ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚಾಲೆಂಜ್‍ಗಳು ವೈರಲ್ ಆಗುತ್ತಲೇ ಇರುತ್ತದೆ. ಈಗ ಇಂಟರ್‌ನೆಟ್‌ನಲ್ಲಿ ವ್ಯಾಕ್ಯೂಮ್ ಚಾಲೆಂಜ್ ಸದ್ದು ಮಾಡುತ್ತಿದೆ.
ಈ ಚಾಲೆಂಜ್ ಅನ್ನು ವ್ಯಾಕ್ಯೂಮ್ ಚಾಲೆಂಜ್ ಅಥವಾ ಬಿನ್ ಬ್ಯಾಗ್ ಚಾಲೆಂಜ್ ಎಂದು ಕರೆಯಲಾಗುತ್ತದೆ. ಬಹಳ ಅಪಾಯಕಾರಿಯಾದ ಈ ಚಾಲೆಂಜ್‍ಗೆ ದೊಡ್ಡದಾದ ಪ್ಲಾಸ್ಟಿಕ್ ಬಿನ್‍ಬ್ಯಾಗ್ ಹಾಗೂ ವ್ಯಾಕ್ಯೂಮ್ ಕ್ಲೀನರ್ ಬೇಕಾಗುತ್ತದೆ.
Advertisement
https://twitter.com/EJHaston/status/1134362842843549696?ref_src=twsrc%5Etfw%7Ctwcamp%5Etweetembed%7Ctwterm%5E1134362842843549696%7Ctwgr%5E393039363b636f6e74726f6c&ref_url=https%3A%2F%2Fwww.indiatoday.in%2Ftrending-news%2Fstory%2F-vacuumchallenge-is-the-newest-viral-trend-taking-internet-by-storm-see-crazy-videos-1541279-2019-06-03
Advertisement
ಈ ಚಾಲೆಂಜ್ ಮಾಡುವವರು ಪ್ಲಾಸ್ಟಿಕ್ ಬಿನ್ ಬ್ಯಾಗ್ ಒಳಗಡೆ ಕೂರಬೇಕು. ಮತ್ತೊಬ್ಬರು ಪ್ಲಾಸ್ಟಿಕ್ ಕವರ್ ಒಳಗಿರುವ ಗಾಳಿಯನ್ನು ವ್ಯಾಕ್ಯೂಮ್ ಕ್ಲೀನರ್ ಮೂಲಕ ತೆಗೆಯಬೇಕು. ಆಗ ಬಿನ್‍ಬ್ಯಾಗ್‍ನಲ್ಲಿ ಕೂತಿರುವ ವ್ಯಕ್ತಿಯ ದೇಹಕ್ಕೆ ಪ್ಲಾಸ್ಟಿಕ್ ಕವರ್ ಅಂಟಿಕೊಳ್ಳುತ್ತದೆ. ಇದೇ ಈ ಚಾಲೆಂಜಿನ ವಿಶೇಷ.
Advertisement
Tried the #vacuumchallenge….
Can you tell it’s exam season pic.twitter.com/5Dh8NmsZxv
— Abby (@AbbyFabs) May 29, 2019
Advertisement
ಈ ಚಾಲೆಂಜ್ ಅನ್ನು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಪ್ರಯತ್ನಿಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ಚಾಲೆಂಜ್ ಅಪಾಯ ಎಂದು ಗೊತ್ತಿದ್ದರೂ, ಜನರು ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ.
ಈ ಹಿಂದೆ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಕೀಕೀ ಚಾಲೆಂಜ್, ಮೊಮೋ ಚಾಲೆಂಜ್ ಸೇರಿದಂತೆ ಹಲವು ಚಾಲೆಂಜ್ ವೈರಲ್ ಆಗಿತ್ತು. ಈ ಎಲ್ಲ ಚಾಲೆಂಜ್ ಈಗ ಮರೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಕ್ಯೂಮ್ ಚಾಲೆಂಜ್ ವೈರಲ್ ಆಗುತ್ತಿದೆ.
https://twitter.com/peonies76/status/1133809823408099328?ref_src=twsrc%5Etfw%7Ctwcamp%5Etweetembed%7Ctwterm%5E1133809823408099328%7Ctwgr%5E393039363b636f6e74726f6c&ref_url=https%3A%2F%2Fwww.indiatoday.in%2Ftrending-news%2Fstory%2F-vacuumchallenge-is-the-newest-viral-trend-taking-internet-by-storm-see-crazy-videos-1541279-2019-06-03