ಲಕ್ನೋ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಗೆಗೆ ಆರತಿ ಮಾಡುತ್ತಿದ್ದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಈ ಪೋಸ್ಟ್ ಗೆ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ‘ಚುನವಿ ಹಿಂದೂ’ ಎಂದು ವ್ಯಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡಿದಾಗ ಪ್ರಸಿದ್ಧ ಹರ್ ಕಿ ಪೌರಿ ಘಾಟ್‍ನಲ್ಲಿ ‘ಗಂಗಾ ಆರತಿ’ ಮಾಡಿದ್ದು, ಆ ವೀಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಟ್ವೀಟ್ ನೋಡಿದ ತಜೀಂದರ್ ಪಾಲ್ ಸಿಂಗ್ ಅವರು ರೀಟ್ವೀಟ್ ಮಾಡಿ ‘ಚುನವಿ ಹಿಂದೂ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫೆ.19 ರಿಂದ 28ವರೆಗೆ ದ.ಕ ಜಿಲ್ಲೆಯಲ್ಲಿ ಕಡತ ವಿಲೇವಾರಿ, ಕಂದಾಯ ಮೇಳ
Advertisement
Advertisement
ಗಂಗೆಗೆ ಆರತಿ ಸಲ್ಲಿಸುವ ವೇಳೆ ರಾಹುಲ್ ಅವರಿಗೆ ಅರ್ಚಕರೊಬ್ಬರು ಮಾರ್ಗದರ್ಶನ ನೀಡುತ್ತಿರುವ ವೀಡಿಯೋ ತುಣುಕನ್ನು ಹಂಚಿಕೊಂಡಿರುವ ಬಗ್ಗಾ ಅವರು, ರಾಹುಲ್ ‘ಚುನವಿ ಹಿಂದೂ’ ಆಗಿದ್ದಾರೆ. ಅವರು ಹೆಚ್ಚು ತರಬೇತಿ ಪಡೆಯಬೇಕು ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
Advertisement
जब आप चुनावी हिन्दू हो तो आपको ट्रेनिंग लेनी पड़ती है pic.twitter.com/HeJ6JI8ZCa
— Tajinder Pal Singh Bagga (@TajinderBagga) February 6, 2022
Advertisement
ನಿನ್ನೆ ಉತ್ತರಾಖಂಡದಲ್ಲಿ ಗಂಗೆ ಪೂಜೆ ಮಾಡಲು ಬಂದಿದ್ದ ರಾಹುಲ್ ಅವರನ್ನು ನೋಡಲು ಅಪಾರ ಜನಸಮೂಹ ನೆರೆದಿತ್ತು. ಆಗ ಅವರು ‘ಹರ್ ಹರ್ ಗಂಗೆ’ ಘೋಷಣೆಗಳನ್ನು ಕುಗುತ್ತಿದ್ದು, ಈ ವೇಳೆ ರಾಹುಲ್ ‘ಗಂಗಾ ಆರತಿ’ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ಮೂರು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಾಹುಲ್ ಅವರು ತಾವು ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದು, ಗಂಗಾಜಿಗೆ ನಮಸ್ಕಾರಗಳು! ಉತ್ತರಾಖಂಡದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದರು.
ಕಳೆದ ತಿಂಗಳು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ಗಾಂಧಿ ಕುಟುಂಬವನ್ನು ಧರ್ಮದ ವಿಚಾರದಲ್ಲಿ ತಿರುಗೇಟು ಕೊಟ್ಟಿದ್ದರು. ಯೋಗಿ ಅವರು, ತಮ್ಮನ್ನು ‘ಆಕಸ್ಮಿಕ ಹಿಂದೂಗಳು’ ಎಂದು ಕರೆದುಕೊಳ್ಳುವವರು, ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಅವರು ಹಿಂದೂಗಳಾಗುತ್ತಾರೆ ಎಂದು ಕಿಡಿಕಾರಿದ್ದರು.
ಉತ್ತರಾಖಂಡದ ಉಧಮ್ ಸಿಂಗ್ ನಗರದ ಕಿಚ್ಚಾ ಮಂಡಿಯಲ್ಲಿ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದರು. ನಮ್ಮ ದೇಶದಲ್ಲಿ ಪ್ರಧಾನಿಯಿಲ್ಲ, ಅದರ ಬದಲು ಜನರು ತಮ್ಮ ಮಾತುಗಳನ್ನು ಕೇಳಬೇಕು ಎನ್ನುವ ರಾಜನಿದ್ದಾನೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಭಾರತಕ್ಕೆ ಇಂದು ಪ್ರಧಾನಿ ಇಲ್ಲ, ಏನೇ ಮಾಡಿದ್ರೂ ಜನ ಸುಮ್ಮನಿರಬೇಕೆನ್ನುವ ರಾಜನಿದ್ದಾನೆ: ರಾಗಾ
ಪ್ರಧಾನಿ ದೇಶದ ಜನರಿಗಾಗಿ ಕೆಲಸ ಮಾಡಬೇಕು. ಜನರ ಮಾತನ್ನು ಕೇಳಬೇಕು. ನರೇಂದ್ರ ಮೋದಿ ಪ್ರಧಾನಿ ಅಲ್ಲ, ಅವರು ರಾಜ. ಅವರು ಸುಮಾರು ಒಂದು ವರ್ಷ ರೈತರನ್ನು ಕಡೆಗಣಿಸಿ ನಂತರ ಪರಿಹಾರವನ್ನು ಕೊಟ್ಟರು. ಒಬ್ಬ ರಾಜನು ಕೂಲಿ ಕಾರ್ಮಿಕರ ಜೊತೆ ಮಾತನಾಡುವುದಿಲ್ಲ. ಅವರ ಮಾತುಗಳನ್ನು ಕೇಳುವುದಿಲ್ಲ. ತನ್ನದೇ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಟೀಕಿಸಿದ್ದರು.