ಲಕ್ನೋ: ತಾಪಮಾನ ಕಡಿಮೆ ಆಗುವುದರ ಬಗ್ಗೆ ಖಚಿತವಿಲ್ಲ. ಆದರೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಉದ್ಯೋಗ ನೇಮಕಾತಿಯಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟಾಂಗ್ ನೀಡಿದರು.
ಇತ್ತೀಚೆಗೆ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಕೈರಾನಾದ ತಮಂಚವಾಡಿ ಪಕ್ಷದ ಅಭ್ಯರ್ಥಿ ಬೆದರಿಕೆ ಹಾಕಿದ್ದಾರೆ ಎಂದರೆ ಇನ್ನೂ ಬಿಸಿ ತಣ್ಣಗಿಲ್ಲ ಎಂದರ್ಥ. ಇದು ಮಾರ್ಚ್ 10ರ ನಂತರ ತಣ್ಣಗಾಗಲಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ರೈತರ ಮತ್ತು ಬಡವರ ಕಷ್ಟವನ್ನು ಅರ್ಥಮಾಡಿಕೊಳ್ಳದ ಸರ್ಕಾರ ರಚನೆಯಾದರೆ ಉಳಿದ ಪಕ್ಷಗಳಿಗೆ ಅವರ ಸ್ಥಾನವನ್ನು ತೋರಿಸುತ್ತೇವೆ ಎನ್ನುತ್ತಾರೆ. ಆದರೆ ತಾಪಮಾನ ಕಡಿಮೆ ಆಗುತ್ತದೆಯೋ ಇಲ್ಲವೋ ಎನ್ನುವುದರ ಕುರಿತು ಖಚಿತವಿಲ್ಲ, ಆದರೆ ನಮ್ಮ ಸರ್ಕಾರ ರಚನೆಯಾದರೆ, ಉದ್ಯೋಗ ನೇಮಕಾತಿ ನಡೆಯಲಿದೆ ಎಂದು ಭರವಸೆ ನೀಡಿದರು.
ಕೇಂದ್ರದ ಉಡಾನ್ ಯೋಜನೆಯನ್ನು ಟೀಕಿಸಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ತುಂಬಾ ದುಬಾರಿಯಾಗಿದೆ, ಯುವಕರು ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ ಇದಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷಗಳು ಕಳೆದಿವೆ. ಆದರೆ ಏನು ಅಭಿವೃದ್ಧಿಯಾಗಿಲ್ಲ. ಹವಾಯಿ ಚಪ್ಪಲಿ ಹಾಕಿಕೊಂಡವರು, ಏರೋಪ್ಲೇನ್‍ನಲ್ಲಿ ಕೂರುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಯಾವಾಗಿನಿಂದ ಡೀಸೆಲ್, ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿದೆಯೋ ಅಂದಿನಿಂದ ಬಡವರ ಟ್ರ್ಯಾಕ್ಟರ್, ಯುವಕರ ದ್ವಿಚಕ್ರವಾಹನ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