ಅಂದು ಸ್ನಾತಕೋತ್ತರ ಪದವಿಯ ದ್ವಿತೀಯ ವರ್ಷದ ಮೊದಲ ದಿನ. ಎತ್ತ ನೋಡಿದರೂ, ಸೀರೆಯುಟ್ಟ ಯುವತಿಯರು, ಪಂಚೆ, ಶಲ್ಯ ಧರಿಸಿದ ಹುಡುಗರು. ನಾನೆಲ್ಲೋ ಯಾವುದೋ ಕಲ್ಯಾಣ ಮಂಟಪಕ್ಕೆ ಕಾಲಿಟ್ಟೆನೋ ಎನ್ನುವಂತೆ ಭಾಸವಾಗುತ್ತಿತ್ತು. ಅಷ್ಟರಲ್ಲಿ ಗುಂಪಿನಲ್ಲಿದ್ದ ನಮ್ಮ ಸ್ನೇಹಿತರು ಶಿಳ್ಳೆ ಹೊಡೆದು ನನ್ನನ್ನು ಕೂಗಿದರು. ದ್ವಿತೀಯ ವರ್ಷದ ಮೊದಲ ದಿನದ ಸಂಭ್ರಮ ಕೊಂಡಾಡಲು ಸ್ನೇಹಿತರ ಜೊತೆ ಸೇರಿದಾಕ್ಷಣ ನಿಂತ ಜಾಗದಲ್ಲಿ ಕಾಲುಗಳು ನಿಲ್ಲಲಿಲ್ಲ. ಯಾವುದೋ ಅರ್ಥವಾಗದ ಇಂಗ್ಲಿಷ್ ಗೀತೆಗಳಿಗೆ, ಬಾರದಿದ್ದರೂ ಡಾನ್ಸ್ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ದೆವು.
ಎರಡನೇ ದಿನದಿಂದ ತರಗತಿ ಆರಂಭವಾಯಿತು. ಅಂದು ನಾನು ಕಾಲೇಜು ಕ್ಯಾಂಟೀನ್‌ನಲ್ಲಿ ಕಾಫಿ ಕುಡಿದು 2ನೇ ವರ್ಷದಲ್ಲಿ ತರಗತಿ ಹೇಗಿರುತ್ತದೆ? ಅನ್ನೋದ್ರ ಬಗ್ಗೆ ವಿಜ್ಞಾನಿಗಳಂತೆ ಚರ್ಚಿಸುತ್ತಲೇ ತರಗತಿಯತ್ತ ಸ್ನೇಹಿತರೊಟ್ಟಿಗೆ ಹೆಜ್ಜೆ ಹಾಕಿದೆ. ನಾವು ಹೋಗುವಷ್ಟರಲ್ಲಿ ತರಗತಿ ಆರಂಭವಾಗಿತ್ತು. ಆದ್ದರಿಂದ ಬಾಗಿಲ ಬಳಿಯಲ್ಲಿ ನಿಂತು ಗುರುಗಳಿಗೆ ಕ್ಷಮೆ ಕೇಳಿ ಒಳಗೆ ಎಂಟ್ರಿ ಹಾಕೋಣ ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿ ಮಿಂಚಿನ ಬೆಳಕೊಂದು ಕಣ್ಣಿಗೆ ಅಪ್ಪಳಿಸಿದಂತೆ ಭಾಸವಾಯ್ತು. ಮೊದಲೇ ನನಗೆ ಕುತೂಹಲ ತಡೆಯಲಾಗಲಿಲ್ಲ. ಹಾಗಾಗಿ ತಕ್ಷಣವೇ ಹಿಂಬಾಲಿಸಿ ಹೊರಟೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ… ಪ್ರೇಮ ಪಕ್ಷಿಗಳಿಗೆ ಕನಸಿನ ದಿನ
Advertisement
Advertisement
ಹಿಂಬಾಲಿಸಿ ಹೋಗುವಾಗ ನನ್ನ ಗೆಳೆಯನೊಬ್ಬ ʻಅದು ನಮ್ಮ ಜೂನಿಯರ್ ಹುಡುಗಿ ಕಣೋ’ ಅಂತ ಕೂಗಿಬಿಟ್ಟ. ಆಗ ಆಕೆ ನನ್ನನ್ನು ನೋಡಲು ತಿರುಗಿದ ರೀತಿ ಈಗಲೂ ನೆನಪಾಗುತ್ತದೆ. ಹೊಂಬೆಳಕಿನಂತಿದ್ದ ಮುಖಕ್ಕೆ ಕಿರೀಟದಂತಿದ್ದ ದುಪ್ಪಟ್ಟ ಕೊಂಚ ಸರಿಸಿ ತಿರುಗಿದಳು. ಅಬ್ಬಬ್ಬಾ! ಆಕ್ಷಣ ನನ್ನನ್ನು ನಾನೇ ಮರೆತುಬಿಟ್ಟೆ. ಹೊಳೆಯುತ್ತಿದ್ದ ಆಕೆಯ ಕಣ್ಣುಗಳನ್ನು ಕಂಡು ಮನಸ್ಸು ಗಾಳಿಯಲ್ಲಿ ಹಾರಾಡುತ್ತಿತ್ತು. ಪೂರ್ಣ ಚಂದಿರನಂತಿದ್ದ ಸೌದಿ ಅರೇಬಿಯಾ ಸುಂದರಿಯ ಮುಖ ನೋಡಿದೊಡನೆ ʻಕಮಲ ನಯನ ಕೋಮಲಾಂಗಿ, ನೀ ಅಂದದ ಬಿನ್ನಾಣ ಗಿತ್ತಿ, ಪ್ರೀತಿ ಪ್ರೇಮ ನನ್ನ ಮನೋವೃತ್ತಿʼ ಎಂದು ನನ್ನಲ್ಲೇ ಕವಿತೆಯ ಸಾಲುಗಳು ಹುಟ್ಟಲು ಪ್ರಾರಂಭಿಸಿದವು.
Advertisement
ಕೊನೆಗೆ ನಾನು ತರತಿಯಲ್ಲಿ ಕೂರಬೇಕಾದ ನಾನು ಗುರುಗಳಿಗೆ ಸಾರಿ ಹೇಳಿದ್ರೆ ಆಯ್ತು ಅಂತ, ಆಕೆಯನ್ನ ಹಿಂಬಾಲಿಸಿ ಕ್ಯಾಂಟೀನ್ ಕಡೆಗೆ ಹೊರಟೆ. ಆದ್ರೆ ಆಕಸ್ಮಿಕವೋ ಏನೋ ಗೊತ್ತಿಲ್ಲ. ಮತ್ತೆ ಆ ಸುಂದರಿ ಅಲ್ಲಿಯೇ ಪ್ರತ್ಯಕ್ಷ. ನನ್ನ ಜೂನಿಯರ್ ಬೇರೆ ಆಕೆಯನ್ನ ಕರೆದು ನನ್ನ ಎದುರುಬದುರಾಗಿಯೇ ಕೂರಿಸಿದ. ಮತ್ತೆ ಆಕೆಯ ಕಣ್ಣುಗಳು ನನ್ನನ್ನು ಸೆಳೆಯುತ್ತಿದ್ದವು. ಈ ನಡುವೆ ಸಪ್ಲೇಯರ್ ಗಂಟೆಗೆ ನಾಲ್ಕು ಬಾರಿ ಬಂದು ‘ವಾಟ್ ಯು ವಾಂಟ್’ ಸರ್ ಅಂತಿದ್ದ. ನನಗೆ ಆಕೆಯೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲೇ ಇಲ್ಲ. ಅಂದಿನಿಂದ ಶುರು ಮಾಡ್ಡೆ ನೋಡಿ ಕವನ ಬರೆಯೋಕೆ. ನನ್ನ ಸ್ನೇಹಿತ ಕೊಟ್ಟ ‘ಅವಳೆಂದರೆ’ ಟೈಟಲ್ ಅನ್ನೇ ಇಟ್ಕೊಂಡು ಇವಳ ಮೇಲೆ ಕವಿತೆ ಬರೆಯೋಕೆ ಶುರು ಮಾಡ್ದೆ. ಬರೆಯಲು ಶುರು ಮಾಡಿದ ಒಂದೆರಡು ದಿನಗಳಲ್ಲೇ ನನ್ನ ಫಜೀತಿ ನೋಡೊಕಾಗದೇ ನನ್ನ ಜೂನಿಯರ್ಸ್ ಕೂಡ ಸಹಾಯ ಮಾಡಿದ್ರು. ಸ್ವಲ್ಪ ದಿನ ʻಹಾಯ್, ಹಲೋ, ಹ್ಯಾಡ್ ಯುವರ್ ಕಾಫಿ, ಟೀ, ಗುಡ್‌ಮಾರ್ನಿಂಗ್, ಗುಡ್‌ನೈಟ್ʼ ಇಷ್ಟರಲ್ಲೇ ಕಾಲ ಕಳೆಯುತ್ತಿತ್ತು. ಇದನ್ನೂ ಓದಿ: ಕಗ್ಗತ್ತಲ ದಾರಿಗೆ ಬೆಳಕು ಸೋಕಿಸಿ ಹೋದವಳು!
