ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ (Silkyara Tunnel) ಕುಸಿತದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ಹೊರ ತರುವ ರಕ್ಷಣಾ ಕಾರ್ಯಾಚರಣೆ (Rescue Operation) ಮತ್ತಷ್ಟು ವಿಳಂಬವಾಗಿದೆ.
ಡ್ರೀಲಿಂಗ್ ಮಷಿನ್‍ನಲ್ಲಿ ಪದೇ ಪದೇ ದೋಷ ಕಂಡು ಬರುತ್ತಿರುವ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಡ್ರಿಲ್ಲಿಂಗ್ ಮಷಿನ್ ನಲ್ಲಿ ಕಂಡು ಬಂದಿರುವ ತಾಂತ್ರಿಕ ಸಮಸ್ಯೆಯನ್ನು ಪತ್ತೆ ಹಚ್ಚಿ ಸರಿಪಡಿಸಲು ವಿಶೇಷ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ಯಂತ್ರವನ್ನು ಸರಿಪಡಿಸಿದ ಬಳಿಕ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೇಗೆ ಕರೆತರುತ್ತಾರೆ ಗೊತ್ತಾ? – ಪ್ರಾತ್ಯಕ್ಷಿಕೆ ವಿಡಿಯೋ ನೋಡಿ..
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಪರಿಸ್ಥಿತಿ ಮೇಲ್ವಿಚಾರಣೆ ಮಾಡಿ ಕೊನೆಯ ಹಂತದ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತ ಗತಿಯಲ್ಲಿ ಮತ್ತು ಸಂಪೂರ್ಣ ಎಚ್ಚರಿಕೆಯಿಂದ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಯಂತ್ರವು ಇಲ್ಲಿಯವರೆಗೆ 46.8-ಮೀಟರ್ ಕೊರೆದಿದ್ದು, ಒಟ್ಟು 57-ಮೀಟರ್ ಕೊರೆದು ಪೈಪ್ ಗಳನ್ನು ಹಾಕುವ ಮೂಲಕ ಪ್ರತ್ಯೇಕ ದಾರಿಯನ್ನು ನಿರ್ಮಿಸಬೇಕಿದೆ. ಯಂತ್ರಕ್ಕೆ ಕಬ್ಬಿಣ ಕವಚ ಅಡ್ಡಿಯಾಗಿದ್ದು ಅದನ್ನು ಕೊರೆಯಲಾಗದ ಯಂತ್ರ ಕೆಟ್ಟು ನಿಲ್ಲುತ್ತಿದೆ.
ನವೆಂಬರ್ 12 ರಂದು ಸುರಂಗ ಕುಸಿದಿದ್ದು ಕಳೆದ 14 ದಿನಗಳ ಕಾರ್ಮಿಕರು ಟನಲ್ ಒಳಗೆ ಸಿಲುಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.