ರಾಯಚೂರು: ಇತ್ತೀಚೆಗೆ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ (Teachers) ವರ್ಗಾವಣೆಯಿಂದ (Transfer) ಜಿಲ್ಲೆಯ ಬಹುತೇಕ ಶಾಲೆಗಳಿಗೆ ಶಿಕ್ಷಕರ ಕೊರತೆ ಎದುರಾಗಿದೆ. ಶಾಲೆಗಳಲ್ಲಿ (Schools) ವಿದ್ಯಾರ್ಥಿಗಳಿಗೆ (Students) ಪಾಠ ಮಾಡುವವರೇ ಇಲ್ಲದಂತಾಗಿದೆ. ಅದೇ ರೀತಿ ರಾಯಚೂರು (Raichur) ಜಿಲ್ಲೆಯ 160 ಶಾಲೆಗಳಿಗೆ ಒಬ್ಬರೇ ಒಬ್ಬರೂ ಶಿಕ್ಷಕರಿಲ್ಲದಂತಾಗಿದೆ. ಇನ್ನೊಂದೆಡೆ ಶಿಕ್ಷಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರತಿವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶಗಳು ಬಂದಾಗ ರಾಯಚೂರು ಜಿಲ್ಲೆ ಕಡೆಯ ಸ್ಥಾನಗಳಲ್ಲೇ ಇರುತ್ತದೆ. ಇದರಿಂದ ಈ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಎಷ್ಟರಮಟ್ಟಿಗಿದೆ ಎನ್ನುವುದು ಜಗಜ್ಜಾಹೀರಾಗುತ್ತಿದೆ. ಆದರೂ ಸಹ ಇದ್ಯಾವುದನ್ನೂ ಯೋಚಿಸದೆ, ಮುನ್ನೆಚ್ಚರಿಕಾ ಪೂರ್ವ ಸಿದ್ಧತೆಯಿಲ್ಲದೇ ಶಿಕ್ಷಣ ಇಲಾಖೆ ಶಿಕ್ಷಕರ ವರ್ಗಾವಣೆಯನ್ನು ಮಾಡಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರೇ ಇಲ್ಲದಂತೆ ಮಾಡಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈಶ್ವರ್ ಖಂಡ್ರೆ ಕಾಲಿಗೆ ಶರಣು- ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಶಾಸಕ ಸಲಗರ್?
ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 52%ರಷ್ಟು ಹುದ್ದೆಗಳು ಖಾಲಿಯಾದರೆ, ಪ್ರೌಢಶಾಲೆಗಳಲ್ಲಿ 37%ರಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. ಈ ಜಿಲ್ಲೆಯ 160 ಶಾಲೆಗಳಿಗೆ ಒಬ್ಬರೇ ಒಬ್ಬರೂ ಶಿಕ್ಷಕರಿಲ್ಲ. ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ 82 ಶಾಲೆ, ಲಿಂಗಸುಗೂರಿನಲ್ಲಿ 29, ಮಾನ್ವಿಯಲ್ಲಿ 26, ರಾಯಚೂರಿನಲ್ಲಿ 9, ಸಿಂಧನೂರು ತಾಲೂಕಿನಲ್ಲಿ 14 ಶಾಲೆಗಳಿಗೆ ಒಬ್ಬ ಶಿಕ್ಷಕರು ಸಹಾ ಇಲ್ಲಾ. ಅಕ್ಕಪಕ್ಕದ ಶಾಲೆಗಳ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಆಡಳಿತ ಹಾಗೂ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದೆ. ಆದರೆ ಮಕ್ಕಳ ಬೋಧನೆಗೆ ತೀರಾ ತೊಂದರೆಯಾಗಬಾರದು ಎಂದು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿರುವ ಶಿಕ್ಷಕರಿಗೆ ವರ್ಗಾವಣೆ ಆದೇಶ ನೀಡದೆ ತಡೆ ಹಿಡಿಯಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ
15-20 ವರ್ಷಗಳಿಂದ ವರ್ಗಾವಣೆಯಿಲ್ಲದೆ ದುಡಿದ ಅನ್ಯ ಜಿಲ್ಲೆಯ ಶಿಕ್ಷಕರು ವರ್ಗಾವಣೆಯಾದರೂ ಬಿಡುಗಡೆ ಭಾಗ್ಯ ಹೊಂದಿಲ್ಲ. ಅತಿಥಿ ಶಿಕ್ಷಕರ ನೇಮಕಾತಿಗೆ ಈಗ ಆದೇಶ ಮಾಡಿದ್ದರೂ ಶಿಕ್ಷಕರ ಕೊರತೆ ಬಹಳಷ್ಟಿದೆ. ಶೈಕ್ಷಣಿಕ ಗುಣಮಟ್ಟ ಹಾಳಾಗದ ಹಾಗೆ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ, ಅತಿಥಿ ಶಿಕ್ಷಕರ ನೇಮಕಾತಿಗೆ ಈ ಮೊದಲೇ ಸರ್ಕಾರ ಆದೇಶ ಮಾಡಬೇಕಾಗಿತ್ತು ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಘರ್ ವಾಪ್ಸಿ ಅಂತ ಮಾಡುವುದಕ್ಕೆ ಹೋದರೆ ಅರ್ಧ ಬಿಜೆಪಿ, ಅರ್ಧ ಜೆಡಿಎಸ್ ಖಾಲಿಯಾಗುತ್ತೆ: ಪ್ರಿಯಾಂಕ್ ಖರ್ಗೆ
ರಾಯಚೂರು ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿ ಈಗ ಇನ್ನಷ್ಟು ಹದಗೆಡುವ ಲಕ್ಷಣಗಳು ಕಾಣುತ್ತಿವೆ. ಶಿಕ್ಷಕರೇ ಇಲ್ಲದೇ ನೂರಾರು ಶಾಲೆಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ. ಕನಿಷ್ಠ ಸರ್ಕಾರ ಈಗಲಾದರೂ ಎಚ್ಚೆತ್ತು ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಪೋಷಕರು ಹಾಗೂ ಶಿಕ್ಷಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿನ ಬಳಿಕ ದಳಪತಿಗೆ ಶಾಕ್ – ಪುಟ್ಟರಾಜುಗೆ ‘ಕೈ’ ನಾಯಕರಿಂದ ಗಾಳ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]