ಡೆಹ್ರಾಡೂನ್: ಉತ್ತರಾಖಂಡ್‍ನಲ್ಲಿ ಭೀಕರ ಮೇಘ ಸ್ಫೋಟ ಸಂಭವಿಸಿದ ಪರಿಣಾಮ ಇದೀಗ ಸಾವಿನ ಸಂಖ್ಯೆ 52ಕ್ಕೆ ಏರಿಕೆ ಕಂಡಿದ್ದು, 5 ಮಂದಿ ನಾಪತ್ತೆಯಾಗಿದ್ದಾರೆ ಎಂದು ಉತ್ತರಾಖಂಡದ ಸರ್ಕಾರ ಮಾಹಿತಿ ನೀಡಿದೆ.
Advertisement
ಉತ್ತರಾಖಂಡ್‍ನಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆ ಭೂಕುಸಿತ ಸಂಭವಿಸಿದೆ. ಪರಿಣಾಮ ಗ್ಯಾಂಗ್ಟಾಕ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10 ಅನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಉತ್ತರಖಂಡದಿಂದ 90 ಕಿ.ಮೀ ದೂರವಿರುವ ಅಲ್ಮೋಡಾ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುತ್ತಲೇ ಇದ್ದು, ಗುಡ್ಡಗಳ ನಡುವೆ ಸಿಲುಕಿಕೊಂಡಿರುವ ಪ್ರವಾಸಿಗರ ಮತ್ತು ಸ್ಥಳೀಯರ ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉಧಮ್ ಸಿಂಗ್ ನಗರ ಮತ್ತು ಚಂಪಾವತ್ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ
Advertisement
Advertisement
ಉತ್ತರಾಖಂಡಕ್ಕೆ ಪ್ರವಾಸಕ್ಕೆ ತೆರಳಿದ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಕರ್ನಾಟಕದ ಪ್ರವಾಸಿಗರು ಕೂಡ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದು, ನಿನ್ನೆ ಸಾಕಷ್ಟು ಪ್ರವಾಸಿಗರ ರಕ್ಷಣೆ ಮಾಡಲಾಗಿದೆ. ಕನ್ನಡಿಗರು ಸಿಲುಕಿಕೊಂಡಿರುವ ಪ್ರದೇಶದಲ್ಲಿ ಭಾರೀ ಅನಾಹುತ ನಡೆಯುತ್ತಿದ್ದು, ನೋಡ ನೋಡ್ತಿದ್ದಂತೆ ರಸ್ತೆಗಳು ಬಿರುಕು ಬಿಡಲಾರಂಭಿಸಿದೆ ಜೊತೆಗೆ ಗುಡ್ಡಗಳು ಕುಸಿಯುತ್ತಿವೆ. ಕರ್ನಾಟಕ ಸೇರಿದಂತೆ ಅನ್ಯ ರಾಜ್ಯಗಳ ಪ್ರವಾಸಿಗರು ಕೂಡ ಅಪಾಯದಲ್ಲಿದ್ದಾರೆ. ರಸ್ತೆ ಬಿರುಕುಬಿಟ್ಟ ಹಿನ್ನೆಲೆ, ಸಾಲು, ಸಾಲು ಕಾರುಗಳನ್ನು ಪ್ರವಾಸಿಗರು ನಿಲ್ಲಿಸಿಕೊಂಡಿದ್ದು, ಉತ್ತರಾಖಂಡ್ ಸರ್ಕಾರ ರಸ್ತೆ ದುರಸ್ತಿ ಮಾಡಿ ಪ್ರವಾಸಿಗರ ರಕ್ಷಣೆಗೆ ಮುಂದಾಗಿದೆ. ಗುಡ್ಡಗಳ ನಡುವೆ ಸಿಲುಕಿಕೊಂಡಿರುವ ಪ್ರವಾಸಿಗರ ರಕ್ಷಣೆಗಾಗಿ ತಾತ್ಕಾಲಿಕ ರಸ್ತೆ ಮಾರ್ಗ ಪ್ರಾರಂಭಿಸಲಾಗಿದ್ದು, ಉತ್ತರ ಪ್ರದೇಶ, ಸಿಕ್ಕಿಂ ಮತ್ತು ಬಂಗಾಳದಲ್ಲೂ ಭೀಕರ ಮಳೆಯಿಂದಾಗಿ ನೂರಾರು ಜನ ನಿರಾಶ್ರಿತರಾಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಮಳೆ- ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ CM
Advertisement