ಕಾರವಾರ: ಒಂದೇ ಕುಟುಂಬದ ನಾಲ್ವರಿಗೆ ಸೋಂಕು ಹರಡಿದ್ದು ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡದಲ್ಲಿ ರೋಗಿ ನಂಬರ್ 36ರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಂದೇ ರೋಗಿಯಿಂದ ಮೂವರಿಗೆ ಕೊರೊನಾ ಹರಡಿದೆ. ಚಿಕ್ಕಬಳ್ಳಾಪುರದ ರೋಗಿಯಿಂದ ಐವರಿಗೆ ಕೊರೊನಾ ಸೋಂಕು ಬಂದಿದೆ.
Advertisement
ಉತ್ತರ ಕನ್ನಡ ಮೂಲದ ವ್ಯಕ್ತಿ ಮಾರ್ಚ್ 21 ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿ ಭಟ್ಕಳಕ್ಕೆ ತೆರಳಿದ್ದರು. ಇವರ ಸಂಪರ್ಕಕ್ಕೆ ಬಂದಿದ್ದರಿಂದ 54 ವರ್ಷದ ಪತ್ನಿ(ರೋಗಿ 65), 28 ವರ್ಷದ ಮಗಳು(ರೋಗಿ 28), 23 ವರ್ಷದ ಮಗಳು(ರೋಗಿ) ಕೊರೊನಾ ಪೀಡಿತರಾಗಿದ್ದು ಕುಟುಂಬದ ಎಲ್ಲ ಸದಸ್ಯರನ್ನು ಉತ್ತರ ಕನ್ನಡದ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ರೋಗಿ 68: 21 ವರ್ಷದ ಪುರುಷರೊಬ್ಬರು, ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 17ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನೆಲೆಯಿರುತ್ತದೆ ಮತ್ತು ರೋಗಿ-25ರ(ಮಗ) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
Advertisement
ರೋಗಿ 69: 23 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ 70: 70 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 71: 32 ವರ್ಷದ ಮಹಿಳೆ ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 72: 38 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ 73: 18 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 74: 63 ವರ್ಷದ ಮಹಿಳೆ ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಮಾಡಿ ಮಾರ್ಚ್ 16ರಂದು ಭಾರತಕ್ಕೆ ಮರಳಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.