ಬೆಂಗಳೂರು: ಉತ್ತರಾಖಂಡ (Uttarakhand) ಸಹಸ್ತ್ರ ತಾಲ್ ಶಿಖರದ ಟ್ರೆಕ್ಕಿಂಗ್‍ನಲ್ಲಿ ಸಿಲುಕಿ ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byre Gowda) ಮಾಹಿತಿ ನೀಡಿದ್ದಾರೆ.
Update on #Uttarakhand #Trekkers
With the group of 13 at Dehradun on the way back to Bengaluru.
At the same time transportation of 9 bodies to Delhi by road has also started. Tomorrow morning those bodies will be flown to Bengaluru. pic.twitter.com/vcoR6HMdXP
— Krishna Byre Gowda (@krishnabgowda) June 6, 2024
Advertisement
ಈ ಸಂಬಂಧ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಇಂದು ಸಂಜೆ 5.50 ರ ವಿಮಾನದಲ್ಲಿ ಬದುಕುಳಿದ ಎಲ್ಲಾ 13 ಮಂದಿ ಚಾರಣಿಗರು ಬೆಂಗಳೂರಿಗೆ ಹಿಂದಿರುಗಲು ಟಿಕೆಟ್ ಕಾಯ್ದಿರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ
Advertisement
Advertisement
ಇನ್ನು ಮೃತ 9 ಜನ ಚಾರಣಿಗರ ದೇಹಗಳನ್ನು ಎಂಬಾಮಿಂಗ್‍ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮಿಂಗ್ ನಂತರ ಮೃತದೇಹಗಳನ್ನು ಅಂಬುಲೆನ್ಸ್‍ಗಳ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಮೃತ ದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ ಎಂದಿದ್ದಾರೆ.
Advertisement
Update on #Uttarakhand #Trekkers
We have shifted all 9 bodies from the airport to the hospital for embalming. After embalming bodies will be transported in ambulances to Delhi airport. We are booking space in tomorrow morning Delhi-Bengaluru flights.
As the flights are… pic.twitter.com/OlUuLFZqOq
— Krishna Byre Gowda (@krishnabgowda) June 6, 2024
ಈ ಪ್ರಕಾರ, ಈಗಾಗಲೇ ಡೆಹ್ರಾಡೂನ್ ತಲುಪಿರುವ ಬದುಕಿರುವ ಚಾರಣಿಗರು ಇಂದು ರಾತ್ರಿ 8:45 ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಟರ್ಮಿನಲ್ 1 ಗೆ ಸಚಿವ ಕೃಷ್ಣ ಬೈರೇಗೌಡ ಜೊತೆಗೆ 13 ಮಂದಿ ಚಾರಣಿಗರು ಬರುತ್ತಾರೆ.