– ಸೌದಿಯಲ್ಲಿ ಕುಳಿತು ವೀಡಿಯೋ ನೋಡಿದ ಪತಿ
ಲಕ್ನೋ: ಹಣದ ಆಸೆಗಾಗಿ ತನ್ನ ಹೆಂಡತಿಯನ್ನು ಅತ್ಯಾಚಾರ ಮಾಡಲು ಸ್ನೇಹಿತರಿಗೆ ಅನುಮತಿಸಿದ ಘಟನೆಯೊಂದು ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್‌ನಲ್ಲಿ ನಡೆದಿದೆ.
ಸಂತ್ರಸ್ತೆಯನ್ನು ಉತ್ತರ ಪ್ರದೇಶ ಮೂಲದ 35 ವರ್ಷದ ಮಹಿಳೆ ಗುರುತಿಸಲಾಗಿದೆ.ಇದನ್ನೂ ಓದಿ:
2010ರಲ್ಲಿ ಬುಲಂದ್‌ಶಹರ್ ಮೂಲದ ವ್ಯಕ್ತಿಯ ಜೊತೆ ಮಹಿಳೆಯ ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಗರ್ಭಿಣಿಯಾಗಿದ್ದು, ಪತಿ ಸೌದಿ ಅರೇಬಿಯಾದಲ್ಲಿ (Saudi Arabia) ಆಟೋಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಭಾರತಕ್ಕೆ ಬರುತ್ತಾರೆ ಎಂದು ತಿಳಿಸಿದ್ದರು.
ತನ್ನ ಮೇಲಾದ ದೌರ್ಜನ್ಯದ ವಿರುದ್ಧ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ನನ್ನ ಪತಿಯ ಸ್ನೇಹಿತರಿಬ್ಬರು ಆತ್ಯಾಚಾರ ಎಸಗಿದ್ದಾರೆ. ಹಣದ ಆಸೆಗಾಗಿ ನನ್ನ ಪತಿ ಇಬ್ಬರು ಸ್ನೇಹಿತರಿಗೆ ಆತ್ಯಾಚಾರ ಮಾಡುವಂತೆ ಅನುಮತಿ ನೀಡಿದ್ದ. ಜೊತೆಗೆ ಆ ಇಬ್ಬರು ಕೃತ್ಯದ ವಿಡಿಯೋಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ. ನನ್ನ ಪತಿ ಸೌದಿ ಅರೇಬಿಯಾದಲ್ಲಿ ಕುಳಿತು ವಿಡಿಯೋಗಳನ್ನು ನೋಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಆಕೆಯ ಪತಿ ಮನೆಗೆ ಬಂದಿದ್ದು, ಆ ಸಮಯದಲ್ಲಿಯೂ ತನ್ನ ಇಬ್ಬರು ಸ್ನೇಹಿತರಿಗೆ ಅತ್ಯಾಚಾರ ಮಾಡಲು ಅವಕಾಶ ನೀಡಿದ್ದ. ಆತ ಸೌದಿಯಲ್ಲಿದ್ದಾಗಲೂ, ಭಾರತಕ್ಕೆ ಬಂದರೂ ಕೂಡ ಅತ್ಯಾಚಾರ ಮುಂದುವರೆದಿತ್ತು. ಈ ಬಗ್ಗೆ ಕೇಳಿದಾಗ ತನಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ನನ್ನ ಮಕ್ಕಳ ಸಲುವಾಗಿ ನಾನು ಮೌನವಾಗಿದ್ದೆ ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ಈ ಕುರಿತು ಮಹಿಳೆಯ ಸಹೋದರ ಮಾತನಾಡಿದ್ದು, ಇತ್ತೀಚೆಗೆ ತನ್ನ ಸಹೋದರಿಯ ಪತಿ ಮನೆಗೆ ಬಂದಾಗ ಆಕೆಯ ಸಂಬಂಧದ ಬಗ್ಗೆ ತಿಳಿದುಬಂದಿದೆ ಎಂದಿದ್ದಾರೆ.
ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮಹಿಳೆಯ ಪತಿ ಹಾಗೂ ಆತನ ಸ್ನೇಹಿತರನ್ನು ಬಂಧಿಸಬೇಕಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.ಇದನ್ನೂ ಓದಿ:
: