ಚೆನ್ನೈ: ಭಾರತೀಯ ಉಕ್ಕು ಪ್ರಾಧಿಕಾರ(SAIL)ದ ಮಾಜಿ ಅಧ್ಯಕ್ಷ ಹಾಗೂ ಮಾರುತಿ ಉದ್ಯೋಗ್ ಲಿಮಿಟೆಡ್(ಮಾರುತಿ ಸುಜುಕಿ) ಮಾಜಿ ಅಧ್ಯಕ್ಷರಾದ ವಿ. ಕೃಷ್ಣಮೂರ್ತಿ(97) ಅವರು ನಿಧನರಗಿದ್ದಾರೆ.
ಚೆನ್ನೈನಲ್ಲಿರುವ ನಿವಾಸದಲ್ಲಿ ಕೃಷ್ಣಮೂರ್ತಿ ಅವರು ಭಾನುವಾರ ನಿಧನರಾಗಿದ್ದು, ಸೋಮವಾರ ಅವರ ಅಂತಿಮ ಸಂಸ್ಕಾರವನ್ನು ನೆರವೇರಲಿದೆ ಬಗ್ಗೆ ಮಾಜಿ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?
ವಿ.ಕೃಷ್ಣಮೂರ್ತಿ ಅವರು 1985 ರಿಂದ 1990 ರವರೆಗೆ ಎಸ್‌ಎಐಎಲ್‌ನ ಅಧ್ಯಕ್ಷರಾಗಿದ್ದರು. 2022ರ ಜೂನ್ 26 ರಂದು ಡಾ. ವೆಂಕಟರಮಣ ಕೃಷ್ಣಮೂರ್ತಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು. ವಿ.ಕೃಷ್ಣಮೂರ್ತಿ ಅವರು 1985 ರಿಂದ 1990 ರವರೆಗೆ SAILನ ಅಧ್ಯಕ್ಷರಾಗಿದ್ದರು. ಜೊತೆಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), ಮಾರುತಿ ಉದ್ಯೋಗ್ ಮತ್ತು ಜಿಎಐಎಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಪ್ರೇಯಸಿ ದೂರಾಗಿದ್ದಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಪ್ರಾಣ ಬಿಟ್ಟ!
ಕೃಷ್ಣಮೂರ್ತಿ ಅವರು ಓರ್ವ ಅತ್ಯುತ್ತಮ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ಇಡೀ ಮಾರುತಿ ಉದ್ಯೋಗ್ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಅಲ್ಲದೇ ಭಾರತದಲ್ಲಿ ಸಂಪೂರ್ಣ ಹೊಸ ಜಪಾನೀಸ್ ಕೆಲಸದ ಸಂಸ್ಕೃತಿಯನ್ನು ಪರಿಚಯಿಸಲಾಯಿತು ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌ಸಿ ಭಾರ್ಗವ್ ಕೃಷ್ಣಮೂರ್ತಿ ಅವರನ್ನು ಹಾಡಿ ಹೊಗಳಿದ್ದಾರೆ.