ಹಂಸಲೇಖ, ರವಿಚಂದ್ರನ್ `ಯಾ’ ಸಾಹಿತ್ಯದ ಹಿಟ್ ಸೀಕ್ರೆಟ್..!

Public TV
1 Min Read
Ravichandran Hamsalekha

ನ್ನಡ ಚಿತ್ರರಂಗದ ಸಂಗೀತ ಲೋಕದ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಹೆಜ್ಜೆ ಗುರುತನ್ನ ಮೂಡಿಸಿದ ಜೋಡಿ ಕ್ರೇಜಿಸ್ಟಾರ್ ರವಿಚಂದ್ರನ್ (V.Ravichandran) ಹಾಗೂ ನಾದಬ್ರಹ್ಮ ಹಂಸಲೇಖ (Hamsalekha). ಸ್ಯಾಂಡಲ್‌ವುಡ್‌ನ ದಿಗ್ಗಜ ಜೋಡಿಗಳಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಕೂಡಾ ಪ್ರಮುಖ ಪಾತ್ರವಹಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸೂಪರ್ ಹಿಟ್ ಹಾಡುಗಳು ಮೂಡಿಬಂದಿವೆ. ಇಂದಿಗೂ ಆ ಹಾಡುಗಳು ಕೇಳುಗರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

ನಾದಬ್ರಹ್ಮ ಹಂಸಲೇಖ ಅವರು ತಮ್ಮ 74ನೇ ಹುಟ್ಟುಹಬ್ಬವನ್ನ ಬಹಳ ವಿಶೇಷವಾಗಿ ಹಾಗೂ ತುಂಬಾನೇ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಈ ಹಿಂದೆ ಎಲ್ಲೂ ಮಾತನಾಡದ ಹಲವಾರು ಸಂಗತಿಗಳನ್ನ ಮುಕ್ತವಾಗಿ ಮಾತನಾಡಿದ್ದಾರೆ. ರವಿಚಂದ್ರನ್ ಸಿನಿಮಾಗೆ ಬರೆದ ಕೆಲವು ಸಾಹಿತ್ಯಗಳು ಯಾಕೆ ಹಿಟ್ ಆಗುತ್ತಿದ್ದವು ಅನ್ನೋ ಬಗ್ಗೆ ಮಾತಾಡಿದ್ದಾರೆ. ಇದನ್ನೂ ಓದಿ: ಫಸ್ಟ್ ಲವ್ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

Ravichandran Hamsalekha 1

ಯಾರೆಲೆ ನಿನ್ನ ಮೆಚ್ಚಿದವನು, ಯಾರೇ ನೀನು ಚೆಲುವೆ, ಯಾರಿಗೆ ಬೇಕು ಈ ಲೋಕ, ಯಾರೇ ನೀನು ರೋಜಾ ಹೂವೆ, ಯಾರಿವಳು ಯಾರಿವಳು ಸೂಜಿಮಲೆ ಕಣ್ಣಿನವಳು, ಯಾರೆ ನೀನು ಸುಂದರ ಚೆಲುವೆ. ಹೀಗೆ `ಯಾ’ ಇಂದ ಶುರುವಾಗುವ ಹಾಡುಗಳು ಸ್ಯಾಂಡಲ್‌ವುಡ್‌ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿವೆ.

ಕ್ರೇಜಿಸ್ಟಾರ್ ಸಿನಿಮಾಗೆ ಹಂಸಲೇಖ ಹಾಡುಗಳನ್ನ ಬರೆಯೊಕೆ ಶುರುಮಾಡುವ ವೇಳೆ ಎಲ್ಲರೂ `ಯಾ’ ಅಕ್ಷರದಿಂದ ಶುರುವಾಗುವ ಸಾಹಿತ್ಯವನ್ನ ನಿರೀಕ್ಷೆ ಮಾಡುತ್ತಿದ್ದರಂತೆ. ಯಾಕಂದ್ರೆ `ಯಾ’ ಇಂದ ಶುರುವಾದ ಸಾಕಷ್ಟು ಗೀತೆಗಳು ಸೂಪರ್ ಹಿಟ್ ಲಿಸ್ಟ್ ಸೇರಿದ್ದವು. ಈ ಬಗ್ಗೆ ಸ್ವತಃ ಹಂಸಲೇಖ ಅವ್ರು ಹಳೆ ನೆನಪು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಥಗ್ ಲೈಫ್ ಸೋಲು – ಕ್ಷಮೆ ಕೇಳಿದ ನಿರ್ದೇಶಕ ಮಣಿರತ್ನಂ

Share This Article