ವ್ಯಾಲೆಂಟೈನ್ಸ್ ಡೇ (Valentines Day) ಪ್ರೀತಿಯ ಅನ್ವೇಷಣೆಯ ಸಮಯ. ಇಡೀ ಜಗತ್ತೇ ಇಷ್ಟ ಪಡುವ ಹಬ್ಬ ಅಂದರೂ ತಪ್ಪಾಗಲಾರದು. ಪ್ರೀತಿ, ಪ್ರೇಮ ಹಾಗೂ ಪ್ರಣಯ ಭಾವಗಳ ಗಾನ ವೈಭವದ ದಿನ, ಪ್ರೀತಿ ಮತ್ತು ಪ್ರೇಮದ ನದಿಗಳು ಹರಿಯುವ ಸುಮಧುರ ದಿನ, ಪ್ರೇಮಿಗಳು ಅವುಗಳ ಸೌಂದರ್ಯವನ್ನು ಅನುಭವಿಸುವ ದಿನ, ಈ ವ್ಯಾಲೆಂಟೈನ್ಸ್ ಡೇ.
Advertisement
ಪ್ರೇಮ ಪಕ್ಷಿಗಳಿಗಂತೂ ಇದು ಕನಸಿನ ದಿನ. ಬಹುಕಾಲದಿಂದ ತಮ್ಮ ಪ್ರೀತಿಯನ್ನು ಪ್ರಕಟಿಸಬೇಕೆಂದ ಕಾತುರದಿಂದ ಕಾಯುತ್ತಿದ್ದ ಅತ್ಯಂತ ಉತ್ಸಾಹದ ಸಂದರ್ಭ. ಇಂತಹ ವಿಶೇಷ ಸಮಯದಲ್ಲಿ, ಪ್ರೀತಿ ಮತ್ತು ಪ್ರೇಮದ ಗಾನವನ್ನು ಹಾಡಿ ಖುಷಿಪಡುವವರು ಒಂದೆಡೆಯಾದರೆ, ತಮ್ಮ ಪ್ರೀತಿಯನ್ನು ಇನ್ನೊಬ್ಬರಿಗೆ ಧಾರೆಯೆರೆದು, ಚಿರಕಾಲ ಇನ್ನೊಬ್ಬರೊಂದಿಗೆ ಸುಖ ದುಃಖವನ್ನು ಹಂಚಿ, ಪ್ರೀತಿ ಮತ್ತು ಆತ್ಮೀಯತೆ ವಾತಾವರಣದಲ್ಲಿ ಬಾಳಿ ಬದುಕುವ ಬಗ್ಗೆ ಮಾತು ಕೊಡುವವರು ಇನ್ನೊಂದೆಡೆ. ಇದನ್ನೂ ಓದಿ: ಕಗ್ಗತ್ತಲ ದಾರಿಗೆ ಬೆಳಕು ಸೋಕಿಸಿ ಹೋದವಳು!
Advertisement
ಪ್ರೀತಿ, ಪ್ರೇಮ, ಪ್ರಣಯ: ಈ ಮೂರೂ ಅಂಶಗಳು ಮಾನವನ ಬಾಳಿನಲ್ಲಿ ಅತ್ಯಂತ ಮುಖ್ಯವಾಗಿವೆ. ಪ್ರೀತಿ, ಒಂದು ವೈಯುಕ್ತಿಕ ಅನುಭವ. ಪ್ರತಿಯೊಬ್ಬರ ಅನುಭವವೂ ವಿಭಿನ್ನ. ಪದಗಳಲ್ಲಿ ವರ್ಣಿಸಲಾಗದ ಅನುಭವ ಅವು. ಅದೇ ರೀತಿ, ಪ್ರೇಮವು ಪರಸ್ಪರರ ಸಂಬಂಧದಿಂದ ಉಂಟಾಗುವ ಒಂದು ಪರಿಣಾಮ. ಯಾವಾಗ, ಯಾರ ಮೇಲೆ, ಹೇಗೆ ಪ್ರೇಮ ಉಂಟಾಗುತ್ತದೆ ಎಂದು ಹೇಳತೀರದು. ಕೊನೆಯದು ಪ್ರಣಯ. ಇದು ಒಬ್ಬ ವ್ಯಕ್ತಿಯಲ್ಲಿರುವ ಸ್ನೇಹದ ಆಳವನ್ನು ವ್ಯಾಖ್ಯಾನಿಸುತ್ತದೆ. ಪ್ರೀತಿ, ಪ್ರೇಮ, ಪ್ರಣಯ ಎಂಬ ಈ ಮೂರು ಪದಗಳು ಪ್ರತಿಯೊಂದು ವ್ಯಕ್ತಿಯ ಬಾಳಿನ ಒಂದು ಭಾಗ. ಬಹುಶಃ ಪ್ರೇಮಿಗಳ ದಿನ, ಈ ಮೂರು ಅನುಭವಗಳ ಸಮ್ಮಿಲನಕ್ಕೆ ಸಾಕ್ಷಿಯಾಗುವ ದಿನ ಎಂದೇ ಹೇಳಬಹುದು.
