ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಟಿಯ ಫ್ಯಾನ್ಸ್‌ಗೆ ಕಹಿ ಸುದ್ದಿ ಸಿಕ್ಕಿದೆ. ಸೀತಾ ಪಾತ್ರ ಅಂತ್ಯವಾಗಿರೋದರ ಬಗ್ಗೆ ನಟಿ ಭಾವುಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ದಾಂಪತ್ಯದ ಪಾಠ ಹೇಳಿದ ರಾಧಿಕಾ ಪಂಡಿತ್
ಒಂದು ಅಂತ್ಯವು ಹೊಸ ಆರಂಭಕ್ಕೆ ಮುನ್ನುಡಿ. ನನ್ನ ವೃತ್ತಿ ಜೀವನದಲ್ಲಿ ‘ಸೀತಾ ರಾಮ’ (Seetha Rama) ಎಂದಿಗೂ ನೆನಪಲ್ಲಿಟ್ಟುಕೊಳ್ಳುವಂತಹ ಪ್ರಾಜೆಕ್ಟ್. ಈ ಸೀರಿಯಲ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಗೆ ಥ್ಯಾಂಕ್ಯೂ. ಶೀಘ್ರದಲ್ಲಿ ಅದ್ಭುತವಾದ ಪ್ರಾಜೆಕ್ಟ್ ಜೊತೆ ನಿಮ್ಮ ಮುಂದೆ ಬರುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ವೈಷ್ಣವಿ ಗೌಡ ಭಾವುಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲಿ ಮಾತನಾಡಿದ ಪವನ್ ಕಲ್ಯಾಣ್
View this post on Instagram
ಪ್ರಸ್ತುತ ‘ಸೀತಾ ರಾಮ’ ಸೀರಿಯಲ್ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಸದ್ಯದಲ್ಲೇ ಅಂತ್ಯ ಕಾಣಲಿದೆಯಾ ಎಂಬುದನ್ನು ವಾಹಿನಿ ಆಗಲಿ ಕಲಾವಿದರಾಗಲಿ ತಿಳಿಸಿಲ್ಲ. ಈ ಸೀರಿಯಲ್ ಅಂತ್ಯವಾಗಿದೆ ಎನ್ನಲಾದ ಕೆಲ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಅದಕ್ಕೆ ಪೂರಕವೆಂಬಂತೆ ವೈಷ್ಣವಿ ‘ಸೀತಾ’ ಪಾತ್ರಕ್ಕೆ ಗುಡ್ ಬೈ ಹೇಳಿರುವ ಪೋಸ್ಟ್ ನೋಡಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.
ಈ ಸೀರಿಯಲ್‌ನಲ್ಲಿ ಸೀತಾ ಆಗಿ ವೈಷ್ಣವಿ, ರಾಮ ಪಾತ್ರದಲ್ಲಿ ಗಗನ್ ಗೌಡ, ಮಗಳ ಪಾತ್ರದಲ್ಲಿ ಸಿಹಿ ಅಲಿಯಾಸ್ ರೀತು ಸಿಂಗ್ ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟಿಸಿದ್ದಾರೆ.