ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಲೋಕಸಭಾ ಚುನಾವಣೆಗೆ (Loksabha Election) ಅಭ್ಯರ್ಥಿ ಘೋಷಣೆ ಆಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು (Vishweshwar Hegde Kageri) ಹೇಳಿದ್ದಾರೆ.
ಬಿಜೆಪಿಯಿಂದ (BJP) ಮುಂದೆ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೆನರಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲಾಗಿದೆ. ಆ ಅಭ್ಯರ್ಥಿಯೇ ಬಿಜೆಪಿಯ ಕಮಲ ಎಂದಿದ್ದಾರೆ. ಈ ಕಮಲಕ್ಕಾಗಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿ ಗೆಲ್ಲಿಸುತ್ತಾರೆ ಎಂದು ತಿಳಿಸಿದರು.
Advertisement
Advertisement
ಉತ್ತರ ಕನ್ನಡ ಜಿಲ್ಲೆಯ ಸಂದದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ರಾಜಕೀಯವಾಗಿ ನಿವೃತ್ತಿಯಾಗುವುದಾಗಿ ಈ ಹಿಂದೆಯೇ ಹೇಳಿಕೊಂಡಿದ್ದು, ಪಕ್ಷದ ಸಂಘಟನೆಯಾಗಲಿ ಅಥವಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ದೂರ ಉಳಿದಿದ್ದರು. ಹೀಗಾಗಿ ಬಿಜೆಪಿ ಪಕ್ಷದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಯಾರು ಸ್ಪರ್ಧಿಗಳಾಗುತ್ತಾರೆ ಅಥವಾ ಜೆಡಿಎಸ್‍ಗೆ ಸ್ಥಾನ ಬಿಟ್ಟುಕೊಡುತ್ತಾ ಎಂಬುದು ಕುತೂಹಲ ಮೂಡಿಸಿತ್ತು. ಇದನ್ನೂ ಓದಿ: ಹಿಂದೂಗಳು ನಮಸ್ಕಾರ ಮಾಡ್ಬೇಕು ಅಂತ ನಾನು ಹೇಳಿದ್ದೀನಾ? – ಸಚಿವ ಜಮೀರ್ ಪ್ರಶ್ನೆ
Advertisement
Advertisement
ಈ ನಡುವೆ ಶಿರಸಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೆಸರು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಕಾರವಾರಕ್ಕೆ ಆಗಮಿಸಿದ ಕಾಗೇರಿಯವರು ಈ ರೀತಿ ಹೇಳುವ ಮೂಲಕ ತೀವ್ರ ಕುತೂಹಲ ಹುಟ್ಟಿಸಿದ್ದಾರೆ.