ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ (Karnataka) ನಾಲ್ವರು ಸೇರಿ 9 ಮಂದಿ ಚಾರಣಿಗರು ಮೃತಪಟ್ಟಿದ್ದಾರೆ.
ಕರ್ನಾಟಕದಿಂದ ಚಾರಣಕ್ಕೆ ಹೊರಟಿದ್ದ ಸುಜಾತಾ ಮುಂಗುರವಾಡಿ (52), ಆಶಾ ಸುಧಾಕರ್ (72), ಸಿಂಧು ವಕೆಲಂ (45), ವಿನಾಯಕ ಮುಂಗುರವಾಡಿ, ಚಿತ್ರಾ ಪ್ರಣೀತ್ ಮೃತಪಟ್ಟಿದ್ದಾರೆ.
Advertisement
ಬೆಂಗಳೂರಿನಿಂದ 18, ಪುಣೆಯಿಂದ ಒಬ್ಬರು ಜೊತೆ ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳು ತೆರಳಿದ್ದರು. ಉತ್ತರಾಖಂಡದ ಸಹಸ್ತ್ರ ತಾಲ್‌ನಲ್ಲಿ (Sahastra Tal) ಸಿಲುಕಿದ್ದ ಚಾರಣಿಗರ ಪೈಕಿ ಸೌಮ್ಯಾ ಕನಾಲೆ, ಶೀನಾ ಲಕ್ಷ್ಮಿ, ಎಸ್.ಶಿವ ಜ್ಯೋತಿ, ಅನಿಲ್ ಜಮತಿಗೆ ಅರುಣಾಚಲ ಭಟ್, ಭರತ್ ಬೊಮ್ಮನ ಗೌಡರ್, ಮಧು ಕಿರಣ್ ರೆಡ್ಡಿ, ಜಯಪ್ರಕಾಶ್ ಬಿ.ಎಸ್. ಅವರನ್ನು ರಕ್ಷಣೆ ಮಾಡಲಾಗಿದೆ.
Advertisement
STORY | Four trekkers from Karnataka die in Uttarakhand due to extreme weather conditions
READ: https://t.co/7HJriAzL1C
VIDEO | “Yesterday around 4:30 PM, the trekking association informed the disaster management (department) that some people died due to bad weather. Upon… pic.twitter.com/ktoaSgrw1I
— Press Trust of India (@PTI_News) June 5, 2024
ನಾಟಿನ್-ಭಟ್ವಾಡಿಯಲ್ಲಿ ಎಸ್.ಸುಧಾಕರ್, ವಿನಯ್ ಎಂ.ಕೆ, ವಿವೇಕ್ ಶ್ರೀಧರ್ ಚಾರಣಿಗರನ್ನು ರಕ್ಷಿಸಲಾಗಿದೆ. ಎ.ನವೀನ್, ರಿತಿಕಾ ಜಿಂದಾಲ್ ಅವರು ಸಿಲ್ಲಾ ಗ್ರಾಮವನ್ನು ತಲುಪಿದ್ದಾರೆ.
Advertisement
9 ಚಾರಣಿಗರು ಮೃತಪಟ್ಟಿದ್ದನ್ನು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿ ದೇವೇಂದ್ರ ಪಟವಾಲ್ ಖಚಿತ ಪಡಿಸಿದ್ದಾರೆ. ಚಾರಣವನ್ನು ಮೌಂಟೇನಿಯರಿಂಗ್ ಫೌಂಡೇಶನ್ ಆಯೋಜಿಸಿತ್ತು. ಗಢವಾಲ್ ಜಿಲ್ಲಾಧಿಕಾರಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು ಭಾರತೀಯ ವಾಯುಪಡೆಯ ನೆರವನ್ನು ಪಡೆಯಲಾಗುತ್ತಿದೆ.