ಗೌರಿ ಹಂತಕ ಆರೋಪಿ ವಾಗ್ಮೋರೆಗೆ ಪಶ್ಚಾತ್ತಾಪ – ಕೋರ್ಟ್ ನಲ್ಲಿ ನೀಡ್ತಾನಂತೆ ತಪ್ಪೊಪ್ಪಿಗೆ ಹೇಳಿಕೆ!

Public TV
1 Min Read
GOWRI LAKNESH PARASHURAM WAGMORE

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ನಲ್ಲಿ ಬಂಧಿತನಾಗಿರುವ ಹಂತಕ ಆರೋಪಿ ಪರಶುರಾಮ್ ವಾಗ್ಮೋರೆಗೆ ಪಶ್ಚಾತಾಪ ಆಗಿದೆಯಂತೆ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟವನ್ನು ನಿಲ್ಲಿಸಿ ತಾನು ಮಾಡಿದ್ದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಐಪಿಸಿ ಸೆಕ್ಷನ್ 314ರ ಅಡಿಯಲ್ಲಿ ತಪ್ಪೊಪ್ಪಿಗೆ ಸ್ಟೇಟ್‍ಮೆಂಟ್ ನೀಡಲು ತಯಾರಾಗಿದ್ದು, ನಾನು ಮಾಡಿದ್ದು ತಪ್ಪಾಯ್ತು. ನ್ಯಾಯಾಧೀಶರ ಮುಂದೆ ಎಲ್ಲವನ್ನೂ ಹೇಳ್ತೀನಿ ಎಂದಿದ್ದಾನೆ. ಹೀಗಾಗಿ ಎಸ್‍ಐಟಿ ಅಧಿಕಾರಿಗಳು ವಾಗ್ಮೋರೆ ಸ್ಟೇಟ್‍ಮೆಂಟ್ ರೆಕಾರ್ಡ್ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.

PARASHURAM

ಒಂದು ವೇಳೆ ಪರಶುರಾಮ್ ವಾಗ್ಮೋರೆ ಸ್ಟೇಟ್‍ಮೆಂಟ್ ಕೊಟ್ಟರೆ, ಈವರೆಗೆ ಬಾಯಿ ಬಿಡದೆ ಸುಮ್ಮನಿದ್ದ ಐವರು ಆರೋಪಿಗಳಿಗೆ ಸಂಕಷ್ಟ ಎದುರಾಗಲಿದೆ.

ಪರುಶುರಾಮ್ ವಾಗ್ಮೋರೆ, ಎಸ್‍ಐಟಿ ಪೊಲೀಸರ ತನಿಖೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸ್ತಿರೋದು ಎಸ್‍ಐಟಿ ಪೊಲೀಸರಿಗೆ ಖುಷಿ ತಂದಿತ್ತು. ಇದರ ಬೆನ್ನಲ್ಲೆ ಪರುಶುರಾಮ್ ತನ್ನ ತಾಯಿಯನ್ನು ಒಮ್ಮೆ ನೋಡಬೇಕು ಅನ್ನೋ ಆಸೆಯನ್ನು ಎಸ್‍ಐಟಿ ಪೊಲೀಸರ ಮುಂದೆ ಹೇಳಿಕೊಂಡಿದ್ದನು. ಈ ಬೇಡಿಕೆಗೆ ಸ್ಪಂದಿಸಿದ ಎಸ್‍ಐಟಿ ಅಧಿಕಾರಿಗಳು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿರುವ ಎಸ್‍ಐಟಿಯಲ್ಲಿ ಪರುಶುರಾಮ್ ತಾಯಿ ಮತ್ತು ತಂದೆಯನ್ನು ಭೇಟಿಗೆ ಅವಕಾಶ ಮಾಡಿಕೊಟ್ಟಿದ್ರು.

Share This Article
Leave a Comment

Leave a Reply

Your email address will not be published. Required fields are marked *