauty) ಇಷ್ಟ. ಇನ್ನು ಕೆಲವರು ಅವರ ಗುಣಕ್ಕೆ ಫಿದಾ ಆಗುತ್ತಾರೆ, ಅದು ಹುಡುಗ ಆಗಿರಬಹುದು… ಹುಡುಗಿಯೂ ಆಗಿರಬಹುದು. ಒಂದಷ್ಟು ಮಂದಿ ತಮ್ಮ ಸೊಬಗಿನಿಂದಲೇ ಆಕರ್ಷಿತರಾಗುತ್ತಾರೆ. ನೀವು ಪ್ರೀತಿಯಲ್ಲಿ ಬಿದ್ದಾಗ ಮೆದುಳಿನಲ್ಲಿ ಸಾಕಷ್ಟು ಪ್ರಕ್ಷುಬ್ಧತೆ ಇರುತ್ತದೆ. ಅದೊಂದು ಮಾನಸಿಕ ಕಾಯಿಲೆಯಂತೆ. ಹೃದಯ ಬಡಿದ ಜೋರಾಗುತ್ತದೆ. ಕೈಕಾಲು ಕೆಲ ಕ್ಷಣಗಳು ಬೆವರುವುದು ಪ್ರೀತಿಯಲ್ಲಿ ಬೀಳುವ ಎಲ್ಲಾ ಲಕ್ಷಣಗಳಾಗಿವೆ. ಹಾಗಾದ್ರೆ ನಾವೇಕೆ ಪ್ರೀತಿಯಲ್ಲಿ ಬೀಳುತ್ತೇವೆ ಅನ್ನೋದನ್ನ ತಿಳಿಯಬೇಕಾದ್ರೆ ಮುಂದೆ ಓದಿ…
Advertisement
Advertisement
ಪ್ರೀತಿಯಲ್ಲಿ ಬೀಳುವುದಕ್ಕೆ ಹಾರ್ಮೋನ್‌ಗಳೇ ಕಾರಣ
ಪ್ರೀತಿಯಲ್ಲಿ ಬೀಳಲು ವಿಶೇಷವಾಗಿ ಕಾರಣವಾದ ನಾಲ್ಕು ಹಾರ್ಮೋನ್‌ಗಳು ಇವೆ. ಆ ಮೂರು ಹಾರ್ಮೋನ್‌ಗಳನ್ನು ನೋಡುವುದಾದರೆ ನೊರ್ಪೈನ್ಫ್ರಿನ್, ಡೋಪಮೈನ್, ಸೆರೊಟೋನಿನ್ ಮತ್ತು ಫೀನೈಲೆಥೈಲಮೈನ್. ಈ ನಾಲ್ಕು ಸೇರಿ ವ್ಯಕ್ತಿಯನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತವೆ.
Advertisement
Advertisement
ನೊರ್ಪೈನ್ಫ್ರಿನ್ ಎಂಬ ಹಾರ್ಮೋನ್ ನೀವು ಇಷ್ಟಪಡುವ ಅಥವಾ ಪ್ರೀತಿಸುವವರನ್ನು ನೋಡಿದಾಗ ಹೃದಯ ಬಡಿತ ಜೋರಾಗುತ್ತದೆ. ಉದಾಹರಣೆಗೆ ತಮಿಳಿನ ʻ96ʼ ಸಿನಿಮಾದಲ್ಲಿ ಬರುವ ಒಂದು ದೃಶ್ಯದಂತೆ. ಹಾಗೆಯೇ ಡೊಪಮೈನ್ ತುಂಬಾ ಸಂತೋಷ ಉಂಟು ಮಾಡುತ್ತದೆ. ಆದ್ರೆ ಇವುಗಳಲ್ಲಿ ಮುಖ್ಯವಾದದ್ದು ಸೆರೊಟೋನಿನ್. ಇದು ಪ್ರೀತಿಯಲ್ಲಿ ಬಿದ್ದ ನಂತರ ನೀವು ಅವರ ಬಗ್ಗೆ ಹುಚ್ಚರಾಗುವಂತೆ ಮಾಡುತ್ತದೆ. ಅವರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತೀರಿ. ಅಲ್ಲದೇ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವ ಭಾವನೆಯನ್ನೂ ಕೆರಳಿಸುತ್ತದೆ. ಇನ್ನೂ ಕೊನೆಯದ್ದಾಗಿ ಫಿನೈಲೆಥೈಲಮೈನ್ ಇದು ನೀವು ಇಷ್ಟಪಡುವ ವ್ಯಕ್ತಿಯ ಮೇಲೆ ವ್ಯಾಮೋಹ ಉಂಟುಮಾಡುತ್ತದೆ. ಅವರು ಹುಟ್ಟಿರೋದೇ ನನಗಾಗಿ ಎನಿಸುತ್ತದೆ. ಒಂದು ವೇಳೆ ಬೇರೆಯವರನ್ನ ಇಷ್ಟಪಟ್ಟರೆ ಅದು ನಿಮ್ಮಿಂದಿ ಸಹಿಸಲಾಗುವುದಿಲ್ಲ. ಈ ಹಾರ್ಮೋನ್‌ಗಳು ಒಟ್ಟಾಗಿ ನಿಮ್ಮನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತವೆ. ಉದಾಹರಣೆಗೆ ಉಪೇಂದ್ರ ಸಿನಿಮಾದಲ್ಲಿ ʻನೀನು ಅವನನ್ನೇ ಮದುವೆಯಾಗು, ನನ್ನನ್ನ ಲವ್ ಮಾಡು ಎಂದು ಹೇಳಿದಂತೆʼ.
