ನವದೆಹಲಿ: ಇಂದು ಪಂಚರಾಜ್ಯ ಚುನಾವಣೆ ಫಲಿತಾಂಶ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಾತರರಾಗಿದ್ದಾರೆ. ಎಕ್ಸಿಟ್ ಪೋಲ್ (Exit Poll) ಬಳಿಕ ಎಲ್ಲರೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 11-12 ಗಂಟೆ ಹೊತ್ತಿಗೆ ಫಲಿತಾಂಶದ ಒಂದು ಚಿತ್ರಣ ಸಿಗಬಹುದು.
Advertisement
ಜನಸಂಖ್ಯೆ ಮತ್ತು ರಾಜಕೀಯದ ದೃಷ್ಟಿಯಿಂದ ಉತ್ತರ ಪ್ರದೇಶ (Uttar Pradesh) ತುಂಬಾನೇ ಮುಖ್ಯವಾದುದು. 403 ಎಂಎಲ್‍ಎ, 80 ಎಂಪಿ, 31 ರಾಜ್ಯಸಭೆ ಸೀಟ್ ಹೊಂದಿರುವ ಉತ್ತರಪ್ರದೇಶದಲ್ಲಿ ಗೆದ್ದರೆ ದೆಹಲಿ ಗದ್ದುಗೆ ಸುಲಭ. ಒಂದರ್ಥದಲ್ಲಿ ದೆಹಲಿ ಸೇರಲು ಉತ್ತರಪ್ರದೇಶ ಹೆದ್ದಾರಿ ಎಂದು ಪರಿಗಣಿಸಲಾಗುತ್ತದೆ. ಸದ್ಯ ಇಲ್ಲಿ ಬಿಜೆಪಿ(BJP) ಸರ್ಕಾರವಿದೆ. ವಿಪಕ್ಷ ಎಸ್‍ಪಿ(SP) ಗದ್ದುಗೆ ಏರುವ ಕನಸು ಕಾಣುತ್ತಿದೆ. ಆದರೆ ನಿನ್ನೆ ರಾತ್ರಿ ನಡೆದ ಕೆಲವೊಂದಿಷ್ಟು ಬೆಳವಣಿಗೆಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ವಾರಣಾಸಿ, ಸೋನ್‍ಭದ್ರಾ, ಬರೇಲಿ ಸೇರಿ ಹಲವೆಡೆ ಇವಿಎಂ(EVM) ಹೊತ್ತ ವಾಹನಗಳು ಕಾಣಿಸಿಕೊಂಡಿದ್ದು, ಇದು ಬಿಜೆಪಿ ಕೃತ್ಯ, ಸೋಲುವ ಭಯದಿಂದ ಅಡ್ಡದಾರಿ ಹಿಡಿದಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದರಲ್ಲಿ ಚುನಾವಣಾ ಆಯೋಗ(Election Commission)ದ ಪಾತ್ರವೂ ಇದೆ ಎಂದು ಕಿಡಿಕಾರಿವೆ. ಆದರೆ ಜಿಲ್ಲಾಡಳಿತಗಳು ಮಾತ್ರ, ಇವತ್ತು ಕೌಂಟಿಂಗ್ ಟ್ರೈನಿಂಗ್‍ಗಾಗಿ ಇವಿಎಂ ಮೆಷಿನ್ ತಂದಿದ್ರು. ವೋಟಿಂಗ್‍ಗೆ ಬಳಸಿದ ಎಲ್ಲಾ ಇವಿಎಂ ಸ್ಟ್ರಾಂಗ್ ರೂಂ (EVM Strong Room) ಲ್ಲಿ ಭದ್ರವಾಗಿವೆ. ಬೇಕಿದ್ರೆ ಚೆಕ್ ಮಾಡ್ಕೊಳಿ ಅಂತಿವೆ. ಇದನ್ನೂ ಓದಿ: ಗೋವಾ ಮತದಾರರು ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ: ಡಿ.ಕೆ ಶಿವಕುಮಾರ್
Advertisement
ಇದೇ ವೇಳೆ ಇವಿಎಂ ಸಾಗಣೆ ವೇಳೆ ಪ್ರೋಟೋಕಾಲ್ ಉಲ್ಲಂಘನೆ ಆಗಿರೋದು ನಿಜ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ತೀವಿ ಎಂದಿದೆ. ಇವಿಎಂ ಪತ್ತೆ ಪ್ರಕರಣ ಸಂಬಂಧ ಸಮಾಜವಾದಿ ಪಕ್ಷ ಹೈಕೋರ್ಟ್ (High Court) ಮೊರೆ ಹೋಗಿದೆ. ಎಲ್ಲಾ ಸ್ಟ್ರಾಂಗ್ ರೂಂಗಳ ಮುಂದೆ ಎಸ್‍ಪಿ(SP) ಕಾರ್ಯಕರ್ತರು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದಾರೆ. ಈ ನಡುವೆ ಕರ್ತವ್ಯ ಲೋಪದ ಆರೋಪದ ಮೇರೆಗೆ ವಾರಣಾಸಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‍ರನ್ನು ಚುನಾವಣಾ ಕರ್ತವ್ಯದಿಂದ ಚುನಾವಣಾ ಆಯೋಗ ಮುಕ್ತಗೊಳಿಸಿದೆ.
