ಲಕ್ನೋ: ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಉತ್ತರ ಪ್ರದೇಶ ಹತ್ರಾಸ್ ಮತ್ತು ಲಖೀಂಪುರ ಜಿಲ್ಲೆಯ ಎಲ್ಲ ಕೇತ್ರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.
ಗ್ಯಾಂಗ್ ರೇಪ್ ಪ್ರಕರಣದಿಂದ ಹತ್ರಾಸ್, ಕೃಷಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರ ಪ್ರಕರಣದಿಂದ ಲಂಖೀಂಪುರ ದೇಶಾದ್ಯಂತ ಸುದ್ದಿಯಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತು ಬಿಜೆಪಿಗೆ ಈ ಪ್ರಕರಣದಿಂದ ಮುಜುಗರವಾಗಿತ್ತು. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ
Advertisement
Advertisement
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಈ ವಿಷಯಗಳು ಚರ್ಚೆ ಆಗಿತ್ತು. ಈ ಎರಡು ಪ್ರಕರಣಗಳಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಆರಂಭದ ಮುನ್ನಡೆ ಗಮನಿಸಿದಾಗ ಈ ಚುನಾವಣೆಯಲ್ಲಿ ಮತದಾರ ಈ ವಿಚಾರವನ್ನು ಪರಿಗಣಿಸದೇ ಮತ ಮಾಡಿರುವುದು ಸ್ಪಷ್ಟವಾಗುತ್ತದೆ.
Advertisement
Advertisement
ಬೆಳಗ್ಗೆ 10 ಗಂಟೆಯ ಟ್ರೆಂಡ್ ಪ್ರಕಾರ ಬಿಜೆಪಿ 270, ಎಸ್‌ಪಿ 106, ಬಿಸ್‌ಪಿ 3, ಕಾಂಗ್ರೆಸ್ 4, ಇತರರು 5 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ: ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ- ಯುಪಿಯಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ?
ಒಟ್ಟು 403 ಕ್ಷೇತ್ರಗಳ ಪೈಕಿ ಬಹುಮತಕ್ಕೆ 203 ಸ್ಥಾನಗಳ ಅಗತ್ಯವಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್‌ಪಿ 19, ಎಸ್‌ಪಿ+ಕಾಂಗ್ರೆಸ್ 54, ಇತರರು 18 ಸ್ಥಾನವನ್ನು ಗೆದ್ದಿದ್ದರು.