ಬೆಂಗಳೂರು: ಬಿಜೆಪಿ ಮುಖಂಡ ವಿ. ಸೋಮಣ್ಣ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ತಪ್ಪಲಿದೆ ಅಂತಾ ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ. ಈ ಸಂಬಂಧ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆದಿತ್ತು. ಸಭೆಯಿಂದ ಹೊರ ಬಂದ ಬಳಿಕ ವಿ.ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.
ಈ ವೇಳೆ ಸ್ಥಳಕ್ಕಾಗಮಿಸಿದ ಕೇಂದ್ರ ಸಚಿವ ಅನಂತಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಕೆ ಶಿವಕುಮಾರ್ ಮೇಲೆ ಸಾರ್ವಜನಿಕವಾಗಿ ಕಿಡಿಕಾರಿದ್ರು. ನನ್ನ ಮುಂದೆ ನಿಲ್ಬೇಡ, ಹೊಡೆದ್ ಬಿಡ್ತೀನಿ. ನಿಂಗೆ ಮುಂದೈತೆ ಮಾರಿಹಬ್ಬ ಅಂತ ಆವೇಶಭರಿತ ಮಾತುಗಳನ್ನಾಡಿದ್ರು. ಇದನ್ನೂ ಓದಿ: ಮೊದಲು ಹನೂರು, ಅಮೇಲೆ ಗುಂಡ್ಲುಪೇಟೆ, ಬಳಿಕ ಹನೂರು, ಈಗ ಗೋವಿಂದರಾಜನಗರ?-ಸೋಮಣ್ಣಗೆ ಸಿಗುತ್ತಾ ಬಿಜೆಪಿ ಟಿಕೆಟ್?
Advertisement
Advertisement
ಭಾನುವಾರ ಕೇಂದ್ರ ಸಚಿವ ಅನಂತ್ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿಮಗೆ ಇನ್ನು 4 ವರ್ಷ ಪರಿಷತ್ ಸದಸ್ಯ ಸ್ಥಾನ ಇದೆ. ನಮ್ಮ ಸರ್ಕಾರ ಬಂದ್ರೆ ಸಚಿವರಾಗುವುದು ಗ್ಯಾರೆಂಟಿ, ನೀವು ಗೋವಿಂದರಾಜನಗರದಲ್ಲಿ ಸ್ಪರ್ಧೆ ಮಾಡಿ, ಇಲ್ಲ ಈ ಎಲೆಕ್ಷನ್ ನಲ್ಲಿ ಸುಮ್ಮನಿದ್ದು ಬಿಡಿ ಎಂದ ಅನಂತಕುಮಾರ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯವಾಗಿಯೇ ಸಾರ್ವಜನಿಕವಾಗಿ ಅನಂತಕುಮಾರ್ ಆಪ್ತನ ಮೇಲೆ ತಮ್ಮ ಕೋಪವನ್ನು ತೋರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ, ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ: ಮಾಜಿ ಸಚಿವ ವಿ.ಸೋಮಣ್ಣ
Advertisement
ಅನಂತಕುಮಾರ್ ಅವರು ನೀಡಿದ ಸಲಹೆಯನ್ನು ಸೋಮಣ್ಣ ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಇನ್ನೇರೆಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ಸೋಮಣ್ಣ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗಿದೆ.