ತೂಫಾನ್‌ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ

Public TV
2 Min Read
Vaibhav Suryavanshi

ಲಂಡನ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL) ಸ್ಫೋಟಕ ಶತಕ ಸಿಡಿಸಿ ದೇಶದ್ಯಾಂತ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿದ್ದ ವೈಭವ್‌ ಸೂರ್ಯವಂಶಿ (Vaibhav Suryavanshi) ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯವನ್ನ ಸಾಬೀತು ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ (England) ನಡೆಯುತ್ತಿರುವ ಯೂತ್ ಏಕದಿನ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ವೈಭವ್‌ ವಿಶ್ವದಾಖಲೆ ಬರೆದಿದ್ದಾರೆ.

Vaibhav Suryavanshi 2

ಹೌದು. 14 ವರ್ಷದ ಯುವ ಆಟಗಾರ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಆರಂಭದಿಂದಲೇ ಇಂಗ್ಲೆಂಡ್‌ (ಅಂಡರ್‌-19) ಬೌಲರ್‌ಗಳ ಬೆವರಿಳಿಸಲು ಶುರು ಮಾಡಿದ ವೈಭವ್‌ ಕೇವಲ 52 ಎಸೆಗಳಲ್ಲಿ ಸಿಡಿಲಬ್ಬರದ ಶತಕ (Fastest hundreds) ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಯೂತ್‌ ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ನಂ.1 ಆಟಗಾರನಾಗಿದ್ದಾರೆ. ಜೊತೆಗೆ ಯೂತ್‌ ಏಕದಿನ ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್‌

Vaibhav Suryavanshi 3

4ನೇ ಏಕದಿನ ಪಂದ್ಯದಲ್ಲಿ ಟಿ20 ಶೈಲಿಯ ಬ್ಯಾಟಿಂಗ್‌ ಪ್ರದರ್ಶಿಸಿದ ವೈಭವ್‌ 10 ಬೌಂಡರಿ, 7 ಸಿಕ್ಸರ್‌ ಸಹಿತ 52 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ಇನ್ನಿಂಗ್ಸ್‌ನಲ್ಲಿ ಒಟ್ಟು 78 ಎಸೆತಗಳನ್ನು ಎದುರಿಸಿದ ಸೂರ್ಯವಂಶಿ 10 ಸಿಕ್ಸರ್‌, 13 ಬೌಂಡರಿ ಸಹಿತ 143 ರನ್‌ ಪೇರಿಸಿ ಔಟಾದರು. ಈ ಮೂಲಕ ವೈಭವ್ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನದ ಕಮ್ರಾಮ್ ಗುಲಾಮ್ ಅವರ ಹೆಸರಿನಲ್ಲಿತ್ತು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಗಿಲ್‌ ಚೊಚ್ಚಲ ದ್ವಿಶತಕ – ಗವಾಸ್ಕರ್‌, ಕೊಹ್ಲಿ ಸೇರಿ ಹಲವು ದಿಗ್ಗಜರ ದಾಖಲೆ ಪುಡಿ ಪುಡಿ 

ಯೂತ್ ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ಟಾಪ್‌-5 ಬ್ಯಾಟರ್ಸ್‌
* 52 ಎಸೆತ – ವೈಭವ್ ಸೂರ್ಯವಂಶಿ – ಭಾರತ U19 vs ಇಂಗ್ಲೆಂಡ್ U19 – 2025
* 53 ಎಸೆತ – ಕಮ್ರಾನ್ ಗುಲಾಮ್ – ಪಾಕಿಸ್ತಾನ U19 vs ಇಂಗ್ಲೆಂಡ್ U19 – 2013
* 68 ಎಸೆತ – ತಮೀಮ್ ಇಕ್ಬಾಲ್ – ಬಾಂಗ್ಲಾದೇಶ U19 vs ಇಂಗ್ಲೆಂಡ್ U19 – 2005/06
* 69 ಎಸೆತ – ರಾಜ್ ಅಂಗದ್ ಬಾವಾ – ಭಾರತ U19 vs ಉಗಾಂಡಾ U19 – 2021/22
* 70 ಎಸೆತ – ಶಾನ್ ಮಾರ್ಷ್ – ಆಸ್ಟ್ರೇಲಿಯಾ U19 vs ಕೀನ್ಯಾ U19 – 2001/02

Share This Article