ಸಿಡ್ನಿ: ಆಸ್ಟ್ರೇಲಿಯಾ ತಂಡದಲ್ಲಿ ದೈತ ಆಲ್‍ರೌಂಡರ್ ಆಗಿ ವಿಶ್ವದ ಗಮನಸೆಳೆದಿದ್ದ ಆಂಡ್ರ್ಯೂ ಸೈಮಂಡ್ಸ್ ಇಂದು ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿಗೆ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಸಹಿತ ಹಲವು ಮಾಜಿ ಹಾಗೂ ಹಾಲಿ ಆಟಗಾರರು ಕಂಬನಿ ಮಿಡಿದಿದ್ದಾರೆ.
Advertisement
ಹೌದು 1988 ರಿಂದ 2009ರ ವರೆಗೆ ಆಸ್ಟ್ರೇಲಿಯಾ ತಂಡದಲ್ಲಿ ತನ್ನ ವಿಶಿಷ್ಟ ಕೂದಲಿನ ವಿನ್ಯಾಸ ಮತ್ತು ತುಟಿಗೆ ಬಿಳಿ ಬಣ್ಣದೊಂದಿಗೆ ಮೈದಾನದಲ್ಲಿ ಗೋಚರಿಸುತ್ತಿದ್ದ ಸೈಮಂಡ್ಸ್, ಇಂದು ಕಾರು ಅಪಘಾತದಲ್ಲಿ ಮರಣ ಹೊಂದಿ ವಿಶ್ವ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ಥಾಮಸ್ ಕಪ್ ಬ್ಯಾಡ್ಮಿಂಟನ್ – ಭಾರತ ಚಾಂಪಿಯನ್, ಇತಿಹಾಸ ಸೃಷ್ಟಿ
Advertisement
Advertisement
ಸೈಮಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಹೋರಾಟಗಾರ ಆಸ್ಟ್ರೇಲಿಯಾ ತಂಡಕ್ಕೆ ಮಧ್ಯಮಕ್ರಮಾಂಕದಲ್ಲಿ ಬಲಿಷ್ಠ ದಾಂಡಿಗನಾಗಿ ಎದುರಾಳಿ ಆಟಗಾರರಿಗೆ ಸಿಂಹಸ್ವಪ್ನರಾಗಿದ್ದರು. ಸೈಮಂಡ್ಸ್ ಆಟದೊಂದಿಗೆ ಹಲವು ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಂಡು ಹೆಸರುವಾಸಿಯಾದವರು. ಇದನ್ನೂ ಓದಿ: ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ಸಾವು
Advertisement
2009ರಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ವೇಳೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಸೈಮಂಡ್ಸ್ ನಡುವಿನ ಮಂಕಿಗೇಟ್ ಪ್ರಕರಣ ಬಾರಿ ಚರ್ಚೆಗೆ ಕಾರಣವಾಗಿತ್ತು. ಹರ್ಭಜನ್ ಪಂದ್ಯದ ವೇಳೆ ಸೈಮಂಡ್ಸ್‌ಗೆ ಮಂಕಿ ಎಂದಿದ್ದರು ಎಂದು ಆಸ್ಟ್ರೇಲಿಯಾ ತಂಡ ದೂರಿತ್ತು. ಇದು ಜನಾಂಗೀಯ ನಿಂದನೆಗೆ ಗುರಿಯಾಗಿತ್ತು. ಆ ಬಳಿಕ ಐಪಿಎಲ್‍ನಲ್ಲಿ ಇವರಿಬ್ಬರೂ ಕೂಡ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಜೊತೆಯಾಗಿ ಆಡಿ ಉತ್ತಮ ಸಂಬಂಧವನ್ನು ಹೊಂದಿದ್ದರು. ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?
ಸೈಮಂಡ್ಸ್ ಆಸ್ಟ್ರೇಲಿಯಾ ತಂಡ 2 ಬಾರಿ ವಿಶ್ವಕಪ್ ಗೆದ್ದಾಗ ತಂಡದಲ್ಲಿದ್ದ ಆಲ್‍ರೌಂಡರ್. ಆಸ್ಟ್ರೇಲಿಯಾ ತಂಡದಲ್ಲಿ ಖಾಯಂ ಸದಸ್ಯನಾಗಿದ್ದ ಸೈಮಂಡ್ಸ್ ಮೂರು ಮಾದರಿ ಕ್ರಿಕೆಟ್‍ಗೂ ಹೊಗ್ಗಿಕೊಂಡ ಲೆಜೆಂಡ್ ಆಟಗಾರರಾಗಿದ್ದರು. ಆಸ್ಟ್ರೇಲಿಯಾ ಪರ 26 ಟೆಸ್ಟ್ ಪಂದ್ಯಗಳಿಂದ 2 ಶತಕ, 10 ಅರ್ಧಶತಕ ಸಹಿತ 1,462 ರನ್, 24 ವಿಕೆಟ್, ಏಕದಿನ ಕ್ರಿಕೆಟ್‍ನಲ್ಲಿ 198 ಪಂದ್ಯಗಳಿಂದ 6 ಶತಕ, 30 ಅರ್ಧಶತಕ ಸಹಿತ 5,088 ರನ್ 133 ವಿಕೆಟ್ ಮತ್ತು ಟಿ20 ಕ್ರಿಕೆಟ್‍ನಲ್ಲಿ 14 ಪಂದ್ಯದಲ್ಲಿ 2 ಅರ್ಧಶತಕ ಸಹಿತ 337 ರನ್, 8 ವಿಕೆಟ್ ಪಡೆದು ಮಿಂಚಿದ್ದರು.
As we mourn the loss of former Australian all-rounder Andrew Symonds, we take a look back to his tremendous 143* against Pakistan at the 2003 World Cup.#RIPRoy pic.twitter.com/oyoH7idzkb
— ICC (@ICC) May 15, 2022
ಐಪಿಎಲ್‍ನಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆದಾಗ ತಂಡದಲ್ಲಿ ಸೈಮಂಡ್ಸ್ ಇದ್ದರು.