ಪ್ರೀತಿ ವಿಫಲವಾದರೆ ಈ ಹಾರ್ಮೋನ್‌ಗಳ ಮೇಲೆ ತೀವ್ರ ಪರಿಣಾಮವೂ ಬೀರುತ್ತದೆ. ಅವುಗಳ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗುತ್ತದೆ. ಅದಕ್ಕಾಗಿ ಪ್ರೀತಿಸಿದಷ್ಟೇ ಸಾಕಾಗುವುದಿಲ್ಲ. ಪ್ರೀತಿಯನ್ನು ಗೆಲ್ಲುವ ಶಕ್ತಿಯೂ ನಿಮ್ಮಲ್ಲಿರಬೇಕು.
ಪ್ರೀತಿಯ ಮೂರು ಹಂತಗಳ ಬಗ್ಗೆ ನಿಮ್ಗೆ ಗೊತ್ತಾ?
ಪ್ರೀತಿ ಹೇಗೆ ಹುಟ್ಟುತ್ತೆ ಅನ್ನೋದು ಗೊತ್ತಾದ ಮೇಲೆ ಪ್ರೀತಿಯ ಮೂರು ಹಂತಗಳನ್ನೂ ನೀವು ತಿಳಿಯಲೇಬೇಕು. ಪ್ರೇಮಿಗಳಿಗೆ ಈ ಅನುಭವ ನೈಜವಾಗಿಯೇ ಇದ್ದರೂ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರೀತಿಯ ಅನುಭವವನ್ನು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ಮೊದಲನೆಯದ್ದು ಕಾಮ, 2ನೇಯದ್ದು ಆಕರ್ಷಣೆ, 3ನೇಯದ್ದು ವ್ಯಸನಿಗಳಾಗುವುದು. ಕಾಮ ಎಂಬುದು ಪುರುಷರಲ್ಲಿ ಟೆಸ್ಟೋಸ್ಟೆರಾನ್, ಮಹಿಳೆಯರಲ್ಲಿ ಈಸ್ಟ್ರೋಜೆನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆಕರ್ಷಣೆಯಿಂದ ಪ್ರೀತಿಸುವ ವ್ಯಕ್ತಿಯ ಪ್ರೀತಿಗಾಗಿ ಹಂಬಲಿಸುತ್ತಾರೆ. ಇನ್ನೂ 3ನೇ ಯದ್ದು ವ್ಯಸನಿಗಳಾಗುವುದು. ಇದು ಕೆಲವೊಮ್ಮೆ ದೀರ್ಘಕಾಲದ ಯೋಜನೆಗೆ ತಲುಪಿ ಮದುವೆಯಲ್ಲಿ ಮುಕ್ತಾಯವಾಗುತ್ತದೆ. ಇಲ್ಲವೇ ಪ್ರೇಮಕ್ಕೆ ದಾಸನಾಗಿ ದೈಹಿಕ ಸಂಪರ್ಕದಲ್ಲಿ ಮುಕ್ತಾಯವಾಗುತ್ತದೆ ಎನ್ನುತ್ತಾರೆ ಪ್ರಸಿದ್ಧ ಮಾನವಶಾಸ್ತ್ರಜ್ಞರು.
ಪ್ರೇಮಿಗಳ ದಿನಾಚರಣೆ ಏಕೆ ಬೇಕು?
ಪ್ರೀತಿಗೆ ಯಾರಿಗೆ ಯಾವ ರೀತಿಯಲ್ಲಾದರೂ ಇರಬಹುದು. ಪ್ರೇಮಿಗಳಿಗೆ ಪ್ರೀತಿ ಹುಟ್ಟಿದ ಮೇಲೆ ಆ ಮೊದಲ ಕ್ಷಣವನ್ನ ಸಂಭ್ರಮಿಸಲು ಅದಕ್ಕೂ ಒಂದು ದಿನಬೇಕಲ್ಲವೇ ಅದಕ್ಕಾಗಿಯೇ ಪ್ರತಿ ವರ್ಷ ಫೆ.7ರಿಂದ 14ರ ವರೆಗೆ ಪ್ರೇಮಿಗಳು ಒಂದೊಂದು ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. 1. ಗುಲಾಬಿ ದಿನ, 2. ಪ್ರಪೋಸ್ ಡೇ, 3. ಚಾಕೊಲೇಟ್ ಡೇ, 4. ಟೆಡ್ಡಿ ಡೇ, 5. ಪ್ರಾಮಿಸ್ ಡೇ, 6. ಹಗ್ ಡೇ, 7. ಕಿಸ್ ಡೇ, 8. ಲವ್ ಡೇ. ಈ ಒಂದು ವಾರಗಳಲ್ಲಿ ಪ್ರತಿಯೊಂದು ದಿನ ಒಂದೊಂದು ವಿಶೇಷ ಉಡುಗೊರೆ ನೀಡಿ ಪ್ರೇಮಿಗಳ ತಮ್ಮ ದಿನವನ್ನ ಆಚರಿಸುತ್ತಾರೆ.