ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ ಸಂಸದ ಅನಂತ್‍ಕುಮಾರ್ ಹೆಗಡೆಯವರ ( AnanthKumar Hegade) ಹೇಳಿಕೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ (V.Somanna) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಅನಂತ್‍ಕುಮಾರ್ ಹೆಗಡೆಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ನಿಷ್ಕಲ್ಮಶ ಭಾವನೆ ಇದೆ. ಏನು ಬಾಯಿಗೆ ಬರುತ್ತೋ ಅದನ್ನು ಅವರು ನನ್ನ ಹಾಗೆ ಮಾತಾಡಿ ಬಿಡ್ತಾರೆ. ಹಿಂದೆ ಮುಂದೆ ನೋಡೋದೇ ಇಲ್ಲ. ಸಿದ್ದರಾಮಯ್ಯ ಕೇವಲ ಸಿದ್ದರಾಮಯ್ಯ ಅಲ್ಲ, ಈ ರಾಜ್ಯದ ಸಿಎಂ. ಸಿದ್ದರಾಮಯ್ಯ (Siddaramaiah) ಏನೋ ಮಾತಾಡ್ತಾರೆ ಎಂದು ನಾವ್ಯಾಕೆ ಚಿಕ್ಕವರಾಗಬೇಕು? ನಾವು ಚಿಕ್ಕವರಾಗೋದು ಬೇಡ ಎಂದಿದ್ದಾರೆ. ಇದನ್ನೂ ಓದಿ: ಬಾಬರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮ ಆಗುತ್ತೆ – ಅನಂತಕುಮಾರ್ ಹೆಗಡೆ ಎಚ್ಚರಿಕೆ
Advertisement
Advertisement
ಅನಂತ್‍ಕುಮಾರ್ ಹೆಗಡೆಯವರು ಸುಸಂಸ್ಕೃತ ಕುಟುಂಬದಿಂದ ಬಂದವರು. ನಾವು ನಮ್ಮ ಭಾಷೆ ಹಿಡಿತದಲ್ಲಿ ಇಟ್ಕೋಬೇಕಾಗುತ್ತೆ. ಅವರ ಹೇಳಿಕೆ ವೈಯಕ್ತಿಕವಾಗಿ ನನಗೆ ಸ್ವಲ್ಪ ಬೇಸರ ತರಿಸಿದೆ ಎಂದು ಅವರು ಹೇಳಿದ್ದಾರೆ.
Advertisement
Advertisement
ಅನಂತ್‍ಕುಮಾರ್ ಹೆಗಡೆಯವರ ಹೇಳಿಕೆಯಗೆ ನಯವಾಗಿಯೇ ವಿರೋಧಿಸಿದ ಅವರು, ಸಿದ್ದರಾಮಯ್ಯ ಭಾಷೆ ಏನು, ಹೇಗೆ ಎಂದು ನಮಗೆ ಬೇಡ. ಅವರು ಸಿಎಂ ಹೇಗೆ ಆದ್ರೂ ಅನ್ನೋದೂ ನಮಗೆ ಬೇಡ. ಸಿದ್ದರಾಮಯ್ಯ ನಡವಳಿಕೆ ಹೇಗಿರಬೇಕು ಅನ್ನೋದಕ್ಕಿಂತ, ನಮ್ಮ ನಡವಳಿಕೆ ವಿಭಿನ್ನವಾಗಿರಬೇಕು ಅಷ್ಟೇ ಎಂದು ಅನಂತ್‍ಕುಮಾರ್ ಹೆಗಡೆಯವರಿಗೆ ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಹಾವೇರಿ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸರ್ಕಾರದ ಉಡಾಫೆ, ತನಿಖೆಗೆ ಎಸ್‍ಐಟಿ ರಚಿಸಲಿ: ವಿಜಯೇಂದ್ರ ಆಗ್ರಹ