ಪ್ರೀತಿ ಎಂಬ ಪದ ಕೇಳಲು, ಹೇಳಲು ಬಲು ಚಿಕ್ಕದಾಗಿರಬಹುದು. ಅದರ ಮಹತ್ವ ಬಹಳ ದೊಡ್ದದು. ಒಂದೊಳ್ಳೆ ಪ್ರೀತಿ ಯಾವುದೇ ವ್ಯಕ್ತಿಯನ್ನೂ ಶಕ್ತಿಯುತನನ್ನಾಗಿಸಬಹುದು ಅಥವಾ ಕ್ಷಣಮಾತ್ರದಲ್ಲಿ ಶಕ್ತಿಹೀನಗೊಳಿಸಲೂಬಹುದು.
Advertisement
ನಿಜವಾದ ಪ್ರೀತಿ ಅಂದ್ರೆ ಏನು? ಅದು ಹೇಗಿರಲಿದೆ? ಅನ್ನೋದನ್ನು ವ್ಯಾಖ್ಯಾನಿಸುವುದು ಕಷ್ಟವೇ ಸರಿ. ಯಾವ ಆಸ್ತಿಯಲ್ಲಾಗಲಿ, ಅಂತಸ್ತಿನಲ್ಲಾಗಲಿ ಅಥವಾ ಹಣದಿಂದಾಗಲಿ ಪರಿಶುದ್ಧ ಪ್ರೀತಿಯನ್ನು ಅಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರೀತಿ ಎಂಬುವುದು ಇದ್ಯಾವುದರಿಂದಲೂ ಕೊಳ್ಳಬಹುದಾದ ವಸ್ತು ಅಲ್ಲವೇ ಅಲ್ಲ. ಇದು ಮನಸ್ಸು ಮನಸ್ಸುಗಳ ನಡುವೆ ಸೃಷ್ಟಿಯಾಗುವ ಒಂದು ವಿಸ್ಮಯ. ಇದನ್ನೂ ಓದಿ: ಅವನಿಗೆ ನಾನು ‘ಏಪ್ರಿಲ್ ಏಂಜಲ್’…
Advertisement
ಜೀವನದಲ್ಲಿ ಪ್ರೀತಿ ಎರಡು ರೀತಿ ಪಾತ್ರವಹಿಸಲಿದೆ. ಮೊದಲನೆಯದು ಸಕಾರಾತ್ಮಕ ಪ್ರೀತಿ. ಇದರಿಂದ ಜೀವನದ ಎಲ್ಲಾ ಮಾರ್ಗಗಳು ಸಹ ಸಕಾರಾತ್ಮಕವಾಗಿಯೇ ಇರುತ್ತದೆ. ಅಲ್ಲದೇ ಎಲ್ಲರ ಜೀವನ ಸುಗಮವಾಗಿ ಸಾಗುತ್ತದೆ. ಎರಡನೇಯದು ನಕಾರಾತ್ಮಕ ಪ್ರೀತಿ. ಇದರಿಂದ ಜೀವನ ಕೆಡುವುದು ಮಾತ್ರವಲ್ಲದೆ ಜೀವವೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಕಾರಾತ್ಮಕ ಪ್ರೀತಿಯನ್ನೇ ಎಲ್ಲರೂ ಅಪೇಕ್ಷಿಸುವುದು. ನಾನಾ ಕಾರಣಗಳಿಂದ ಪ್ರೀತಿ ಅನ್ನೋದು ನಕಾರಾತ್ಮಕ ರೂಪವೂ ತಾಳುತ್ತದೆ. ಇದಕ್ಕೊಂದು ಕಾರಣ, ದೈಹಿಕ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸುವುದು.
Advertisement
Advertisement
ಸಾಮಾನ್ಯವಾಗಿ ಹದಿಹರೆಯದ ಯುವಕ ಯುವತಿಯರಲ್ಲಿ ಇದು ಸಹಜ. ಈ ರೀತಿಯ ಪ್ರೀತಿ ಅನೇಕ ಸಾವು ನೋವುಗಳಿಗೆ ಕಾರಣವಾಗಿದೆ. ಈಗಲೂ ಇಂತಹ ಘಟನೆಗಳು ಘಟಿಸುತ್ತಿವೆ. ಹಾಗಾಗಿ ನಿಜವಾದ ಪ್ರೀತಿಯನ್ನು ನಾವು ಹುಡುಕಬೇಕಿದೆ.
ಹಾಗಾದರೆ ನಿಜವಾದ ಪ್ರೀತಿ ಹೇಗೆ ಹುಟ್ಟುತ್ತದೆ? ಎಂಬ ಪ್ರಶ್ನೆ ಕಾಡುವುದು ಸಾಮಾನ್ಯವಾಗಿದೆ. ಸರಳವಾಗಿ ಹೇಳುವುದಾದರೆ, ನಿಜವಾದ ಪ್ರೀತಿ ಹುಟ್ಟೋದು `ಮನಸ್ಸು ಮನಸ್ಸುಗಳು ಪರಸ್ಪರ ಅರ್ಥ ಮಾಡಿಕೊಂಡಾಗ’.