Advertisement
Advertisement
ಪ್ರೀತಿ ಎಲ್ಲರಿಗೂ ವಿಭಿನ್ನ ಅನುಭವ ನೀಡುತ್ತದೆ. ಇದು ಮನಸ್ಸಿನಾಳದಿಂದ ಹೊರ ಬರುವ ಭಾವನೆ. ಇದು ವ್ಯಕ್ತಿಗೆ ಹೊಸ ದೃಷ್ಟಿಯನ್ನು ತೋರಿಸಿ, ಸಂಬಂಧಗಳನ್ನು ರಚಿಸುತ್ತದೆ ಮತ್ತು ಬದಲಾವಣೆಯತ್ತ ಒಯ್ಯುತ್ತದೆ. ಪ್ರೇಮವು ಪ್ರೀತಿಯ ಅಭಿವ್ಯಕ್ತಿ. ಪ್ರೀತಿಯ ಅನುಭವವು ಹಿಂದಿನ ಸಂಭವಗಳಿಂದ ಹೊರಹೊಮ್ಮಿದ ಪ್ರತಿಕ್ರಿಯೆಯ ಭಾಗವಾದರೆ, ಪ್ರೇಮ ಅದರ ಮುಂದಿನ ಸ್ತರದಲ್ಲಿ ಅಂದರೆ ಇಬ್ಬರ ನಡುವಿನ ಸಂಬAಧದಲ್ಲಿ ಬಹುಪಾಲು ಸಂಭವಗಳನ್ನು ಹುಟ್ಟುಹಾಕುತ್ತದೆ. ಇನ್ನು, ಪ್ರೇಮ ಉನ್ನತ ಮಟ್ಟಕ್ಕೆ ಏರಿದಾಗ, ಇಬ್ಬರು ವ್ಯಕ್ತಿಗಳು ಇತರರ ಮೇಲಿನ ಪೂರ್ಣ ಆತ್ಮೀಯತೆ ಮತ್ತು ನಂಬಿಕೆಯ ಅಭಿವ್ಯಕ್ತಿಯಾಗಿ ಪರಸ್ಪರರನ್ನು ಹೆಚ್ಚು ಅರಿಯುವಂತೆ ಮಾಡುವ ಪ್ರಮೇಯವೇ ಪ್ರಣಯ.
ವ್ಯಾಲೆಂಟೈನ್ಸ್ ಡೇ ದಿನದ ಸಂದರ್ಭದಲ್ಲಿ ಪ್ರೀತಿ ಮತ್ತು ಪ್ರೇಮದ ಆದರ್ಶಗಳನ್ನು ಬೆಳಗುವುದು ಮತ್ತು ಪ್ರೀತಿಯ ಬೆಳಕಿನ ಕಿರಣಗಳನ್ನು ಇತರರಿಗೆ ಹರಡುವುದು ಅತೀ ಮುಖ್ಯ. ವ್ಯಾಲೆಂಟೈನ್ಸ್ ಡೇ, ಪ್ರೀತಿಯ ಉಜ್ವಲ ಆದರ್ಶವನ್ನು ಮೆಚ್ಚುವ ಸಮಯ. ಈ ದಿನದಲ್ಲಿ ನಾವು ಸಹಾನುಭೂತಿ ಮತ್ತು ಪ್ರೀತಿಯ ಭಾವನೆಗಳನ್ನು ಹರಡುತ್ತೇವೆ. ಆದರೆ ಇದು ಕೇವಲ ಈ ಒಂದು ದಿನಕ್ಕೆ ಸೀಮೀತವಾಗುವುದಲ್ಲ. ಪ್ರೀತಿ ಮತ್ತು ಪ್ರೇಮದ ಭಾವನೆಗಳನ್ನು ನಾವು ನಮ್ಮ ಬದುಕಿನ ಪ್ರತಿಯೊಂದು ದಿನದಲ್ಲಿಯೂ ಅನುಭವಿಸಬಲ್ಲೆವು. ಇದನ್ನೂ ಓದಿ: ನೈಜ ಪ್ರೀತಿ ಅಂದ-ಚಂದ ನೋಡಿ ಹುಟ್ಟಲ್ಲ..
ವ್ಯಾಲೆಂಟೈನ್ಸ್ ಡೇ ದಿನದ ಪ್ರಯುಕ್ತ, ಪ್ರೀತಿ, ಪ್ರೇಮ, ಪ್ರಣಯದ ಮಹತ್ವವನ್ನು ಮನುಷ್ಯರಿಗೆ ಮನವರಿಕೆ ಮಾಡಿಕೊಡುವುದು ಗಮನಾರ್ಹ. ಇದು ನಮ್ಮ ಸಂಬಂಧಗಳ ಅಗಾಧ ಸಾಮರ್ಥ್ಯವನ್ನು ಪುನಃ ಅರಿಯಲು ಅವಕಾಶ ಒದಗಿಸುತ್ತದೆ. ಈ ದಿನ, ಪ್ರೀತಿಯ ಉಜ್ವಲ ಆದರ್ಶವನ್ನು ಹರಡುವ ಸಮಯ. ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರ ನಡುವೆಯೂ ಆತ್ಮೀಯ ಭಾವನೆಗಳು ಬೆಳಗುತ್ತವೆ. ವ್ಯಾಲೆಂಟೈನ್ಸ್ ಡೇ ಎಂಬ ಈ ಸಂದರ್ಭದಲ್ಲಿ, ನಾವು ಪ್ರೀತಿಯ ಅಮೂಲ್ಯ ಭಾವನೆಗಳನ್ನು ಮೆಚ್ಚೋಣ ಮತ್ತು ಸಹಾನುಭೂತಿಯ ಮೂಲಕ ನಮ್ಮ ಪ್ರೀತಿಗೆ ಸಂತೋಷವನ್ನು ಮತ್ತು ಬೆಳಕನ್ನು ನೀಡೋಣ.
– ಅಚ್ಯುತ್ ಆರ್ ಭಾರಧ್ವಾಜ್
ಬಿವೋಕ್ ವಿದ್ಯಾರ್ಥಿ, ಎಸ್‌ಡಿಎಂ ಕಾಲೇಜು, ಉಜಿರೆ.