ರಾಯಚೂರು: ವೈಕುಂಠ ಏಕಾದಶಿ ಹಿನ್ನೆಲೆ ರಾಯಚೂರಿನ (Raichuru) ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ (Venkateshwar Swamy) ಬೆಳಗಿನ ಜಾವದಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿದೆ.
ನವೋದಯ ಶಿಕ್ಷಣ ಸಂಸ್ಥೆ ಆವರಣದ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನ ಜಾವ 5 ಗಂಟೆಯಿಂದ ಪೂಜೆ ಆರಂಭವಾಗಿದ್ದು, ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ, ದರ್ಶನ ಪಡೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ದಿನ ಉಪವಾಸವಿದ್ದು ಪೂಜೆ ಮಾಡಿದರೆ, ಜನ್ಮ ಜನ್ಮಾಂತರದ ಪಾಪಗಳು ಕಳೆಯುತ್ತವೆ ಅನ್ನೋ ನಂಬಿಕೆಯಿರುವುದರಿAದ ಭಕ್ತರು ಉಪವಾಸ ಮಾಡಿ, ದೇವರ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವೈಕುಂಠ ಏಕಾದಶಿ – ಮಾಲೂರಿನ ಚಿಕ್ಕ ತಿರುಪತಿ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ
ಇಂದು ವೈಕುಂಠ ದ್ವಾರ ತೆರೆದಿರುತ್ತದೆ, ದೇವರ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆಯೂ ಇದೆ. ಈ ಹಿನ್ನೆಲೆ ವೆಂಕಟೇಶ್ವರ ದೇವಾಲಯಗಳಲ್ಲಿ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದು, ಪಾರಾಯಣ ನಡೆಯಲಿದೆ.

