ಡಹ್ರಾಡೂನ್: ಉತ್ತರಾಖಂಡದ ಕಾಂಗ್ರೆಸ್ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಾರ್ಯಕರ್ತರು ರುದ್ರಾಕ್ಷಿ ಹಾರ ಧರಿಸಲು ಕೊಟ್ಟಾಗ ಅದನ್ನು ನಿರಾಕರಿಸಿದ ವೀಡಿಯೋ ಒಂದು ವೈರಲ್ ಆಗುತ್ತಿದೆ. ಈ ವೀಡಿಯೋ ಮೂಲಕ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.
Advertisement
ಈ ವೀಡಿಯೋದಲ್ಲಿ ಕಾರ್ಯಕರ್ತರು ರುದ್ರಾಕ್ಷಿ ಹಾರ ಧರಿಸಲು ಕೊಡುತ್ತಿದ್ದಂತೆ ರಾಹುಲ್ ಗಾಂಧಿ ಅದನ್ನು ನಿರಾಕರಿಸುತ್ತಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಅಮಿತ್ ಮಾಳವೀಯ ವೀಡಿಯೋ ಪೋಸ್ಟ್ ಮಾಡಿ, ಈ ವ್ಯಕ್ತಿಗೆ ಚುನಾವಣೆಗೆ ಮುನ್ನ ದೇವಸ್ಥಾನಗಳ ನೆನಪಾಗುತ್ತದೆ. ತಾನು ಹಿಂದೂ ಎಂದು ಹೇಳಿಕೊಂಡು ತಿರುಗುವ ವ್ಯಕ್ತಿಗೆ ಇದೀಗ ಧರ್ಮಾಭಿಮಾನ ಉಕ್ಕಿ ಹರಿದಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಹಿಂದುತ್ವವಾದಿಗಳು ಅಧಿಕಾರಕ್ಕಾಗಿ ಯಾರನ್ನು ಬೇಕಾದ್ರೂ ಕೊಲ್ತಾರೆ: ರಾಹುಲ್ ಗಾಂಧಿ
Advertisement
कांग्रेस के चुनावी हिन्दू की हकीकत देख लीजिए। मंच पर मंत्रोच्चार चल रहा है और @RahulGandhi हाथ बांधे खड़े हैं। इतना ही नहीं जब इन्हें रुद्राक्ष की माला पहनाई जा रही थी तो इन्होंने साफ मना कर दिया।
संस्कार बोलते हैं pic.twitter.com/2R31LHTU0S
— BJP Uttarakhand (@BJP4UK) December 17, 2021
Advertisement
ಇತ್ತ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ಮುಗಿಬೀಳುತ್ತಿದ್ದಂತೆ ಅತ್ತ ಕಾಂಗ್ರೆಸ್ ಕಾರ್ಯಕರ್ತರು ತಿರುಗೇಟು ನೀಡುತ್ತಿದ್ದಾರೆ. ನರೇಂದ್ರ ಮೋದಿ ಗುಜಾರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಮೌಲ್ವಿಯೊಬ್ಬರು ಮುಸ್ಲಿಮರು ಧರಿಸುವ ಟೋಪಿಯನ್ನು ಧರಿಸುವಂತೆ ಕೇಳಿಕೊಂಡಾಗ ಅದನ್ನು ಧರಿಸಲು ನಿರಾಕರಿಸಿದ್ದರು. ಈ ವೀಡಿಯೋವನ್ನು ಕಾಂಗ್ರೆಸ್ ನಾಯಕರು ಪೋಸ್ಟ್ ಮಾಡಿಕೊಂಡು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ
Advertisement
ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಜೈಪುರದಲ್ಲಿ ನಡೆದ ಬೆಲೆ ಏರಿಕೆ ವಿರುದ್ಧದ ರ್ಯಾಲಿಯಲ್ಲಿ, ದೇಶದಲ್ಲಿ ಎರಡು ಪದಗಳಾದ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಘರ್ಷಣೆ ನಡೆಯುತ್ತಿದೆ. ಇದು ಒಂದು ಪದವಲ್ಲ. ಈ ಎರಡೂ ಪದಗಳಿಗೂ ಬೇರೆ ಬೇರೆ ಅರ್ಥವಿದೆ. ನಾನು ಹಿಂದೂ ಆದರೆ ಹಿಂದುತ್ವವಾದಿ ಅಲ್ಲ. ಹಿಂದೂ ಸತ್ಯವನ್ನು ಹುಡುಕುವ ಕೆಲಸ ಮಾಡುತ್ತದೆ. ಹಿಂದುತ್ವವಾದಿ ಅಧಿಕಾರವನ್ನು ಹುಡುಕುವ ಕಾರ್ಯವನ್ನು ಮಾಡುತ್ತದೆ. ಹಾಗಾಗಿ ನಾನೂ ಹಿಂದೂ ಎಂದಿದ್ದರು. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