ಲಕ್ನೋ: ದೇಶ ವಿರೋಧಿ ಹೇಳಿಕೆಯ ಸಂದೇಶವು ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ್ದಕ್ಕೆ ಅಡ್ಮಿನ್‍ನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಬರೌಟಿನ ಬಾಮ್‍ನೌಲಿ ಗ್ರಾಮದ ನಯಿಮ್ ಬಂಧಿತ ಆರೋಪಿ. ಅದೇ ಗ್ರಾಮದ ದೀಪಕ್ ಕುಮಾರ್ ಈ ಕುರಿತು ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ್ದ ಪೊಲೀಸರು ವಾಟ್ಸಪ್ ಗ್ರೂಪ್ ಅಡ್ಮಿನ್ ನಯಿಮ್‍ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್
Advertisement
ನಯಿಮ್ ಕ್ರಿಯೇಟ್ ಮಾಡಿದ್ದ ವಾಟ್ಸಪ್ ಗ್ರೂಪ್‍ನಲ್ಲಿ, ಸದಸ್ಯ ಜೋಷ್ ಎಂಬವನು ದೇಶ ವಿರೋಧಿ ಹೇಳಿಕೆಯ ಸಂದೇಶ ನೀಡಿದ್ದಾನೆ. ಸೂಕ್ತ ಆಧಾರದ ಮೇಲೆ ದೀಪಕ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಗ್ರೂಪ್ ಅಡ್ಮಿನ್ ಯಾರು ಅಂತಾ ಪತ್ತೆ ಹಚ್ಚಿ ನನಿಮ್‍ನನ್ನು ಬಂಧಿಸಿದ್ದಾರೆ.
Advertisement
ಆರೋಪಿ ನಯಿಮ್ ಸ್ವಗ್ರಾಮದಲ್ಲಿ ಜನ ಸೇವಾ ಕೇಂದ್ರ ನಡೆಸುತ್ತಿದ್ದ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನೋರ್ವ ಆರೋಪಿ ಜೋಷ್‍ನ ಬಂಧನಕ್ಕಾಗಿ ಬಲೆ ಬೀಸಿದ್ದಾರಂತೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews