ಡೆಹ್ರಾಡೂನ್: ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ. ಇಂದಿರಾ ಗಾಂಧಿ (Indira Gandhi) ಹಾಗೂ ರಾಜೀವ್ ಗಾಂಧಿ (Rajiv Gandhi) ಅವರ ಹತ್ಯೆಗಳು ಆಕಸ್ಮಿಕವಷ್ಟೇ ಎಂದು ಉತ್ತರಾಖಂಡದ (Uttarakhand) ಸಚಿವ ಗಣೇಶ್ ಜೋಶಿ (Ganesh Joshi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಬುದ್ಧಿಮತ್ತೆಗೆ ವಿಷಾದಿಸುತ್ತೇನೆ. ಆದರೆ ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ. ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸಾವರ್ಕರ್ ಹಾಗೂ ಚಂದ್ರಶೇಖರ್ ಆಜಾದ್ ಅವರಂತಹ ಅನೇಕರು ಈ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಗಾಂಧಿ ಕುಟುಂಬದ ಸದಸ್ಯರೊಂದಿಗೆ ನಡೆದಿದ್ದು ಆಕಸ್ಮಿಕವಷ್ಟೇ. ಆಕಸ್ಮಿಕಕ್ಕೂ ಹಾಗೂ ಹುತಾತ್ಮಕ್ಕೂ ಬಹಳ ವ್ಯತ್ಯಾಸವಿದೆ ಎಂದರು.
Advertisement
Advertisement
ಶ್ರೀನಗರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ (Congress) ನಾಯಕನ ಭಾಷಣ ಕುರಿತು ಪ್ರತಿಕ್ರಿಯಿಸಿ, ಒಬ್ಬರ ಬುದ್ಧಿವಂತಿಕೆಯ ಮಟ್ಟಕ್ಕೆ ಅನುಗುಣವಾಗಿ ಮಾತ್ರ ಮಾತನಾಡಬಹುದು ಎಂದು ತಿಳಿಸಿದರು.
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಸುಗಮವಾಗಿ ಮುಗಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಲ್ಲುತ್ತದೆ. ಮೋದಿ ನೇತೃತ್ವದಲ್ಲಿ 370ನೇ ವಿಧಿಯನ್ನು ರದ್ದುಪಡಿಸದಿದ್ದರೆ ಹಾಗೂ ಜಮ್ಮು ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಮರಳದಿದ್ದರೆ ರಾಹುಲ್ ಗಾಂಧಿ (Rahul Gandhi) ಅವರು ಲಾಲ್ ಚೌಕ್‍ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
Advertisement
ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ತಮ್ಮ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯ ಬಗ್ಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದ ಕ್ಷಣಗಳನ್ನು ನೆನಪಿಸಿಕೊಂಡು, ಹಿಂಸಾಚಾರವನ್ನು ಪ್ರಚೋದಿಸುವವರಿಗೆ ಆ ನೋವು ಎಂದಿಗೂ ಅರ್ಥವಾಗುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!
ಆ ಕರೆ ಬಂದಾಗ ಆ ನೋವು ಮೋದಿ, ಅಮಿತ್ ಶಾ, ಬಿಜೆಪಿ ಮತ್ತು ಆರ್‌ಎಸ್‍ಎಸ್‍ನಂತಹ ಹಿಂಸಾಚಾರವನ್ನು ಪ್ರಚೋದಿಸುವವರಿಗೆ ಈ ನೋವು ಎಂದಿಗೂ ಅರ್ಥವಾಗುವುದಿಲ್ಲ. ಒಬ್ಬ ಸೈನಿಕನ ಕುಟುಂಬಕ್ಕೆ ಆ ನೋವು ಅರ್ಥವಾಗುತ್ತದೆ. ಪುಲ್ವಾಮಾದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಸಿಬ್ಬಂದಿಯ ಕುಟುಂಬಕ್ಕೆ ಅರ್ಥವಾಗುತ್ತದೆ. ಕಾಶ್ಮೀರಿಗಳು ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದರು. ಇದನ್ನೂ ಓದಿ: ನಾಗರಹಾವು ಹಿಡಿದು ಜೆಡಿಎಸ್ ಅಭ್ಯರ್ಥಿ ಗೆಲುವಿನ ಬಗ್ಗೆ ಭವಿಷ್ಯ ನುಡಿದ ವ್ಯಕ್ತಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k