Advertisement
ಯಾಕಂದ್ರೆ ಆಕೆ ಮಾತನಾಡ್ತಿದ್ದು ನನಗೆ ಅರ್ಥ ಆಗ್ತಿರಲಿಲ್ಲ. ನನ್ನ ಕನ್ನಡವಂತೂ ಆಕೆಗೆ ಏನೂ ಅಂತಾನೂ ಗೊತ್ತಾಗುತ್ತಿರಲಿಲ್ಲ. ನೀರಿಳಿಯದ ಗಂಟಲಿಗೆ ಕಡುಬು ತುರುಕಿದಂತಾಗುತ್ತಿತ್ತು ನನ್ನ ಸ್ಥಿತಿ. ಕೊನೆಗೆ ನನ್ನ ಸ್ನೇಹಿತರು ನನ್ನ ಕೌತುಕ ನೋಡಲಾರದೇ ಅವಳು ಮಾತನಾಡುತ್ತಿದ್ದುದನ್ನು ತಕ್ಷಣಕ್ಕೆ ನನಗೆ ಭಾಷಾಂತರಿಸುತ್ತಿದ್ದರು. ನಾನು ಹೇಳಿದ್ದನ್ನು ಅವಳಿಗೆ ಅನುವಾದ ಮಾಡ್ತಿದ್ರು. ಇದರಿಂದ ಆಕೆ ಮಾತನಾಡುವುದು ಅರ್ಥ ಮಾಡಿಕೊಳ್ಳುವುದು ತುಂಬಾನೆ ಸುಲಭವಾಯ್ತು.
ಅವಳ ಭಾಷೆ ಅರ್ಥವಾಗುತ್ತಿದ್ದಂತೆ ನನಗೆ ಗೊತ್ತಿಲ್ಲದಂತೆ ಕವಿತೆಗಳು ನದಿಯಂತೆ ಹರಿಯಲಾರಂಭಿಸಿದವು. ‘ಅವಳೆಂದರೆ ತುಂತುರು ಹನಿಯಂತೆ, ಮುಟ್ಟಲು ಹೋದರೆ ಕೈಗೆ ಸಿಗದವಳು, ದಿಟ್ಟಿಸಿ ನೋಡಿದರೆ ಕಣ್ಣಿಗೆ ಕಾಣದವಳು, ಕಲ್ಪನೆಯಲ್ಲಿ ಹಾಗೊಮ್ಮೆ, ಹೀಗೊಮ್ಮೆ ಬಂದು ಹೋಗುವವಳ ಏನೆಂದು ಕರೆಯಲಿ, ಎಲ್ಲೆಂದು ಹುಡುಕಲಿ’ ಎಂದು ಸಾಲು ಸಾಗರದಂತೆ ಹರಿಯಿತು. ಕಾಲೇಜು ದಿನದ ಕೊನೆಯ ಫೇರ್ವೆಲ್ ಕಾರ್ಯಕ್ರಮದಲ್ಲಂತೂ ನಾನು ಆಕೆಯ ಎದುರೇ ಕುಳಿತು ಸಂಜೆವರೆಗೂ ಆಕೆಯ ಮುಖವನ್ನೇ ನೋಡುತ್ತಿದ್ದೆ. ಆಕೆ ನನಗಿಂತಲೂ ಚೆನ್ನಾಗಿರೋ ಹುಡ್ಗಿರಿದ್ದಾರೆ ನೋಡ್ರಿ ಎಂದು ಇಂಗ್ಲಿಷ್‌ನಲ್ಲಿ ಹೇಳುತ್ತಿದ್ದಳು. ನನ್ನ ಕಣ್ಣುಗಳಂತೂ ಆಕೆಯನ್ನು ಬಿಟ್ಟು ಮತ್ತೊಬ್ಬರನ್ನು ನೋಡಲೇ ಇಲ್ಲ. ಆದ್ರೆ ವಿಧಿಲಿಖಿತ ಅಷ್ಟೇ ಅನ್ನಿಸುತ್ತೆ. ನಾನು ಕೆಲಸ ಸಿಕ್ಕ ಸ್ವಲ್ಪ ದಿನಗಳಲ್ಲೇ ಆಕೆಗೆ ಪ್ರಪೋಸ್ ಮಾಡೋಣ ಅಂದುಕೊಂಡೆ. ಅದೇ ವೇಳೆ, ನನಗೆ ಕರೆ ಮಾಡಿ ಆಕೆಯ ಮದುವೆಯ ಆಹ್ವಾನವಿತ್ತಳು. ಅಲ್ಲಿಗೆ ಮೊದಲ ಕ್ರಶ್ ಪ್ರೇಮದ ಅಧ್ಯಾಯ ನನ್ನೊಳಗೇ ಮುಕ್ತಾಯವಾಯ್ತು. ಇದನ್ನೂ ಓದಿ: ನೈಜ ಪ್ರೀತಿ ಅಂದ-ಚಂದ ನೋಡಿ ಹುಟ್ಟಲ್ಲ..
– ಮೋಹನ್ ಬಿ.ಎಂ