ಬೆಂಗಳೂರು: ಪ್ರೇಮಿಗಳ ದಿನಾಚರಣೆ (Valentine’s Day) ಬಂತು ಅಂದ್ರೆ ಸಾಕು, ಟೀನೇಜ್ ಹುಡುಗ-ಹುಡುಗಿಯರಿಗೆ ಹಬ್ಬ. ಆದ್ರೆ ಇದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಅದನ್ನೇ ಪಾಲನೆ ಮಾಡೋದು ಸರಿಯಲ್ಲ ಅಂತಾ ಹಿಂದೂ ಸಂಘಟನೆಗಳು (Hindu Organizations) ಪ್ರತಿ ವರ್ಷದಂತೆ ಈ ವರ್ಷವೂ ಸಮರ ಸಾರಿವೆ. ಅದಕ್ಕೆ ಪೊಲೀಸರು (Police) ಕೂಡ ತಯಾರಿ ಮಾಡಿಕೊಂಡಿದ್ದಾರೆ.
Advertisement
ಈಗಾಗಲೇ ಪ್ರೇಮಿಗಳ ದಿನಾಚರಣೆ ಮಾಡಬಾರದು. ಇದನ್ನ ತಂದೆ-ತಾಯಂದಿರ ದಿನವನ್ನಾಗಿ ಆಚರಣೆ ಮಾಡಬೇಕು ಅಂತಾ ಕರೆ ಕೊಡಲಾಗಿದೆ. ಅದಕ್ಕೂ ಮೀರಿ ಪ್ರೇಮಿಗಳ ದಿನಾಚರಣೆಗೆ ಅನುಮತಿ ನೀಡಬಾರದು ಅಂತಾ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿವೆ. ಇದನ್ನೂ ಓದಿ: ಫೆ. 21ರಿಂದ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ಯಾತ್ರೆಯ ಮೂರನೇ ಟ್ರಿಪ್
Advertisement
Advertisement
ಪ್ರತಿ ವರ್ಷದಂತೆ ಈ ವರ್ಷವೂ ಈ ರೀತಿ ದಿನಾಚರಣೆಗೆ ವಿರೋಧ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ (Police Department) ಎಚ್ಚೆತ್ತುಕೊಂಡಿದೆ. ನೈತಿಕ ಪೊಲೀಸ್ಗಿರಿ ನಡೆಯೋ ಭಯದಲ್ಲಿ ಇರೋ ಪೊಲೀಸರು ಪಾರ್ಕ್ಗಳಲ್ಲಿ, ಮಾಲ್ಗಳಲ್ಲಿ ಎಚ್ಚರಿಕೆ ವಹಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: Turkey, Syria Earthquakeː ವರ್ಲ್ಡ್ ಬ್ಯಾಂಕ್ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ
Advertisement
ಪಾರ್ಕ್ಗಳಲ್ಲಿ ಪ್ರೇಮಿಗಳೇ ಎಚ್ಚರಿಕೆ ವಹಿಸಬೇಕಿದೆ. ಮಾಲ್ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮಾಲ್ನ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k