ಕೋಲಾರ: ಉತ್ತರಕಾಶಿಯ (Uttarkashi) ಸಿಲ್ಕ್ಯಾರ್ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರತೆಗೆಯಲು (Rescue Operation) ರಾಜ್ಯದ (Karnataka) 9 ಜನರ ಗಣಿಗಾರಿಕೆಯ ಎಂಜಿನಿಯರ್ ತಂಡ ಶ್ರಮಿಸಿದೆ. ಈ ತಂಡದಲ್ಲಿ ಬಂಗಾರಪೇಟೆಯ ಹೆಚ್.ಎಸ್ ವೆಂಕಟೇಶ್ ಪ್ರಸಾದ್ ಅವರು ಸಹ ಶ್ರಮಿಸಿದ್ದಾರೆ. ರಾಜ್ಯದಿಂದ ತೆರಳಿದ್ದ ತಂಡಕ್ಕೆ ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ವಿ.ಕೆ ಸಿಂಗ್ ಅವರು ವೆಂಕಟೇಶ್ ಪ್ರಸಾದ್ ಸೇರಿದಂತೆ ರಾಜ್ಯದ ಎಂಜಿನಿಯರ್‌ಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರದ ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನಾ ಪಡೆಯ ಅಧಿಕಾರಿಗಳ ಸೂಚನೆ ಮೇರೆಗೆ ಖಾಸಗಿ ಮೈನಿಂಗ್ ಕಂಪನಿಯೊಂದರ ಸಿಇಒ ಸೈರಿಕ್ ಜೋಸೆಫ್ ನೇತೃತ್ವದಲ್ಲಿ ಹೆಚ್.ಎಸ್ ವೆಂಕಟೇಶ್ ಪ್ರಸಾದ್, ಶ್ರೀಕಾಂತ್, ಅಮೋಘ್, ಅಸೀಪ್ಮುಲ್ಲಾ, ಏರೋನ್ಯಾಟಿಕ್ ಇಂಜಿನಿಯರ್‍ಗಳಾದ ಗಜಾನ, ಎನ್ವಿಡಿ ಸಾಯಿ, ರೇಗು ಹಾಗೂ ಸತ್ಯ ಎಂಬವರ ತಂಡ ಕಾರ್ಯ ನಿರ್ವಹಿಸಿತ್ತು. ಇವರೆಲ್ಲರ ಶ್ರಮದ ಫಲವಾಗಿ 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು. ಇದನ್ನೂ ಓದಿ: COP28 Summit: ದುಬೈ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ – ಹಿಂದೂಸ್ತಾನ್ ಹಮಾರ ಎಂದ ಭಾರತೀಯರು
Advertisement
ರಾಜ್ಯದ ಎಂಜಿನಿಯರ್‌ಗಳ ತಂಡ ನ.22 ರಂದು ಬೆಂಗಳೂರಿನಿಂದ ಡೆಹ್ರಾಡೂನ್‍ಗೆ ಹೊರಟು ಉತ್ತರಕಾಶಿ ತಲುಪಿದ್ದರು. ಬಳಿಕ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಚಿಂತನೆ ನಡೆಸಿ ಶ್ರಮಿಸಿದ್ದಾರೆ. ಬಳಿಕ ಬೆಟ್ಟದ ಮೇಲಿಂದ ಕಾರ್ಮಿಕರು ಸಿಲುಕಿಕೊಂಡಿರುವ ಸ್ಥಳಕ್ಕೆ ನೇರವಾಗಿ ಸುರಂಗ ಮಾರ್ಗ ಮಾಡಿ ಕಾರ್ಮಿಕರನ್ನು ಹೊರ ತೆಗೆಯಲು ನೆರವಾಗಿದ್ದಾರೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯೆ ಹೆಚ್.ಎಸ್ ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿ, ಭಾರತೀಯ ಸೇನೆಯ ಕರ್ನಲ್ ದೀಪಕ್ ಪಾಟೀಲ್ ಕರೆ ಮಾಡಿ ನಮ್ಮ ನೆರವು ಕೇಳಿದ್ದರು. ಇದರಿಂದ 9 ಎಂಜಿನಿಯರ್‌ಗಳ ತಂಡ ತಲುಪಿತ್ತು, ಮಾನವೀಯತೆಯ ದೃಷ್ಠಿಯಿಂದ ಇಂತಹ ಕೆಲಸ ಮಾಡಲು ಖುಷಿಯಾಯಿತು. ಈ ಕೆಲಸದ ನಿರ್ವಹಣೆಯಲ್ಲಿ ಮೂಂಚೂಣಿಯಲ್ಲಿ ಇರಬೇಕೆಂದು ದಿನದ 24 ಗಂಟೆಯೂ ಕೆಲಸ ಮಾಡಿದ್ದೆವೆ. ಇಲ್ಲಿ ಕೆಲಸ ಮಾಡಲು ಊಟ ಹಾಗೂ ನಿದ್ರೆ ಬಗ್ಗೆ ಗಮನವಿರಲಿಲ್ಲ. ಮುಖ್ಯವಾಗಿ ಸುರಂಗದಲ್ಲಿ ಸಿಲುಕಿದ್ದವರನ್ನು ಹೊರತೆಗೆಯುವ ಕೆಲಸ ನಮ್ಮಿಂದಲೇ ಆಗಬೇಕೆಂದು ಉತ್ಸಾಹದಿಂದ ಕೆಲಸ ಮಾಡಿದ್ದೇವೆ. ಈ ಕೆಲಸ ಯಶಸ್ವಿಯಾಗಿದ್ದರಿಂದ ಭಾರೀ ಸಂತೋಷವಾಗಿದೆ ಎಂದಿದ್ದಾರೆ.
Advertisement
ವೆಂಕಟೇಶ್ ಪ್ರಸಾದ್ ಅವರು 2015ರಲ್ಲಿ ಮೈನಿಂಗ್ ಎಂಜಿನಿಯರ್ ಆದ ಬಳಿಕ ಗುಜರಾತ್‍ನ ಎರಡು ಮೈನಿಂಗ್ ಕಂಪನಿಗಳಲ್ಲಿ 7 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಈಗ ಪ್ರಸ್ತುತ ಬೆಂಗಳೂರಿನ ಖಾಸಗಿ ಮೈನಿಂಗ್ ಕಂಪನಿ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ!