ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ (Uttarakhand’s Silkyari Tunnel) 17 ದಿನಗಳಿಂದ ಸಿಲುಕಿದ್ದ ಕಾರ್ಮಿಕರ (Workers) ರಕ್ಷಣಾ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಯಾವುದೇ ಕ್ಷಣದಲ್ಲಿ ಹೊರ ಬರುವ ಸಾಧ್ಯತೆಯಿದೆ.
ಕಾರ್ಮಿಕರು ರಕ್ಷಣೆಗೆ 41 ಅಂಬುಲೆನ್ಸ್‌ಗಳನ್ನು (Ambulance) ಸಿದ್ಧಗೊಳಿಸಲಾಗಿದೆ. ಸುರಂಗದಿಂದ ಹೊರ ಬಂದ ಕಾರ್ಮಿಕರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
Advertisement
#WATCH | Uttarkashi tunnel rescue | Due to the rescue operation, a temporary medical facility has been expanded inside the tunnel. After evacuating the trapped workers, health training will be done at this place. In case of any problem, 8 beds are arranged by the health… pic.twitter.com/ehAXzwd5dV
— ANI (@ANI) November 28, 2023
Advertisement
ರಕ್ಷಣಾ ಕಾರ್ಯದ ವೇಳೆ ಯಂತ್ರಗಳು ಕೈಕೊಟ್ಟಿದ್ದರಿಂದ ಕಾರ್ಯಾಚರಣೆ ವಿಳಂಬವಾಗಿತ್ತು. ಕೊನೆಗೆ ರ‍್ಯಾಟ್ ಹೋಲ್ ಮೈನಿಂಗ್ (Rat Hole Mining) ಮೂಲಕ 41 ಜನರನ್ನು ರಕ್ಷಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿತ್ತು. ಇದನ್ನೂ ಓದಿ: 50 ವರ್ಷ ದಾಟಿದೆ, ಒಂಟಿತನ ನಿಮ್ಮನ್ನು ಕಾಡುತ್ತಿರಬಹುದು – ರಾಗಾ ಬಗ್ಗೆ ಓವೈಸಿ ವ್ಯಂಗ್ಯ
Advertisement
#WATCH | Uttarkashi tunnel rescue | Union Minister General VK Singh (Retd), former advisor of PMO Bhaskar Khulbe and former Engineer-In-Chief and BRO DG Lieutenant General Harpal Singh (Retd) come out of the Silkyara tunnel.
Uttarakhand CM Pushkar Singh Dhami tweeted that the… pic.twitter.com/PonzSJanwK
— ANI (@ANI) November 28, 2023
Advertisement
ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿತ್ತು. ನವೆಂಬರ್ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದನ್ನೂ ಓದಿ: ಗೋಪೂಜೆ ವೇಳೆ ಬಂಗಾರದ ಸರ ನುಂಗಿದ ಹಸು – ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು