ಡೆಹ್ರಾಡೂನ್: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ್ನು ಪೊಲೀಸ್ ಅಧಿಕಾರಿಯೊಬ್ಬರು ಕಾಪಾಡಿರುವ ಘಟನೆ ಉತ್ತರಾಖಂಡ್‍ನಲ್ಲಿ ನಡೆದಿದೆ.
ಈ ಘಟನೆ ಉತ್ತರಾಖಂಡ್‍ನ ಹರಿದ್ವಾರದಲ್ಲಿ ನಡೆದಿದ್ದು, ಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಕಾಪಾಡಲು ಪೊಲೀಸ್ ಅಧಿಕಾರಿಯೊಬ್ಬರು ಲೈಫ್ ಜಾಕೆಟ್ ಧರಿಸಿ ನದಿಗೆ ಹಾರಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಉತ್ತರಾಖಂಡ್ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
हरियाणा निवासी विशाल #haridwar स्थित कांगड़ा घाट पर नहाने गया था। तभी उसका पैर फिसला और वह गंगा के तेज बहाव में बहने लगा है। इसी दौरान वहां मौजूद #UttarakhandPolice के जवान #सन्नी की नजर उस पर पड़ी। सन्नी ने तत्काल गंगा में कूदकर युवक को कड़ी मशक्कत के बाद सकुशल बचा लिया। pic.twitter.com/g1qhBYKhlF
— Uttarakhand Police (@uttarakhandcops) July 20, 2019
Advertisement
ನದಿಗೆ ಹಾರಿದ ಪೊಲೀಸ್ ಅಧಿಕಾರಯನ್ನು ಸನ್ನಿ ಎಂದು ಗುರುತಿಸಲಾಗಿದೆ. ಇನ್ನು ಹರಿಯಾಣದ ನಿವಾಸಿಯಾದ ವಿಶಾಲ್ ಕಾಂಗ್ರಾ ಘಾಟ್‍ನಲ್ಲಿ ಸ್ನಾನ ಮಾಡಲು ಹೋಗಿ ಸಮತೋಲನ ಕಳೆದುಕೊಂಡು ನದಿಯಲ್ಲಿ ಬಿದ್ದಿದ್ದಾನೆ. ವೇಗದಿಂದ ಹರಿಯುತ್ತಿದ್ದ ಕಾರಣ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ.
Advertisement
https://twitter.com/subodhh9879/status/1152999979054768131
Advertisement
ಈ ಸಮಯದಲ್ಲಿ ಅಲ್ಲೇ ಇದ್ದ ಸನ್ನಿಯವರು ಯುವಕನನ್ನು ಕಾಪಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವೀಡಿಯೊವನ್ನು 55,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಮತ್ತು ಪೊಲೀಸ್ ಅಧಿಕಾರಿಯ ಧೈರ್ಯವನ್ನು ಶ್ಲಾಘಿಸಿ ತುಂಬಾ ಜನ ಕಮೆಂಟ್ ಮಾಡಿದ್ದಾರೆ.
ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗಿದ್ದು, ಗಂಗಾ ನದಿಯ ನೀರಿನ ಮಟ್ಟವನ್ನು ಹೆಚ್ಚಾಗಿದೆ. ಈಗ ಅಲ್ಲಿ ನಡೆಯುತ್ತಿರುವ ಕನ್ವರ್ ಯಾತ್ರೆಯಲ್ಲಿ ಜನರು ನೀರಿಗೆ ಇಳಿಯದಂತೆ ನೋಡಿಕೊಳ್ಳಲು ಜಲ ಪೊಲೀಸ್ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‍ಡಿಆರ್‍ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.