ನವದೆಹಲಿ: ತುಮಕೂರಿನ (Tumakuru) ರಾಷ್ಟೀಯ ಹೆದ್ದಾರಿ (National Highway) ಅಭಿವೃದ್ದಿಗೆ ವಿಚಾರಕ್ಕೆ ಸಂಬಂದಿಸಿದಂತೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಭೇಟಿಯಾಗಿ ಸುಧೀರ್ಘ ಚರ್ಚೆ ನಡೆಸಿದ್ದಾರೆ.
ಈ ಭೇಟಿ ವೇಳೆ (ಎನ್ ಹೆಚ್-69) ಶಿರಾ, ಮಧುಗಿರಿ, ಭೈರನಹಳ್ಳಿ ವಿಭಾಗದ 52 ಕಿ.ಮೀ. ಚತುಷ್ಟಥ ರಸ್ತೆ ಅಭಿವೃದ್ದಿಗೆ ಪ್ರಸ್ತುತ 2024-25ರ ಬಜೆಟ್‌ನಲ್ಲಿ 1 ಕೋಟಿ ರೂ. ಮೀಸಲಿಟ್ಟ ಬಗ್ಗೆ ತುಮಕೂರಿನ ಜನತೆಯ ಪರವಾಗಿ ಸಚಿವ ನಿತಿನ ಗಡ್ಕರಿಯವರಿಗೆ ಸೋಮಣ್ಣ (V Somanna) ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ರಸ್ತೆ ಕಾಮಗಾರಿ ಜಾರಿಯಾಗುವಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರ ಪ್ರಯತ್ನಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ – ನ.20ಕ್ಕೆ ಮತದಾನ, ನ.23ಕ್ಕೆ ಫಲಿತಾಂಶ
Advertisement
Advertisement
ತುಮಕೂರು ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿ ಮುಖ್ಯ ಜಿಲ್ಲೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ರಸ್ತೆ ಅಭಿವೃದ್ಧಿಯ ಪ್ರಾಮುಖ್ಯತೆಯ ಬಗ್ಗೆ ಹಾಗೂ ತುಮಕೂರು, ಶಿವಮೊಗ್ಗ (ಮಲಸಂದ್ರ) ಮತ್ತು ಎನ್‌ಹೆಚ್ 206ರಲ್ಲಿ (ತುಮಕೂರು ಸಿಟಿಯಲ್ಲಿ) ಬೈಪಾಸ್ ನಿರ್ಮಾಣದ ಅಗತ್ಯತೆಯ ಬಗ್ಗೆ ಚರ್ಚೆ ನಡೆದಿದೆ. ಈ ಬೈಪಾಸ್ ನಿರ್ಮಾಣ ಮಾಡುವುದರಿಂದ ಸಾರಿಗೆ ದಟ್ಟಣೆ ಹಾಗೂ ಅಪಘಾತಗಳು ಕಡಿಮೆಯಾಗುವ ಬಗ್ಗೆ ಕೇಂದ್ರ ಮಂತ್ರಿಗಳಿಗೆ ವಿವರಿಸಿದ್ದಾರೆ. ಇದನ್ನೂ ಓದಿ: Kerala | ಕಾರ್ಯಕ್ರಮದಲ್ಲಿ ಬಹಿರಂಗ ಟೀಕೆ- ಒಂದು ದಿನದ ಬಳಿಕ ಶವವಾಗಿ ಪತ್ತೆಯಾದ ಅಧಿಕಾರಿ
Advertisement
ಎನ್‌ಹೆಚ್ 206 (ತುಮಕೂರು ಸಿಟಿ), 12.30 ಕಿ.ಮೀ ಮತ್ತು ಗುಬ್ಬಿ ಟೌನ್ 8.5 ಕಿ.ಮೀ ಇಲ್ಲಿ ಟ್ರಾಫಿಕ್ ದಟ್ಟಣೆ ತಗ್ಗಿಸುವ ಸಲುವಾಗಿ 4 ಚತುಷ್ಪಥ (One Time Improvement with 4 line white topping) ಪ್ರಸ್ತಾವನೆಯನ್ನು ಸಹ ಕೇಂದ್ರ ಸಚಿವರ ಮುಂದೆ ಪ್ರಸ್ತಾಪಿಸಿ ಇದಕ್ಕು ಅನುಮೋದನೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್- ಶಾಸಕ ಮುನಿರತ್ನಗೆ ಜಾಮೀನು
Advertisement
ಸೋಮಣ್ಣನವರ ಮನವಿಗೆ ಅತ್ಯಂತ ಸಹಕಾರಾತ್ಮಕವಾಗಿ ನಿತಿನ್ ಗಡ್ಕರಿಯವರು ಸ್ಪಂದಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿರುತ್ತಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ, ಎಲ್ಲಿ ಏನಾಗಿದೆ?