ಮೈಸೂರು: ನನಗೆ ಬಿಜೆಪಿಯಲ್ಲಿ ಯಾವುದೇ ಅಗೌರವ ಉಂಟಾಗಿಲ್ಲ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನವಾಗಿಲ್ಲ ಅಂತ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.
ಬಿಜೆಪಿ ಪರಿವರ್ತನಾ ಜಾಥಾದಲ್ಲಿ ಗೈರು ಹಾಜರಾದ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ನನಗೆ ಯಾವುದೇ ರೀತಿಯಲ್ಲಿ ಅಗೌರವ ತೋರಿಲ್ಲ. ಅಲ್ಲದೇ ಪಕ್ಷದ ಕುರಿತು ನನಗೆ ಯಾವುದೇ ಅಸಮಾಧಾನವಿಲ್ಲ. ಮಾಧ್ಯಮದಲ್ಲಿ ಬಂದ ಅಸಮಾಧಾನದ ವರದಿಯಲ್ಲಿ ಸತ್ಯಾಂಶವಿಲ್ಲ ಅಂತ ಹೇಳಿದ್ರು.
ಉಪಚುನಾವಣೆ ಗೆಲುವಿನಿಂದ ಸಿಎಂ ಬ್ರಹ್ಮರಾಕ್ಷಸರಾಗಿದ್ದಾರೆ. ಸಿಎಂ ಬ್ರಹ್ಮರಾಕ್ಷಸ ಆಗಲು ಕಾರಣ ಎಚ್.ಡಿ. ದೇವೇಗೌಡರು. ಉಪಚುನಾವಣೆಯಲ್ಲಿ ಸಿಎಂ ನೂರಾರು ಕೋಟಿ ಖರ್ಚು ಮಾಡಿದ್ದಾರೆ ಅಂತ ಇಂದು ಎಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಈ ನೂರಾರು ಕೋಟಿ ರೂಪಾಯಿಯಲ್ಲಿ ನಿಮ್ಮ ಪಾರ್ಟಿಗೆ ಎಷ್ಟು ಬಂತು ಕುಮಾರಸ್ವಾಮಿ? ದೇವೇಗೌಡರೇ ಮತ್ತು ಕುಮಾರಸ್ವಾಮಿಗಳೇ ಈ ರೀತಿ ಡಬಲ್ ಸ್ಟ್ಯಾಂಡ್ ಯಾಕೆ? ಅಂತ ಪ್ರಶ್ನಿಸಿದ್ರು.
ಇದನ್ನೂ ಓದಿ: ಬಿಜೆಪಿಯದ್ದು ಪರಿವರ್ತನಾ ರ‍್ಯಾಲಿ ಅಲ್ಲ, ಅದು ನಾಟಕ ರ‍್ಯಾಲಿ: ಸಿದ್ದರಾಮಯ್ಯ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತೇವೆ ಅಂತಾ ಹೇಳಿದ್ದೀರಿ. ಆದರೆ ಜೆಡಿಎಸ್ ಚುನಾವಣೆ ವೇಳೆ ಮಾಡಿದ್ದೇನು? ಸಿಎಂ ಜೆಡಿಎಸ್ ಹೈಜಾಕ್ ಮಾಡಿದ್ರು. ಈ ಚುನಾವಣೆ ಬಗ್ಗೆ ಪುಸ್ತಕ ಬರೆದಿದ್ದೇನೆ. ಇಷ್ಟರಲ್ಲೇ ಚುನಾವಣೆಯ ಎಲ್ಲಾ ರಹಸ್ಯ ಪುಸ್ತಕದ ಮೂಲಕ ಬಯಲಾಗುತ್ತೆ ಅಂದ್ರು.