ತಾನು ಮದುವೆ ಆಗಬೇಕಿದ್ದ ಹುಡುಗನ ಕುರಿತಾದ ಆಡಿಯೋವೊಂದು ನಟಿ ವೈಷ್ಣವಿ ಮತ್ತು ನಟ ವಿದ್ಯಾಭರಣ್ ನಡುವಿನ ಬಾಂಧವ್ಯವನ್ನೇ ಹೊಸಕಿ ಹಾಕಿತ್ತು. ಆಡಿಯೋ ಬಂದಾಗಿನಿಂದ ವೈಷ್ಣವಿ ಗೌಡ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಮಗಳು ತುಂಬಾ ನೊಂದುಕೊಂಡಿದ್ದಾಳೆ. ಅವಳು ಅದರಿಂದ ಆಚೆ ಬರಲು ಸಾಕಷ್ಟು ಸಮಯ ಬೇಕು. ನಡೆದಿರುವ ಘಟನೆಯನ್ನು ಇಷ್ಟು ಬೇಗ ಅವಳು ಮರೆಯಲು ಸಾಧ್ಯವಿಲ್ಲ ಎಂದು ವೈಷ್ಣವಿ ತಾಯಿ ಮೊನ್ನೆಯಷ್ಟೇ ಹೇಳಿದ್ದರು.
Advertisement
ಆದರೆ, ವೈಷ್ಣವಿ ತುಂಬಾ ಗಟ್ಟಿಗಿತ್ತಿ. ಆಗಿರುವ ಎಲ್ಲ ಘಟನೆಗೆ ಕೇವಲ ಮೂರೇ ಮೂರು ದಿನಕ್ಕೆ ಗೋಲಿ ಹೊಡೆದು, ಟ್ಯಾಟೋ ಅಂಗಡಿಗೆ ಬಂದಿದ್ದಾರೆ. ಚಂದಾದ ಟ್ಯಾಟೋ ಹಾಕಿಸಿಕೊಂಡು ‘ದಿ ರೇಸಿಂಗ್ ವುಮನ್ ಸಿಂಬಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ತಾಯಿ ಅಂದುಕೊಂಡಷ್ಟು ತಾವು ಅಧೈರ್ಯಳಲ್ಲ ಎನ್ನುವುದನ್ನು ತೋರಿಸಿದ್ದಾರೆ.
Advertisement
Advertisement
ಅಷ್ಟಕ್ಕೂ ವೈಷ್ಣವಿ ಮತ್ತು ವಿದ್ಯಾಭರಣ್ ಇತ್ತೀಚೆಗಷ್ಟೇ ಪರಿಚಯವಾದವರು ಅಲ್ಲ. ಅವರು 2017ರಿಂದಲೂ ಪರಿಚಯಸ್ಥರು ಎನ್ನುತ್ತಾರೆ ವೈಷ್ಣವಿ ಗೌಡ ತಾಯಿ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಲವಾರು ವಿಷಯಗಳನ್ನು ಹಂಚಿಕೊಂಡರು. ವಿದ್ಯಾಭರಣ್ ಫ್ಯಾಮಿಲಿ ಆರೇಳು ವರ್ಷಗಳಿಂದಲೂ ಗೊತ್ತು. ಆದರೆ, ಸಂಪರ್ಕದಲ್ಲಿ ಇರಲಿಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
Advertisement
ವೈಷ್ಣವಿ ಕುಟುಂಬಕ್ಕೆ ವಿದ್ಯಾಭರಣ್ ಪರಿಚಯವಾಗಿದ್ದು ಒಬ್ಬ ನಟನಾಗಿದೆ. 2017ರಲ್ಲಿ ಶುರುವಾದ ಚಾಕೋಲೇಟ್ ಬಾಯ್ ಸಿನಿಮಾದಲ್ಲಿ ವಿದ್ಯಾಭರಣ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ವೈಷ್ಣವಿ ಆ ಸಿನಿಮಾದ ನಾಯಕಿ. ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಸವನ ಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆದಿತ್ತು. ಅಲ್ಲಿಯೇ ವಿದ್ಯಾಭರಣ್ ಮತ್ತ ವೈಷ್ಣವಿ ಕುಟುಂಬ ಪರಸ್ಪರ ಪರಿಚಯ ಮಾಡಿಕೊಂಡಿದೆ. ಅಲ್ಲಿಂದ ಒಂಬತ್ತು ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ನಡೆದಿದೆ.
ವಿದ್ಯಾಭರಣ್ ತಂದೆಯವರೇ ನಿರ್ಮಿಸಿದ್ದ ಬಾಬಾ ದೇವಸ್ಥಾನದಲ್ಲಿ ಎರಡ್ಮೂರು ದಿನಗಳ ಕಾಲ ಚಾಕೋಲೇಟ್ ಬಾಯ್ ಚಿತ್ರದ ಶೂಟಿಂಗ್ ನಡೆದಿತ್ತು. ಇದೇ ಸಂದರ್ಭದಲ್ಲಿ ವಿದ್ಯಾಭರಣ್ ಅವರ ಮನೆಗೂ ವೈಷ್ಣವಿ ತಾಯಿ ಹೋಗಿ ಬಂದಿದ್ದರಂತೆ. ಈ ಸಿನಿಮಾ ಅರ್ಧಕ್ಕೆ ನಿಂತ ಮೇಲೂ ಕೆಲ ತಿಂಗಳ ಕಾಲ ಪರಸ್ಪರ ಮಾತನಾಡಿದ್ದಾರೆ. ಆನಂತರ ಸಂಪರ್ಕ ಕಳೆದುಕೊಂಡಿದ್ದು. ಇತ್ತೀಚೆಗಷ್ಟೇ ಮತ್ತೆ ಬಾಂಧವ್ಯ ಬೆಳೆದು ಬೀಗರು ಆಗುವ ಮಟ್ಟಕ್ಕೆ ತಲುಪಿತ್ತು. ಆದರೆ, ಅಷ್ಟರಲ್ಲಿ ಆಡಿಯೋ ಹುಡುಗಿಯೊಬ್ಬಳು ಎಡವಟ್ಟು ಮಾಡಿಬಿಟ್ಟಿದ್ದಾರೆ.