– ಪರಸ್ಪರ ಸಹೋದರತ್ವ ಮತ್ತು ಪ್ರೀತಿ ತುಂಬುವ ಕಾರ್ಯಕ್ರಮ: ರಾಜ್ಯಪಾಲರು
ಬೆಂಗಳೂರು: ಇಲ್ಲಿನ ರಾಜಭವನದಲ್ಲಿಂದು ಉತ್ತರಾಖಂಡ ಸಂಸ್ಥಾಪನಾ ದಿನಾಚರಣೆಯನ್ನು (Uttarakhand Diwas) ಆಚರಿಸಲಾಯಿತು. ಉತ್ತರಾಖಂಡ ರಾಜ್ಯದ ಕಲೆ, ಸಂಸ್ಕೃತಿ (Uttarakhand Culture) ಮತ್ತು ಸಂಪ್ರದಾಯಗಳನ್ನ ಪ್ರದರ್ಶಿಸುವ ವರ್ಣರಂಜಿತ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.
Advertisement
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು, ಉತ್ತರಾಖಂಡ (Uttarakhand) ರಾಜ್ಯವು ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಸಾಹಿತ್ಯ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಈ ರಾಜ್ಯವು ತನ್ನ ನೈಸರ್ಗಿಕ ಸೌಂದರ್ಯ, ದೇವಾಲಯಗಳು ಮತ್ತು ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಉತ್ತರಾಖಂಡವು ತನ್ನ ಭೌಗೋಳಿಕ ಸ್ಥಳ, ಹವಾಮಾನ, ನೈಸರ್ಗಿಕ ದೃಶ್ಯಾವಳಿ ಮತ್ತು ಸಂಪನ್ಮೂಲಗಳ ಸಮೃದ್ಧಿಯಿಂದಾಗಿ ದೇಶದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ತೀರ್ಥಯಾತ್ರೆ ಮತ್ತು ಪ್ರವಾಸೋದ್ಯಮದ (Tourism) ದೃಷ್ಟಿಯಿಂದ ಉತ್ತರಾಖಂಡ ರಾಜ್ಯವು ವಿಶೇಷ ಪ್ರಾಮುಖ್ಯತೆ ಹೊಂದಿದೆ ಎಂದು ಹೇಳಿದರು.
Advertisement
Advertisement
ಬದರಿನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಯಾತ್ರಾ ಮಾರ್ಗಗಳಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ವಿಷ್ಣುಪ್ರಯಾಗ, ನಂದಪ್ರಯಾಗ, ಕರ್ಣಪ್ರಯಾಗ, ರುದ್ರಪ್ರಯಾಗ ಮತ್ತು ದೇವಪ್ರಯಾಗ, ಪಂಚಪ್ರಯಾಗ ಎಂಬ ಹೆಸರಿನ ಪ್ರಸಿದ್ಧ 5 ಪವಿತ್ರ ಸಂಗಮ ಸ್ಥಳಗಳು ಇಲ್ಲಿವೆ. ಇವುಗಳ ಹೊರತಾಗಿ, ಹೇಮಕುಂಡ್ ಸಾಹಿಬ್ ಸಿಖ್ಖರಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿ ವಿಶೇಷವಾಗಿ ಮುಖ್ಯವಾಗಿದೆ. ಇಲ್ಲಿನ ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಮನ್ವಯ ಮತ್ತು ಸಾಮರಸ್ಯದ ದೃಷ್ಟಿ ಗೋಚರಿಸುತ್ತದೆ. ಹರಿದ್ವಾರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ಆಯೋಜಿಸಲಾಗುತ್ತದೆ. ಇದರಲ್ಲಿ ಭಾರತ ಮತ್ತು ವಿದೇಶಗಳಿಂದ ಕೋಟಿಗಟ್ಟಲೆ ಭಕ್ತರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
Advertisement
ರಾಜ್ಯವು ಜಲವಿದ್ಯುತ್ ಉತ್ಪಾದನೆಗೆ ಸಂಪೂರ್ಣ ಸಾಮರ್ಥ್ಯ ಹೊಂದಿದೆ. ಯಮುನಾ, ಭಾಗೀರಥಿ, ಅಲಕನಂದಾ, ಮಂದಾಕಿನಿ, ಸರಯು, ಗೌರಿ, ಕೋಸಿ ಮತ್ತು ಕಾಳಿ ನದಿಗಳಲ್ಲಿ ಅನೇಕ ಜಲವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗಿದ್ದು, ಇವುಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರಾಜ್ಯವು ಅಪರೂಪದ ಜೀವವೈವಿಧ್ಯದಿಂದ ಸಮೃದ್ಧವಾಗಿದೆ, 175 ಅಪರೂಪದ ಸುಗಂಧ ಮತ್ತು ಔಷಧೀಯ ಸಸ್ಯಗಳು ರಾಜ್ಯದಲ್ಲಿ ಕಂಡುಬರುತ್ತವೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಜೊತೆಗೆ ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಉತ್ತರಾಖಂಡದ ಸಂಸ್ಥಾಪನಾ ದಿನವನ್ನು ಈ ದಿನ ದೇಶದ ಎಲ್ಲಾ ರಾಜಭವನಗಳಲ್ಲಿ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಪರಸ್ಪರ ಸಹೋದರತ್ವ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಮಲ್ ಪಂಥ್ ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಉತ್ತರಾಖಂಡ ರಾಜ್ಯದ ಪ್ರತಿನಿಧಿಯಾದ ಹೇಮಚಂದ್ರ ಜೋಶಿ, ಮುಂತಾದ ಗಣ್ಯರು ಉಪಸ್ಥಿತರಿದ್ದರು.