ರಾಮನಗರ: ಅವರ ಕಾಲದಲ್ಲಿ ಹಾಗೆ, ಇವರ ಕಾಲದಲ್ಲಿ ಹೀಗಾಗಿತ್ತು ಎಂಬ ಉಡಾಫೆ ಹೇಳಿಕೆ ಕೊಡಲ್ಲ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.
Advertisement
ಕನಕಪುರದ ದೇಗುಲ ಮಠಕ್ಕೆ ಆಗಮಿಸಿದ್ದ ಸೋಮಣ್ಣ ಅವರು ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ರೀತಿ ನಡೆಯಬಾರದಿತ್ತು. ಆದರೆ ಈ ಪ್ರಕರಣವನ್ನು ನಾವು ತೀಕ್ಷ್ಣವಾಗಿ ತೆಗೆದುಕೊಂಡಿದ್ದೇವೆ. ಅವರ ಕಾಲದಲ್ಲಿ ಹಾಗೆ, ಇವರ ಕಾಲದಲ್ಲಿ ಹೀಗಾಗಿತ್ತು ಎಂಬ ಉಡಾಫೆ ಹೇಳಿಕೆ ಕೊಡಲ್ಲ ಎಂದು ಪ್ರತಿಪಕ್ಷದ ವಿರುದ್ಧ ತಿರುಗೇಟು ನೀಡಿದರು.ಇದನ್ನೂ ಓದಿ: ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ
Advertisement
ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆಂದರೂ ಬಿಹಾರ ಹಾಗೂ ಬೇರೆ ರಾಜ್ಯದ ಕಾನೂನು ನಮ್ಮಲ್ಲಿಯೂ ಜಾರಿಯಾಗಲಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾಗುವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.
Advertisement
Advertisement
ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದ್ದಾರೆ. ಆದರೆ ಪೊಲೀಸ್ ಇಲಾಖೆ ವೈಫಲ್ಯ ಎಂದು ಹೇಳಲಾಗಲ್ಲ. ಯಾರ್ಯಾರ ಕಾಲದಲ್ಲಿ ಏನಾಯ್ತು ಎಂದು ನಾನು ಹೇಳಲ್ಲ. ಆದರೆ ಮುಂದಿನ ಯುವಪೀಳಿಗೆಯ ಹಿತದೃಷ್ಟಿಯಿಂದ ಕಠಿಣ ಕಾನೂನು ರೂಪಿಸಲಾಗುತ್ತೆ ಎಂದು ತಿಳಿಸಿದರು.ಇದನ್ನೂ ಓದಿ:ಪೊಲೀಸರಿಗೆ ಒತ್ತಡ ಇದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡ್ತಾರೆ: ಸತೀಶ್ ಜಾರಕಿಹೊಳಿ
ಮಹಿಳೆಯರ ರಕ್ಷಣೆಗೆ ಬಂದೂಕು ಇಟ್ಟುಕೊಳ್ಳಲು ಅವಕಾಶ ಕೊಡಿ ಎಂಬ ಸಚಿವ ಆನಂದ್‍ಸಿಂಗ್ ಹೇಳಿಕೆಗೆ ಅವರು, ಅವಶ್ಯಕತೆ ಇರುವವರು ಕಾನೂನು ವ್ಯಾಪ್ತಿಯಲ್ಲಿ ಬಂದೂಕನ್ನು ಇಟ್ಟುಕೊಳ್ಳಬಹುದು. ಆದರೆ ಸರ್ಕಾರ ಸಹ ಜನರ ಹಿತಕ್ಕಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.ಇದನ್ನೂ ಓದಿ:ಮಹಿಳೆಯರಿಗೆ ಗನ್ ಕೊಡಬೇಕು ಎನ್ನುವುದಾದರೆ ಗೃಹ ಇಲಾಖೆ ಕೆಲಸ ಮಾಡುತ್ತಿಲ್ಲ ಎಂದರ್ಥ: ದೇಶಪಾಂಡೆ