EXIT POLL – ಉತ್ತರಪ್ರದೇಶದಲ್ಲಿ ಮತ್ತೆ ಬಿಜೆಪಿ..!
ಉತ್ತರ ಪ್ರದೇಶದ ಎಲೆಕ್ಷನ್ ರಿಸಲ್ಟ್ (Uttar Pradesh Election Result) ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿಗೆ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ (Priyanka Gandhi) ಪ್ರಚಾರ ಕಾಂಗ್ರೆಸ್‍ಗೆ ಫಲಕೊಟ್ಟಿಲ್ಲ. ಬಿಎಸ್‍ಪಿ(BSP)ಯ ಮಾಯಾವತಿ (Mayawati) ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ
ಪೋಲ್ ಆಫ್ ಪೋಲ್ಸ್ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಗಳಿವೆ. ಸಮೀಕ್ಷೆಯಲ್ಲಿ ಬಿಜೆಪಿ- 242+, ಎಸ್‍ಪಿ- 143 ಸ್ಥಾನ, ಬಿಎಸ್‍ಪಿ-16, ಕಾಂಗ್ರೆಸ್- 4 ಸ್ಥಾನ ಸಾಧ್ಯತೆ ಇದೆ. ಮತದಾನೋತ್ತರ ಸಮೀಕ್ಷೆ ನಿಜವಾದ್ರೆ 2ನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವುದು ಪಕ್ಕಾ. ಒಂದು ವೇಳೆ ಅತಂತ್ರ ಸ್ಥಿತಿ ಎದುರಾದರೇ ಬಿಎಸ್‍ಪಿ-ಬಿಜೆಪಿ ಸರ್ಕಾರ ಸಾಧ್ಯತೆ ಇದೆ. ಅತಂತ್ರ ವಿಧಾನಸಭೆಯಾದಲ್ಲಿ ಎಸ್‍ಪಿ+ಕಾಂಗ್ರೆಸ್ ಸರ್ಕಾರ ರಚನೆಯಾಗಬಹದು. ಇದನ್ನೂ ಓದಿ: UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ
ಒಟ್ಟು ಸ್ಥಾನಗಳು 403, ಬಹುಮತಕ್ಕೆ 203
ಇಂಡಿಯಾ ಟುಡೇ:
ಬಿಜೆಪಿ 288-326, ಎಸ್‍ಪಿ+ 71-101, ಬಿಎಸ್‍ಪಿ 03-09, ಕಾಂಗ್ರೆಸ್ 01-03 ಇತರರು 2-3
ರಿಪಬ್ಲಿಕ್:
ಬಿಜೆಪಿ 262-277, ಎಸ್‍ಪಿ + 119-134, ಬಿಎಸ್‍ಪಿ 7-15, ಕಾಂಗ್ರೆಸ್ 3-08, ಇತರರು 00
ಟೈಮ್ಸ್ ನೌ:
ಬಿಜಪಿ 225, ಎಸ್‍ಪಿ 151, ಬಿಎಸ್‍ಪಿ 14, ಕಾಂಗ್ರೆಸ್ 04, ಇತರರು 00
ಟುಡೇಸ್ ಚಾಣಕ್ಯ:
ಬಿಜೆಪಿ 294, ಎಸ್‍ಪಿ 105, ಬಿಎಸ್‍ಪಿ 2, ಕಾಂಗ್ರೆಸ್ 1, ಇತರರು 1
ಜನ್‍ಕೀ ಬಾತ್:
ಬಿಜೆಪಿ 222-260, ಎಸ್‍ಪಿ 135-165, ಬಿಎಸ್‍ಪಿ 04-09, ಕಾಂಗ್ರೆಸ್ 01-03, ಇತರರು 3-4
2017 ಫಲಿತಾಂಶ:
ಬಿಜೆಪಿ 312, ಬಿಎಸ್‍ಪಿ 19, ಎಸ್ಪಿ+ಕಾಂಗ್ರೆಸ್ 54, ಇತರೆ- 18