ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ಗೆ ಸಂಬಂಧ ಪಟ್ಟಂತೆ ಎಲ್ಲವೂ ಮುಗಿದು ಹೋದ ಅಧ್ಯಾಯ ಎಂದೇ ಬಣ್ಣಿಸಲಾಗಿತ್ತು. ಈ ವಿಷಯವನ್ನು ಇಲ್ಲಿಗೆ ಬಿಟ್ಟು, ಬಿಡಿ ಎಂದು ವೈಷ್ಣವಿ ಮತ್ತು ವಿದ್ಯಾಭರಣ್ ಹೇಳಿಕೊಂಡಿದ್ದರು. ಆದರೆ, ವೈಷ್ಣವಿ ತಾಯಿ ಹೇಳುತ್ತಿರುವ ಮಾತೇ ಬೇರೆ ಇದೆ. ಎಂಗೇಜ್‌ಮೆಂಟ್‌ಗೆ ವಿಚಾರವನ್ನು ಇನ್ನೂ ಜೀವಂತವಾಗಿ ಇಡುವ ಪ್ರಯತ್ನ ಕೂಡ ನಡೆಯುತ್ತಿದೆ.
ಇಂದು ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವೈಷ್ಣವಿ ತಾಯಿ, ‘ಮೊನ್ನೆ ನಡೆದಿರುವುದು ನಿಶ್ಚಿತಾರ್ಥವಲ್ಲ. ಗಂಡಿನ ಕಡೆಯವರು ನಮ್ಮ ಮನೆಗೆ ಬಂದಿದ್ದರೂ, ಇನ್ನೂ ನಾವು ಅವರ ಮನೆಗೆ ಹೋಗಿಲ್ಲ. ಹೋಗಬೇಕು ಎನ್ನುವಷ್ಟರಲ್ಲಿ ಈ ರಾದ್ಧಾಂತ ಆಯಿತು. ವಿದ್ಯಾಭರಣ್ ತಾಯಿ ಕೂಡ ನಮ್ಮ ಜೊತೆ ಮಾತನಾಡಿದ್ದಾರೆ. ನನ್ನ ಮಗ ಅಂಥವನಲ್ಲ ಎಂದು ವಾಯ್ಸ್ ನೋಟ್ ಕಳುಹಿಸಿದ್ದಾರೆ. ನಮಗೂ ಆ ಹುಡುಗ ಒಳ್ಳೆಯವನು ಅನಿಸಿದ್ದಾನೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್
ಆಡಿಯೋ ಕಳುಹಿಸಿದ ಹುಡುಗಿಯ ಬಗ್ಗೆಯೂ ಮಾತನಾಡಿದ ಅವರು, ‘ನಮ್ಮ ಮೇಲೆ ಆ ಹುಡುಗಿಗೆ ಕಾಳಜಿ ಇದ್ದರೆ, ನೇರವಾಗಿ ನಮ್ಮ ಜೊತೆಯೇ ಮಾತನಾಡಬೇಕಿತ್ತು. ಆ ಹುಡುಗಿ ಮಾತನಾಡುತ್ತಿಲ್ಲ ಅಂದರೆ, ಅದರ ಹಿಂದೆ ಬೇರೆ ಏನೋ ಇರಬಹುದು. ನಾವು ಹುಡುಗಿಯ ಮಾತನ್ನು ನಂಬುವುದಿಲ್ಲ’ ಎಂದು ಹೇಳುವ ಮೂಲಕ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲಿಗೆ ಮುಂದೊಂದು ದಿನ ವೈಷ್ಣವಿ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ಗೆ ಆದರೂ, ಅಚ್ಚರಿ ಪಡಬೇಕಿಲ್ಲ.
ಈ ವಿಚಾರದಲ್ಲಿ ವೈಷ್ಣವಿ ನೊಂದುಕೊಂಡಿದ್ದಾರೆ. ಮೊದಲಿನಿಂದಲೂ ಅವರು ವಿದ್ಯಾಭರಣ್ ಬಗ್ಗೆ ಅಂತರ ಕಾಪಾಡಿಕೊಳ್ಳುತ್ತಲೇ ಬಂದಿದ್ದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅವರು, ‘ನಾನು ಎಂಗೇಜ್ ಮೆಂಟ್ ಮಾಡಿಕೊಂಡಿಲ್ಲ. ಅದಕ್ಕೆ ಅನುಮತಿಯನ್ನೂ ಕೊಟ್ಟಿಲ್ಲ. ಆ ಹುಡುಗ ಹೇಗೆ, ಏನು ಅಂತ ಅರ್ಥ ಮಾಡಿಕೊಳ್ಳಬೇಕು. ಆನಂತರವೇ ಹೇಳುತ್ತೇನೆ’ ಎಂದಿದ್ದರು. ಅಲ್ಲಿಗೆ ವೈಷ್ಣವಿಗೆ ಹಲವು ವಿಚಾರಗಳು ಗೊತ್ತಿದ್ದವು ಎಂದು ಅವರ ಆಪ್ತರ ಮಾತು.