ಅವನಿಗೆ ಅವಳ ಬಗ್ಗೆ ಎಲ್ಲವೂ ಗೊತ್ತಿದೆ. ಅವಳಿಗೂ ಅವನ ಬಗ್ಗೆ ಎಲ್ಲವೂ ತಿಳಿದಿದೆ. ಅವರಿಬ್ಬರೂ ಎಲ್ಲ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಅವಳು ಇರದಿದ್ದಾಗ ಅವನು ದುಃಖದಲ್ಲಿರುತ್ತಾನೆ. ಪ್ರತಿದಿನ ಕಾಲ್ ಮಾಡದೇ ಇದ್ರೆ ಆಗೋದೇ ಇಲ್ಲ. ಗುಡ್ ಮಾನಿರ್ಂಗ್, ಗುಡ್‍ನೈಟ್ ಮೆಸೇಜ್‍ಗಳು ಪ್ರತಿನಿತ್ಯ ಕಳುಹಿಸಬೇಕು, ಹೀಗಿದ್ದ ಮಾತ್ರಕ್ಕೆ ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ತಪ್ಪು. ಇಂತಹ ಅಭಿಪ್ರಾಯಗಳು ಕಾಲೇಜ್ ವಿದ್ಯಾರ್ಥಿಗಳಲ್ಲಿ ಬರುತ್ತದೆ. ಇಲ್ಲಿ ಮೂಡೋ ಪ್ರೀತಿ ಕೇವಲ ಕೆಲದಿನಗಳ ಕಾಲ ಮಾತ್ರ ಜೀವಂತವಿರುತ್ತದೆ. ಪ್ರತಿದಿನ ಹೊಸ ಗೆಳೆಯ ಗೆಳತಿಯರು ಸಿಗುತ್ತಾರೆ, ಪ್ರತಿ ದಿನ ಹೊಸ ವ್ಯಕ್ತಿಯ ಮೇಲೆ ಆಕರ್ಷಣೆ ಆಗುತ್ತದೆ. ಹಾಗಂತ ಎಲ್ಲರೂ ಪ್ರೇಮಿಗಳು ಎನಿಸಿಕೊಳ್ಳುತ್ತಾರಾ? ಇಲ್ಲ.
ನಿಜವಾದ ಪ್ರೀತಿ ತನ್ನಿಂತಾನೇ ಹುಟ್ಟಿಕೊಳ್ಳುತ್ತದೆ. ಅದು ಹುಟ್ಟಿಕೊಂಡಾಗ ಪ್ರತಿಯೊಬ್ಬರಿಗೂ ವಿಶೇಷ ಅನುಭವ ನೀಡುತ್ತದೆ. ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಗೆ 25ನೇ ಹರೆಯದ ಬಳಿಕ ಆಗುವ ಆಕರ್ಷಣೆ ನಿಜವಾದ ಪ್ರೀತಿಯಾಗಿ ರೂಪುಗೊಳ್ಳುತ್ತದೆ. ಏಕೆಂದರೆ ಆ ಅವಧಿಯಲ್ಲಿ ಆ ವ್ಯಕ್ತಿಗೆ ಏನು ಮಾಡುತ್ತಿದ್ದೇನೆ, ಎಂಬ ಅರಿವು ಮತ್ತು ಸಮಯಪ್ರಜ್ಞೆ ಇರುತ್ತದೆ. ಪ್ರೀತಿಯನ್ನು ಆಯ್ಕೆ ಮಾಡುವ ಮನೋಧೈರ್ಯ ಆಳವಾಗಿ ಬೇರೂರಿರುತ್ತದೆ. ಸಾಧನೆಯೆಡೆಗೆ ಹಾದು ಹೋಗುವ ಶಕ್ತಿಯು ಸಹ ಆತನಲ್ಲಿ ಇರುತ್ತದೆ. ಮುಖ್ಯವಾಗಿ ಸಮಾಜ ಮತ್ತು ಜೀವನಕ್ಕಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುವ ಶಕ್ತಿಯೂ ಬಲವಾಗಿ ರೂಪುಗೊಂಡಿರುತ್ತದೆ. ಹಾಗಾಗಿ ಅದನ್ನು ನಿಜವಾದ ಪ್ರೀತಿ ಅನ್ನಬಹುದು ಮತ್ತು ಆ ಪ್ರೀತಿಯೇ ಒಬ್ಬರ ಬಾಳಿನಲ್ಲಿ ಮಹತ್ವದ್ದಾಗಿರುತ್ತದೆ. ಇದನ್ನೂ ಓದಿ: ಕಗ್ಗತ್ತಲ ದಾರಿಗೆ ಬೆಳಕು ಸೋಕಿಸಿ ಹೋದವಳು!
ಪವನ್ ಕುಮಾರ್ ಎಂ.ಕೆ
ಬಿವೋಕ್ ವಿದ್ಯಾರ್ಥಿ
ಎಸ್‍ಡಿಎಂ ಕಾಲೇಜು, ಉಜಿರೆ