ದಾವಣಗೆರೆ: ರಾಜಕಾರಣಿಗಳು ರಾಜಕೀಯಕ್ಕಾಗಿ ಮಠಗಳನ್ನು, ಸ್ವಾಮಿಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಅವರ ಮಾತನ್ನು ಮಾತ್ರ ಕೇಳೋದಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಹರಿಹರದ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರಜಾತ್ರೆಯಲ್ಲಿ ಮಾತನಾಡಿದ ಅವರು, ನಿನ್ನೆ ಸ್ವಾಮೀಜಿ ಹಾಗೂ ಯಡಿಯೂರಪ್ಪ ಅವರ ನಡುವೆ ನಡೆದ ವಾಗ್ವಾದ ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಜಕಾರಣಿಗಳು ಮಠಾಧೀಶರ ಮಾತನ್ನು ತಾಳ್ಮೆಯಿಂದ ಕೇಳಬೇಕು. ಏಕೆಂದರೆ ರಾಜಕಾರಣಿಗಳು ರಾಜಕೀಯಕ್ಕಾಗಿ ಮಠಗಳನ್ನು, ಸ್ವಾಮಿಗಳನ್ನು ಬಳಸಿಕೊಳ್ಳುತ್ತಾರೆ. ಆದೇ ರೀತಿ ಮಠಾಧೀಶರ ಮಾತನ್ನು ತಾಳ್ಮೆಯಿಂದ ಕೇಳಬೇಕು. ಅಧಿಕಾರದಲ್ಲಿರುವಾಗ ಅವಕಾಶ ಕೇಳುವುದು ಸಹಜ. ಇಲ್ಲವಾದರೆ ಅಧಿಕಾರ ಇಲ್ಲದವರನ್ನು ಯಾರು ಕೇಳಲು ಆಗಲ್ಲ ಎಂದು ವಚನಾನಂದ ಶ್ರೀಗಳ ಪರ ಬ್ಯಾಟ್ ಬೀಸಿದರು.
Advertisement
Advertisement
ಈ ವೇಳೆ ಪಂಚಮಸಾಲಿ ಸ್ವಾಮೀಜಿ ವಚನಾನಂದ ಶ್ರೀಗಳಿಗೆ ಡಿಕೆಶಿ ಸಾಂತ್ವಾನ ಹೇಳಿದ್ದು, ಸ್ವಾಮಿಗಳೇ ಬೇಸರವಾಗಬೇಡಿ. ನಡೆಡೆಯುವವರು ಎಡವುತ್ತಾರೆ, ಕೂದಲು ಮುಪ್ಪಾದಾಗ ಸರಿಯಾಗ್ತಾರೆ. ಓಟು ಹಾಕಿಸೋಕೆ ಮಠಾಧೀಶರು ಬೇಕು, ಸಚಿವ ಸ್ಥಾನ ಕೇಳೋದು ಬೇಡ್ವಾ ಎಂದು ಡಿಕೆಶಿ ಪ್ರಶ್ನಿಸಿದರು.
Advertisement
ನಾನು ಸಭೆಯಲ್ಲಿ ಸನ್ಮಾನಕ್ಕಾಗಿ ನಾನು ಬಂದಿಲ್ಲ. ವಚನಾನಂದ ಶ್ರೀಗಳ ಪೀಠದ ಜೊತೆ ನಾನಿದ್ದೇನೆ ಎಂದು ಹೇಳಲು ಬಂದಿದ್ದೇನೆ ಎಂದು ಹೇಳುವ ಮೂಲಕ ಪಂಚಮಸಾಲಿ ಸಮಾಜದ ಜೊತೆ ಇರುತ್ತೇವೆ ಎಂಬ ಭರವಸೆಯನ್ನು ನೀಡಿದರು.