– ನಾನು ರಾಜಕೀಯ ನಿವೃತ್ತಿ ತಗೋತೀನಿ ಅಂತಾ ಹೇಳಿಲ್ಲ: ಕೇಂದ್ರ ಸಚಿವ ಸ್ಪಷ್ಟನೆ
ಬೆಂಗಳೂರು: ಧರ್ಮಸ್ಥಳ ಕೇಸ್ (Dharmasthala Case) ವಿಚಾರದಲ್ಲಿ ಕಾಂಗ್ರೆಸ್ ಅನವಶ್ಯಕವಾಗಿ ಮಾಡಿರುವ ತಪ್ಪಿಗಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸ್ತಾರೆ. ತಾವೇ ತೋಡಿದ ಹಳ್ಳಕ್ಕೆ ಬಿದ್ದರು ಅಂತ ಕೇಂದ್ರ ಸಚಿವ ವಿ.ಸೋಮಣ್ಣ (V.Somanna) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದವರು ಅಲ್ಲ. ಧರ್ಮಸ್ಥಳಕ್ಕೆ ಇತಿಹಾಸ ಇದೆ. ಧಾರ್ಮಿಕ, ನಂಬಿಕೆ ಸ್ಥಳ. ಈ ಸ್ಥಳವನ್ನ ಅಸ್ಥಿರಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ಯಾರೋ ಒಬ್ಬ ದೂರು ಕೊಟ್ಟ ಅಂತೇಳಿ ಕಾಂಗ್ರೆಸ್ ಎಸ್‌ಐಟಿ ಮಾಡಿದ್ರು. ಅವರಿವರ ಮಾತು ಕೇಳಿ ಎಸ್‌ಐಟಿ ಮಾಡಿದ್ರು ಅಂತಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಬೇಡ, ವರದಿ ಬರುವವರೆಗೆ ಕಾಯೋಣ – ಶಿವಾನಂದ ಪಾಟೀಲ್
ಇದೇ ವೇಳೆ ಚಾಮುಂಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರು ಈ ರೀತಿ ಮಾತನಾಡಬಾರದಿತ್ತು. ಇದು ಅಕ್ಷ್ಯಮ ಅಪರಾಧ. ಆರ್‌ಎಸ್‌ಎಸ್ ಬಗ್ಗೆ ಮಾತಾಡಿದಾಗ ಪರವಾಗಿಲ್ಲ ಶಿವಕುಮಾರ್ ಅಂದ್ಕೊಂಡಿದ್ವಿ. ರಾಣಿ ಪ್ರಮೋದದೇವಿ ಅವರು ಹೇಳಿರೋದು ಸರಿ ಇದೆ. ನಾವು ಮಸೀದಿಗೆ ಹೋಗಿ ನಮ್ಮದು ಅನ್ನೋದಕ್ಕೆ ಆಗುತ್ತಾ? ಚಾಮುಂಡೇಶ್ವರಿ ಭಾರತಕ್ಕೆ ದೇವತೆ. ಭಗವಂತ ನಿಮ್ಮನ್ನ ಮೆಚ್ಚುವುದಿಲ್ಲ. ಡಿಕೆಶಿ ಅವರ ಕುಟುಂಬವನ್ನ ಹತ್ತಿರದಿಂದ ನೋಡಿದ್ದೇನೆ. ಭಕ್ತಿ, ಪೂಜೆ ಮಾಡ್ತಾರೆ. ಡಿಕೆಶಿ ನಿಮ್ಮ ಹೇಳಿಕೆಯನ್ನ ವಾಪಸ್ ಪಡೆಯುವುದು ಒಳ್ಳೆಯದು ಎಂದು ಆಗ್ರಹಿಸಿದರು.
ನಾನು ರಾಜಕೀಯ ನಿವೃತ್ತಿ ಅಂತೇಳಿಲ್ಲ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅಂತೇಳಿದ್ದೇನೆ. ನಾನು ಆಕಸ್ಮಿಕವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಹಾಗಾಗಿ ಮುಂದೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿಲ್ಲ ಎಂದಿದ್ದೇನೆ. ಅಲ್ಲದೆ ಸದಸ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಈಗ ಖಾಲಿ ಇಲ್ಲ. ಮೋದಿ ಅವರ ನೇತೃತ್ವದಲ್ಲಿ ಸೇವೆ ಮಾಡ್ತಾ ಇದೀನಿ, ಕೆಲಸ ಮಾಡ್ತೀನಿ ಅಂತೇಳಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ: ಹೆಚ್‌ಡಿಕೆ
ಇನ್ನು ಕಾಂಗ್ರೆಸ್‌ಲ್ಲಿ ಕ್ರಾಂತಿಯೂ ಆಗುತ್ತೆ, ಕೆಲ ನಾಯಕರಿಗೆ ವಾಂತಿಯೂ ಆಗುತ್ತೆ. ಹೀಗೆ ಹೋಗ್ತಿದ್ರೆ ಕಾಂಗ್ರೆಸ್ ಅವರು ನಾಮಾವಶೇಷ ಆಗ್ತಾರೆ ಅಂತಾ ವ್ಯಂಗ್ಯವಾಡಿದರು.