ಓದು, ತಿಂಡಿ, ಆಟ, ನಿದ್ದೆ, ಸ್ನೇಹ ಎಂದು ತನ್ನದೇ ಲೋಕದಲ್ಲಿದ್ದವಳು ಆಕೆ. ಅದೇ ಕಾಲೇಜು, ಅದೇ ಕ್ಲಾಸ್, ಅದೇ ಫ್ರೆಂಡ್ಸ್ ಅಂತ ಇದ್ದೊಳ ಕಣ್ಣಿಗೆ ಬಿದ್ದ ಹ್ಯಾಂಡ್ಸಮ್ ಹುಡ್ಗ. ಲೆಕ್ಚರ್ಸ್ ಪಾಠ ಮಾಡ್ತಾ ಇದ್ರು ಅವಳ ಕಣ್ಣು ಮಾತ್ರ ಅವನನ್ನು ಹುಡುಕ್ತಾ ಇತ್ತು. ಅವನು ಯಾವಾಗ ಕ್ಲಾಸ್ ಹತ್ರ ಬರುತ್ತಾನೆ ಅಂತಾ ಅವ್ಳು ಕಾಯ್ತಾ ಇರುತ್ತಿದ್ದಳು.
ಅದ್ಯಾವ ಘಳಿಗೆಯಲ್ಲಿ ಇಬ್ಬರ ನೋಟ ಬೆರೆಯಿತೋ, ಅವರಿಬ್ಬರಿಗೂ ಅರಿವಿಲ್ಲದಂತೆ ಅವರ ಮನದೊಳಗೆ ಪ್ರೇಮದ ಆಗಮನವಾಯಿತು. ಪರಿಚಯವಾದರೂ ಮಾತನಾಡಲು ಅದೇನೋ ಸಂಕೋಚ. ಯಾವಾಗಲೂ ನೋಡುತ್ತಿದ್ದ ಮುಖವಾದರೂ ಮನಸ್ಸಿಗೆ ತುಂಬಾನೇ ಆಪ್ತವೆನಿಸುವ ನೋಟ. ಕಣ್ಣಲ್ಲೇ ಗಂಟಗಟ್ಟಲೆ ಮಾತನಾಡುತ್ತಿದ್ದರು.
- Advertisement -
ಅವಳನ್ನು ನೋಡುತ್ತಿದ್ದರೆ ಇವನೊಳಗೆ ಸಣ್ಣ ಭಯ. ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟ ಅನುಭವ. ಹೇಗೋ ಶುರುವಾದ ಸ್ನೇಹ ಪ್ರೇಮಕ್ಕೆ ತಿರುಗಿದ ಪರಿಯ ಬಗ್ಗೆ ಇಬ್ಬರಿಗೂ ಅರಿವಿರಲಿಲ್ಲ. ಆದರೆ ಅವಳೆಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ ಕಾಳಜಿ. ಆಕೆಯನ್ನು ಪ್ರೇಮ ದೇವತೆಯಂತೆ ಪೂಜಿಸುತ್ತಿದ್ದನು. ಒಂದು ಕ್ಷಣ ಅವಳು ಕಾಣಲಿಲ್ಲವೆಂದರೂ ಕಂಗಾಲಾಗುವಂಥ ಮನಸ್ಥಿತಿ ಅವನದ್ದಾಗಿತ್ತು. ಅವರ ದೃಷ್ಟಿಯಲ್ಲಿ ದುಂಡಗಿದ್ದ ಪ್ರಪಂಚ ಹೃದಯಾಕಾರದಲ್ಲಿ ಕಾಣಿಸುತ್ತಿತ್ತು.
