ನಟಿ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಇತ್ತೀಚೆಗಷ್ಟೇ ಪರಸ್ಪರ ಪರಿಚಯವಾಗಿದ್ದರು ಎನ್ನುವುದು ಸುಳ್ಳು. ಅವರು 2017ರಿಂದಲೂ ಪರಿಚಯಸ್ಥರು ಎನ್ನುತ್ತಾರೆ ವೈಷ್ಣವಿ ಗೌಡ ತಾಯಿ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಲವಾರು ವಿಷಯಗಳನ್ನು ಹಂಚಿಕೊಂಡರು. ವಿದ್ಯಾಭರಣ್ ಫ್ಯಾಮಿಲಿ ಆರೇಳು ವರ್ಷಗಳಿಂದಲೂ ಗೊತ್ತು. ಆದರೆ, ಸಂಪರ್ಕದಲ್ಲಿ ಇರಲಿಲ್ಲವೆಂದು ಹೇಳಿದ್ದಾರೆ.
Advertisement
ವೈಷ್ಣವಿ ಕುಟುಂಬಕ್ಕೆ ವಿದ್ಯಾಭರಣ್ ಪರಿಚಯವಾಗಿದ್ದು ಒಬ್ಬ ನಟನಾಗಿದೆ. 2017ರಲ್ಲಿ ಶುರುವಾದ ಚಾಕೋಲೇಟ್ ಬಾಯ್ ಸಿನಿಮಾದಲ್ಲಿ ವಿದ್ಯಾಭರಣ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ವೈಷ್ಣವಿ ಆ ಸಿನಿಮಾದ ನಾಯಕಿ. ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಸವನ ಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆದಿತ್ತು. ಅಲ್ಲಿಯೇ ವಿದ್ಯಾಭರಣ್ ಮತ್ತ ವೈಷ್ಣವಿ ಕುಟುಂಬ ಪರಸ್ಪರ ಪರಿಚಯ ಮಾಡಿಕೊಂಡಿದೆ. ಅಲ್ಲಿಂದ ಒಂಬತ್ತು ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ನಡೆದಿದೆ. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್
Advertisement
Advertisement
ವಿದ್ಯಾಭರಣ್ ತಂದೆಯವರೇ ನಿರ್ಮಿಸಿದ್ದ ಬಾಬಾ ದೇವಸ್ಥಾನದಲ್ಲಿ ಎರಡ್ಮೂರು ದಿನಗಳ ಕಾಲ ಚಾಕೋಲೇಟ್ ಬಾಯ್ ಚಿತ್ರದ ಶೂಟಿಂಗ್ ನಡೆದಿತ್ತು. ಇದೇ ಸಂದರ್ಭದಲ್ಲಿ ವಿದ್ಯಾಭರಣ್ ಅವರ ಮನೆಗೂ ವೈಷ್ಣವಿ ತಾಯಿ ಹೋಗಿ ಬಂದಿದ್ದರಂತೆ. ಈ ಸಿನಿಮಾ ಅರ್ಧಕ್ಕೆ ನಿಂತ ಮೇಲೂ ಕೆಲ ತಿಂಗಳ ಕಾಲ ಪರಸ್ಪರ ಮಾತನಾಡಿದ್ದಾರೆ. ಆನಂತರ ಸಂಪರ್ಕ ಕಳೆದುಕೊಂಡಿದ್ದು. ಇತ್ತೀಚೆಗಷ್ಟೇ ಮತ್ತೆ ಬಾಂಧವ್ಯ ಬೆಳೆದು ಬೀಗರು ಆಗುವ ಮಟ್ಟಕ್ಕೆ ತಲುಪಿತ್ತು. ಆದರೆ, ಅಷ್ಟರಲ್ಲಿ ಆಡಿಯೋ ಹುಡುಗಿಯೊಬ್ಬಳು ಎಡವಟ್ಟು ಮಾಡಿಬಿಟ್ಟಿದ್ದಾರೆ.
Advertisement
ನಟಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದ್ಯಾಭರಣ್ ನಡತೆ ಸರಿ ಇಲ್ಲ ಎಂದು ಹುಡುಗಿಯೊಬ್ಬಳು ಆಡಿಯೋ ಮೂಲಕ ಹೇಳಿದ ವಿಷಯ ಮೊದಲು ಗೊತ್ತಾಗಿದ್ದು ವೈಷ್ಣವಿ ಅವರ ತಾಯಿಗೆ. ಈ ವಿಡಿಯೋ ಇಟ್ಟುಕೊಂಡು ವಿದ್ಯಾಭರಣ್ ತಾಯಿಯನ್ನು ವೈಷ್ಣವಿ ತಾಯಿ ವಿಚಾರಿಸಿದಾಗ, ವಿದ್ಯಾಭರಣ್ ತಾಯಿ ವಾಯ್ಸ್ ನೋಟ್ಸ್ ವೊಂದನ್ನು ಕಳುಹಿಸಿದ್ದಾರೆ.
ವೈಷ್ಣವಿ ಅವರ ತಾಯಿಗೆ ಕಳುಹಿಸಿದ ವಾಯ್ಸ್ ನೋಟ್ಸ್ ಅನ್ನು ಮಾಧ್ಯಮಗಳ ಮುಂದೆ ಕೇಳಿಸಿದ್ದು, ‘ನೀವು ಸಮಾಧಾನವಾಗಿರಿ. ನಮ್ಮ ಕಡೆಯಿಂದ ತಪ್ಪಾಗಿದೆ. ಆ ಹುಡುಗಿ ಹೇಳುವಷ್ಟು ನನ್ನ ಮಗ ಕೆಟ್ಟವನಲ್ಲ. ಯಾರು ಹೀಗೆ ಮಾಡಿದ್ದಾರೆ ಅನ್ನೊದನ್ನ ಪತ್ತೆ ಹಚ್ಚುವವರೆಗೆ ಸ್ವಲ್ಪ ಸಮಾಧಾನವಾಗಿರಿ’ ಎಂದು ವಿದ್ಯಾಭರಣ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.
ವಿದ್ಯಾಭರಣ್ ಕೂಡ ಮಾಧ್ಯಮಗಳ ಮುಂದೆ ಈ ವಿಷಯವನ್ನು ಪದೇ ಪದೇ ಹೇಳುತ್ತಲೇ ಇದ್ದಾರೆ. ನನಗೆ ಗರ್ಲ್ ಫ್ರೆಂಡ್ ಇದ್ದದ್ದು ನಿಜ. ಆದರೆ, ನಾನು ಯಾರೊಂದಿಗೂ ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ರಿಲೇಶನ್ಶಿಪ್ ಅಲ್ಲಿ ಇದ್ದದ್ದು ಹಳೆಯ ಕಥೆ. ಅದನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತಾಡುತ್ತಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಮತ್ತು ನನ್ನ ಕುಟುಂಬದ ಮಾನವನ್ನು ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.