ಲಕ್ನೋ: ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ರಾಜಕೀಯ ಪಕ್ಷಗಳು ಮೈತ್ರಿ ಲೆಕ್ಕಾಚಾರದಲ್ಲಿ ಮಗ್ನವಾಗಿದೆ. ಆಡಳಿತರೂಢ ಬಿಜೆಪಿಯನ್ನು ಸೋಲಿಸಲು ಈ ಬಾರಿಯೂ ಘಟಬಂಧನ್ ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿದ್ದು, ಸದ್ಯ ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಭಾರೀ ತಯಾರಿಗಳು ನಡೆಯುತ್ತಿದೆ.
Advertisement
ಈ ಬಾರಿ ಸಮಾಜವಾದಿ ಪಾರ್ಟಿ ಆಮ್ ಅದ್ಮಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಉತ್ಸುಕವಾಗಿದ್ದು, ಮಾಜಿ ಸಿಎಂ ಸಮಾಜವಾದಿ ಪಕ್ಷದ ನಾಯಕರ ಅಖಿಲೇಶ್ ಯಾದವ್ ಅವರನ್ನು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮಹತ್ವದ ಚರ್ಚೆಯ ಬಳಿಕ ಸಂಜಯ್ ಸಿಂಗ್, ಎಸ್‍ಪಿ ಜೊತೆಗೆ ಮಾಡಿಕೊಳ್ಳುತ್ತಿರುವ ಮೈತ್ರಿಯ ಬಹಿರಂಗವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್ ಕೆನ್ನೆಯಷ್ಟು ರಸ್ತೆ ನೈಸ್ ಆಗಿರಬೇಕು: ರಾಜೇಂದ್ರ ಸಿಂಗ್ ಗುಧಾ
Advertisement
Advertisement
ಆಮ್ ಆದ್ಮಿ ಸಮಾಜವಾದಿ ಪಕ್ಷದ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿಕೊಳ್ಳುತ್ತಿದ್ದು, ಸೀಟು ಹಂಚಿಕೆಯ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಹಿಂದೆಯೂ ಮೈತ್ರಿಯ ಬಗ್ಗೆ ಚರ್ಚೆ ನಡೆದಿತ್ತು ಅದನ್ನು ಮುಚ್ಚಿಡಲಾಗಿದೆ ಎಂದ ಅವರು, ಬಿಜೆಪಿಯ ದುರಾಡಳಿತ ಅಂತ್ಯಗೊಳಿಸುವುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
Advertisement
ಸೀಟು ಹಂಚಿಕೆಯ ಬಗ್ಗೆ ಗುಟ್ಟು ಬಿಟ್ಟುಕೊಡದ ಅವರು, ಆ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳುವುದಿಲ್ಲ ಎಂದಿದ್ದಾರೆ. ಅಲ್ಲದೇ ಇದೇ ವೇಳೆ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಂದಾಗಬೇಕಿದೆ ಎಂದು ಕರೆ ಕೊಟ್ಟಿದ್ದಾರೆ. ಎಸ್‍ಪಿ(SP) ಮತ್ತು ಆರ್‍ಎಲ್‍ಡಿ(RLD) ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಮಾತುಕತೆ ಕೊನೆಯ ಹಂತಕ್ಕೆ ತಲುಪಿದೆ ಮತ್ತು ಶೀಘ್ರದಲ್ಲೇ ಒಪ್ಪಂದವನ್ನು ಪ್ರಕಟಿಸಲಾಗುವುದು ಎಂದು ಸೂಚಿಸಿದ ಒಂದು ದಿನದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?
2017 ರ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷವಾದ ಓಂ ಪ್ರಕಾಶ್ ರಾಜ್‍ಭರ್ ಅವರ ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷ (SBSP) ನೊಂದಿಗೆ SP ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಎಸ್‍ಬಿಎಸ್‍ಪಿ ಜೊತೆಗೆ, ಭಾಗಿದರಿ ಸಂಕಲ್ಪ್ ಮೋರ್ಚಾ, ರಾಜ್‍ಭರ್ ನೇತೃತ್ವದ ಸಣ್ಣ ಸಣ್ಣ ಪಕ್ಷಗಳ ಗುಂಪು, ಎಸ್‍ಪಿ ನೇತೃತ್ವದ ಮೈತ್ರಿಕೂಟದ ಭಾಗವಾಗಲಿದೆ.