ಜನರನ್ನು ಚಿತ್ರಮಂದಿರಕ್ಕೆ ಕರೆತರಲು ವಿನೂತನ ರೀತಿಯ ಶೀರ್ಷಿಕೆ, ಪ್ರಚಾರ ನಡೆಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ವೈಕುಂಠ ಸಮಾರಾಧನೆ’ (Vaikunta Samaaraadhane) ಚಿತ್ರವೊಂದು ಸೇರ್ಪಡೆಯಾಗಿದೆ. ವೃತ್ತಿಯಲ್ಲಿ ಹೆಸರು ಮಾಡಿರುವ ಅಡ್ವೋಕೇಟ್ ರಜತ್ ಮೌರ್ಯ (Rajat Maurya) ಅವರ ಪ್ರವೃತ್ತಿ ಬಣ್ಣದಲೋಕ. ಬಿಡುವಿನ ವೇಳೆಯಲ್ಲಿ ನಟನೆ, ನಿರ್ದೇಶನದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಮಾಡೆಲ್ ಆಗಿದ್ದು, ಇವರ ಅಭಿನಯದ ಜಾಹಿರಾತುಗಳು ಐಪಿಎಲ್ ಪಂದ್ಯಗಳಲ್ಲಿ ಸ್ಟ್ರೀಮಿಂಗ್ ಆಗಿದೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ,ಚಿತ್ರಕಥೆ,ನಿರ್ದೇಶನ ಮತ್ತು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಗೇರ್‌ಗಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಆಶಾ ಗೇರ್‌ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಕಿ ಜಯಂತಿ ಶ್ರಾವಣ ಶನಿವಾರ ಶುಭ ದಿನದಂದು ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು.
ಸದಭಿರುಚಿಯ ’ಬ್ಲಿಂಕ್’ ’ಜಲಪಾತ’ ’ಶಾಖಾಹಾರಿ’ ’ಕೆರೆಬೇಟೆ’ ’4ಎನ್6’ ಮತ್ತು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ’ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ’ ವಾರ್ಡನ್ ಖ್ಯಾತಿಯ ಮಂಜುನಾಥ್ ಮತ್ತು ವಕೀಲರುಗಳು ಆಗಮಿಸಿ ಸ್ನೇಹಿತನಿಗೆ ಶುಭ ಹಾರೈಸಿದರು. ’ಇದು ನಮ್ಮ ಸಿನಿಮಾದ ಡೆತ್ ಲುಕ್ ಪೋಸ್ಟರ್’ ಎಂದು ವೈಕುಂಠ ಸಮಾರಾಧನೆ ಪತ್ರಿಕೆ ರೀತಿಯಲ್ಲಿಯೇ ಕಪ್ಪು ಬಿಳುಪಿನಲ್ಲಿ ಸಿದ್ದಗೊಂಡಿದ್ದು, ಜನನ, ಮರಣ ಇರುವಂತೆ ಇದರಲ್ಲಿ ಮುಹೂರ್ತ 10.8.24 ರಿಲೀಸ್ 12.12.25 ಎಂಬುದಾಗಿ ಹೇಳಿಕೊಂಡಿದೆ. ಈಗಾಗಲೇ ಡೆತ್ ಲುಕ್ ಪೋಸ್ಟರ್ ರೀಲ್ಸ್ ವೈರಲ್ ಆಗಿದ್ದು, ಎಲ್ಲಾ ಕಡೆ ಸದ್ದು ಮಾಡುತ್ತಿದೆ.
ಸಂಗೀತ ರುತ್ವಿಕ್‌ಮುರಳಿಧರ್, ಛಾಯಾಗ್ರಹಣ ಹರ್ಷಿತ್.ಬಿ.ಗೌಡ, ಕಾರ್ಯಕಾರಿ ನಿರ್ಮಾಪಕ ನಾಗೇಂದ್ರ ಯಡಿಯಾಳ್ ಅವರದಾಗಿದೆ. ಆದರ್ಶ್‌ಬೆಳ್ಳೂರು, ದರ್ಶನ್‌ಕುಮಾರ್, ಸಿದ್ದಾನ್ ವಿಜಯ್, ನವೀನ್, ಸಚ್ಚಿನ್ ನಿರ್ದೇಶನ ತಂಡದಲ್ಲಿ ಇರುತ್ತಾರೆ. ಶೇಕಡ 60 ರಷ್ಟು ಮಲೆನಾಡು, ಉಳಿದುದನ್ನು ಬೆಂಗಳೂರು ಸುತ್ತಮತ್ತ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿದೆ.