ನವದೆಹಲಿ: ಸುಮ್ಮನೆ ಕಾಟಕೊಡುವ ಸೊಳ್ಳೆಗಳನ್ನು ಹಿಟ್ ಸ್ಪ್ರೇನಿಂದ ಸಾಯಿಸಿದ ಬಳಿಕ ಅದನ್ನು ಏಣಿಸುತ್ತಾ ಕೂರಬೇಕೇ ಎಂದು ಟ್ವೀಟ್ ಮಾಡುವ ಮೂಲಕ ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ಪ್ರತಿಪಕ್ಷಗಳಿಗೆ ರಕ್ಷಣಾ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್ ಟಾಂಗ್ ಕೊಟ್ಟಿದ್ದಾರೆ.
ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕ್‍ನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಈ ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂದು ವಿ.ಕೆ ಸಿಂಗ್ ಹೇಳಿದ್ದರು.
ಆದರೆ ಪ್ರತಿಪಕ್ಷಗಳು ಮಾತ್ರ ಇದನ್ನು ನಂಬದೆ ಉಗ್ರರು ಸಾವನ್ನಪ್ಪಿದ್ದಕ್ಕೆ ಸಾಕ್ಷಿ ಕೊಡಿ. ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಅಂತ ನಿಖರ ಮಾಹಿತಿ ನೀಡಿ ಅಂತ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಅಲ್ಲದೆ ಏರ್ ಸ್ಟ್ರೈಕ್ ಮುಂದಿಟ್ಟುಕೊಂದು ಮೋದಿ ಸರ್ಕಾರ ರಾಜಕೀಯ ಮಾಡುತ್ತಿದೆ ಅಂತ ಪ್ರತಿಪಕ್ಷಗಳು ಆರೋಪಗಳನ್ನು ಕೂಡ ಮಾಡುತ್ತಿವೆ. ಇದನ್ನೂ ಓದಿ:ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಉಗ್ರರು ಬಲಿ: ಕೇಂದ್ರ ಸಚಿವ ವಿಕೆ ಸಿಂಗ್
रात ३.३० बजे मच्छर बहुत थे,
तो मैंने HIT मारा।
अब मच्छर कितने मारे, ये गिनने बैठूँ,
या आराम से सो जाऊँ? #GenerallySaying
— General Vijay Kumar Singh (@Gen_VKSingh) March 6, 2019
ಈ ಆರೋಪಗಳಿಗೆ ವಿಕೆ ಸಿಂಗ್, ಸೊಳ್ಳೆಗಳನ್ನು ಕೊಂದಾಗ ನಾವು ಅದನ್ನು ಲೆಕ್ಕ ಹಾಕಲ್ಲ ಎನ್ನುವ ಮೂಲಕ ಉಗ್ರರನ್ನು ಸೊಳ್ಳೆಗೆ ಹೋಲಿಸಿದ್ದಾರೆ. ಹಿಟ್ ಬಳಸಿ ಸೊಳ್ಳೆಯನ್ನು ಕೊಲ್ಲುವ ಹಾಗೆ ವಾಯುಪಡೆ ಏರ್ ಸ್ಟ್ರೈಕ್ ಮಾಡಿ ಉಗ್ರರನ್ನು ಮಟ್ಟಹಾಕಿದೆ ಎಂದು ಹೇಳಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಬೆಳಗ್ಗೆ 3.30ರ ಹೊತ್ತಿಗೆ ತುಂಬಾ ಸೊಳ್ಳೆಗಳು ಇತ್ತು. ಅದಕ್ಕೆ ನಾನು ಹಿಟ್ ಬಳಸಿ ಅವುಗಳನ್ನು ಕೊಂದೆ. ಈಗ ನಾನು ಎಷ್ಟು ಸೊಳ್ಳೆಗಳು ಸತ್ತಿವೆ ಅಂತ ಲೆಕ್ಕ ಹಾಕುತ್ತಾ ಕೂರಬೇಕಾ? ಅಥವಾ ನೆಮ್ಮದಿಯಿಂದ ನಿದ್ರೆ ಮಾಡಬೇಕಾ? ಅಂತ ಬರೆದು ಟ್ವೀಟ್ ಮಾಡುವ ಮೂಲಕ ತಮ್ಮದೇ ಶೈಲಿಯಲ್ಲಿ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv