ಮುಂಬೈ: ವಿಶ್ವಕಪ್ ಮುಕ್ತಾಯದೊಂದಿಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅಧಿಕಾರಾವಧಿಯೂ ಮುಗಿದಿದೆ. ಬಿಸಿಸಿಐ ಇನ್ನೊಂದು ವರ್ಷ ರಾಹುಲ್ ದ್ರಾವಿಡ್‍ರನ್ನು ಮುಂದುವರಿಸಲು ಬಯಸಿದೆ. ಆದರೆ ರಾಹುಲ್ ದ್ರಾವಿಡ್ ಕೋಚ್ (Coach) ಆಗಿ ಮುಂದುವರಿಯಲು ಒಪ್ಪುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ವಿವಿಎಸ್ ಲಕ್ಷ್ಮಣ್‍ರನ್ನು (VVS Laxman) ಕೋಚ್ ಹುದ್ದೆಗೆ ಪರಿಗಣಿಸಲು ಬಿಸಿಸಿಐ ಮುಂದಾಗಿದೆ.
Advertisement
ಈಗಾಗಲೇ ಟಿ-20 (T20 Cricket) ಟೂರ್ನಿಗೆ ಲಕ್ಷ್ಮಣ್ ತಂಡದ ಉಸ್ತುವಾರಿ ವಹಿಸಿದ್ದಾರೆ. ಇನ್ನು ವಿಶ್ವಕಪ್ ಸೋತ ನಂತರ ಡ್ರೆಸ್ಸಿಂಗ್ ರೂಂಗೆ ಭೇಟಿ ಕೊಟ್ಟು ಧೈರ್ಯ ತುಂಬಿದ ಪ್ರಧಾನಿ ಮೋದಿಗೆ ವೇಗದ ಬೌಲರ್ ಶಮಿ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ಭೇಟಿಯಿಂದ ನಮ್ಮ ಸ್ಥೈರ್ಯ ದ್ವಿಗುಣವಾಗಿದೆ ಅಂದಿದ್ದಾರೆ. ಆದರೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಅಖಿಲೇಶ್ ಮಾದರಿಯ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!
Advertisement
Advertisement
ಫೈನಲ್ ಪಂದ್ಯ ಕೋಲ್ಕತ್ತಾ ಮುಂಬೈನಲ್ಲಿ ನಡೆದಿದ್ರೆ ಭಾರತವೇ ಗೆಲ್ತಿತ್ತು ಎಂದಿದ್ದಾರೆ. ಈ ಮಧ್ಯೆ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ಗೆಲುವು ಕಂಡಿದೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್
Advertisement