- Advertisement -
ಶುದ್ಧ ಪ್ರೀತಿಗೆ ಸಾಕ್ಷಿ ಅವಳು, ಪರಿಶುದ್ಧ ಪ್ರೀತಿಗೆ ಅರ್ಥ ಅವಳು. ಅರ್ಥವಾಗದ ಪ್ರೀತಿಯ ವ್ಯಾಕರಣಕ್ಕೆ ನಿಘಂಟವಳು ಎಂದು ಆಕೆಯ ಗುಣಗಾನ ಮಾಡುತ್ತಿದ್ದನು. ಆತ ಆಕೆಯನ್ನು ಮನದರಿಸಿಯಾಗಿ ತನ್ನ ಹೃದಯದೊಳಗೆ ಕೂರಿಸಿಬಿಟ್ಟಿದ್ದ. ಆತನ ಪ್ರಶ್ನೆಗಳಿಗೆ ಆಕೆ ಕಣ್ಣ ಸನ್ನೆಯಲ್ಲೇ ಉತ್ತರಿಸುತ್ತಿದ್ದಳು. ಇಡೀ ಕಾಲೇಜಿನಲ್ಲೇ ಮುದ್ದಾದ ಜೋಡಿ ಎಂದು ಫೇಮಸ್ ಆಗಿದ್ದ ಪ್ರೇಮ ಪಕ್ಷಿಗಳು ತಮ್ಮದೇ ಏಕಾಂತದಲ್ಲಿ ತೇಲಾಡುತ್ತಿದ್ದರು.
- Advertisement -
ಒಂದು ದಿನ ಹೀಗೆ ಅವರಿಬ್ಬರು ಕಾಲೇಜು ಮುಗಿಸಿ ನಡೆದು ಹೋಗ್ತಾ ಇದ್ರು. ಅಲ್ಲೇ ರಸ್ತೆ ಪಕ್ಕದಲ್ಲಿ ಆಕೆ ಫ್ರೆಂಡ್ಸ್ ಕಾಣಿಸುತ್ತಾರೆ. ಅವ್ಳು ಖುಷಿಯಿಂದ ಅವಸರದಲ್ಲಿ ರಸ್ತೆ ದಾಟುತ್ತಾಳೆ. ಆ ಹೊತ್ತಿಗೆ ಲಾರಿಯೊಂದು ಎಲ್ಲಿಂದ ಬಂತೋ ಗೊತ್ತಿಲ್ಲ. ಆಕೆಗೆ ಡಿಕ್ಕಿ ಹೊಡೆಯುತ್ತದೆ. ಕಣ್ಣು ಮಿಟುಕಿಸೋದ್ರ ಒಳಗೆ ಯಮ ಸ್ವರೂಪಿ ಲಾರಿ ಆಕೆಯ ಪ್ರಾಣ ಪಕ್ಷಿಯನ್ನೇ ತೆಗೆದುಕೊಂಡಿತ್ತು.
- Advertisement -
ಅಲ್ಲೇ ಪಕ್ಕದಲ್ಲಿದ್ದ ಅವನಿಗೆ ಆ ದೃಶ್ಯ ಕಂಡು ಸಿಡಿಲು ಬಡಿದಂತಾಯಿತು. ಆಕೆ ಬಿದ್ದಿದ್ದ ಸ್ಥಳಕ್ಕೆ ಓಡಿ ಹೋಗ್ತಾನೆ. ಆದರೆ ವಿಧಿಯಾಟಕ್ಕೆ ಆಕೆ ಉಸಿರೇ ಚೆಲ್ಲಿದ್ದಳು. ಆಗಷ್ಟೇ ಚಿಗುರೊಡೆದ ಪ್ರೀತಿಯು ಅರಳುವ ಮುನ್ನವೇ ಬಾಡಿಹೋಯಿತು. ಆತನ ಮನದನ್ನೆಯು ಅಷ್ಟರಲ್ಲಾಗಲೇ ಕನಸಿನ ಲಹರಿಯತ್ತ ಪಯಣ ಬೆಳೆಸಿದ್ದಳು. ಯಮನಾಟಕ್ಕೆ ಬಲಿಯಾದ ಪ್ರೀತಿಯ ಕಂಡು ವರುಣ ದೇವನೇ ಕಣ್ಣೀರು ಹಾಕಿದನು.